ಇಂಗ್ಲೆಂಡ್ ರಾಣಿಗೆ ಸೋಷಿಯಲ್ ಮೀಡಿಯಾ ಮ್ಯಾನೇಜರ್ ಬೇಕಾಗಿದ್ದಾರೆ, ಕೈ ತುಂಬಾ ಸಂಬಳ

Published : May 21, 2019, 08:19 PM IST
ಇಂಗ್ಲೆಂಡ್ ರಾಣಿಗೆ ಸೋಷಿಯಲ್ ಮೀಡಿಯಾ ಮ್ಯಾನೇಜರ್ ಬೇಕಾಗಿದ್ದಾರೆ, ಕೈ ತುಂಬಾ ಸಂಬಳ

ಸಾರಾಂಶ

ಇಂಗ್ಲೆಂಡ್ ನ ಕ್ವೀನ್ ಎಲಿಜಬೆತ್‌ಗೆ ಡಿಜಿಟಲ್ ಕಮ್ಯುನಿಕೇಷನ್ ಆಫೀಸರ್ ಒಬ್ಬರು ಬೇಕಾಗಿದ್ದಾರೆ. ಆಯ್ಕೆಯಾದವರಿಗೆ ಕೈ ತುಂಬಾ ಸಂಬಳ ಸಿಗುತ್ತೆ.  

ಬೆಂಗಳೂರು, [ಮೇ.21]: ಸಾಮಾಜಿಕ ಜಾಲತಾಣಗಳಾದ Twitter, Instagram , Facebook ಪರಿಣಿತರಿಗೆ ಒಂದೊಳ್ಳೆ ಅವಕಾಶ ಇದೆ.  ಎಲಿಜಬೆತ್‌ ರಾಣಿಗೆ ಸೋಷಿಯಲ್ ಮೀಡಿಯಾ ಮ್ಯಾನೇಜರ್ ಆಗಬಹುದು. ಇದು ಆಶ್ಚರ್ಯ ಅಂದ್ರೂ ನಿಜ.

ಹೌದು..ಕ್ವೀನ್ ಎಲಿಜಬೆತ್‌ಗೆ ಡಿಜಿಟಲ್ ಕಮ್ಯುನಿಕೇಷನ್ ಆಫೀಸರ್ ಒಬ್ಬರು ಬೇಕಾಗಿದ್ದಾರೆ ಎಂಬ ಪ್ರಕಟಣೆಯೊಂದು ಹೊರಬಿದ್ದಿದೆ. ಯ್ಕೆ ಆದವರರು ಬಕಿಂಗ್ ಹ್ಯಾಮ್ ಪ್ಯಾಲೇಸ್ ಒಳಗೆ ಇರುವ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು.

ಎಲಿಜಬೆತ್‌ ರಾಣಿಯ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಬೇಕು. ವಾರಕ್ಕೆ 40 ಗಂಟೆ ಮೀರದ ಕೆಲಸ ಮಾತ್ರ. ವಾರ್ಷಿಕ 26 ಲಕ್ಷ ರೂ. ಸಂಬಳ ಇರಲಿದೆ. ಆಸಕ್ತರು theroyalhousehold.tal.net ಗೆ ಮೇಲ್ ಮಾಡಬಹುದು.

PREV
click me!

Recommended Stories

ಸರ್ಕಾರಿ ಶಾಲೆಗಳ ಆಘಾತಕಾರಿ ಬೆಳವಣಿಗೆ, ಮಕ್ಕಳ ದಾಖಲಾತಿ 17 ಲಕ್ಷ ಕುಸಿತ ನಿಜವೆಂದು ಒಪ್ಪಿಕೊಂಡ ಸರ್ಕಾರ!
ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು