ಇಂಗ್ಲಿಷ್‌ ಎಕ್ಸಾಂಗೂ ಮುನ್ನ ಅಸುನೀಗಿದವನಿಗೆ ಶೇ.90 ಅಂಕ!

Published : Jul 16, 2020, 09:46 AM ISTUpdated : Jul 16, 2020, 10:37 AM IST
ಇಂಗ್ಲಿಷ್‌ ಎಕ್ಸಾಂಗೂ ಮುನ್ನ ಅಸುನೀಗಿದವನಿಗೆ ಶೇ.90 ಅಂಕ!

ಸಾರಾಂಶ

ಇಂಗ್ಲಿಷ್‌ ಎಕ್ಸಾಂಗೂ ಮುನ್ನ ಅಸುನೀಗಿದವನಿಗೆ ಶೇ.90 ಅಂಕ| ಹೃದಯಾಘಾತದಿಂದ ಅಸುನೀಗಿದ್ದ ವಿಜಯಪುರದ ವಿದ್ಯಾರ್ಥಿ| 

ವಿಜಯಪುರ(ಜು.16): ಹೃದಯಾಘಾತದಿಂದ ಅಸುನೀಗಿದ್ದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮದ ರಕ್ಷಿತ್‌(18) ಎಂಬ ಅಂಧ ವಿದ್ಯಾರ್ಥಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಐದು ವಿಷಯಗಳಲ್ಲಿ ಶೇ.90ರಷ್ಟುಅಂಕ ಗಳಿಸಿದ್ದಾನೆ. ಆದರೆ, ದುರಾದೃಷ್ಟಎಂಬಂತೆ ತಂದೆ-ತಾಯಿ, ಸ್ನೇಹಿತರು ಈ ಫಲಿತಾಂಶದ ಖುಷಿಯನ್ನು ಹಂಚಿಕೊಳ್ಳಲು ಆತನೇ ಇಲ್ಲ.

ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಇಲ್ಲಿನ ಉದ್ಯಮಿ ಗುರಲಿಂಗಪ್ಪ ಅಂಗಡಿ ಹಾಗೂ ಜಿಪಂ ಸದಸ್ಯೆ ದಾನಮ್ಮ ಗುರಲಿಂಗಪ್ಪ ಪುತ್ರ ರಕ್ಷಿತ್‌ ಇಂಗ್ಲಿಷ್‌ ಬರೆಯುವ ಮುನ್ನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದ.

ಓದು ಬೇಡ ಎಂದವ ವಿಜಯಪುರಕ್ಕೇ ಫಸ್ಟ್!

ಕನ್ನಡದಲ್ಲಿ 90, ಭೌತಶಾಸ್ತ್ರದಲ್ಲಿ 90, ರಸಾಯನ ಶಾಸ್ತ್ರದಲ್ಲಿ 92, ಗಣಿತದಲ್ಲಿ 86 ಮತ್ತು ಜೀವಶಾಸ್ತ್ರದಲ್ಲಿ 90 ಅಂಕ ಗಳಿಸಿದ್ದಾನೆ.

PREV
click me!

Recommended Stories

ಸರ್ಕಾರಿ ಶಾಲೆಗಳ ಆಘಾತಕಾರಿ ಬೆಳವಣಿಗೆ, ಮಕ್ಕಳ ದಾಖಲಾತಿ 17 ಲಕ್ಷ ಕುಸಿತ ನಿಜವೆಂದು ಒಪ್ಪಿಕೊಂಡ ಸರ್ಕಾರ!
ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್: ಕೋಟಿ ಕೋಟಿ ಹಣ ಪತ್ತೆ: ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು