ಪಿಯು ಮರುಮೌಲ್ಯಮಾಪನ ಫಲಿತಾಂಶ ಪ್ರಕಟ

Published : Aug 29, 2020, 10:37 AM IST
ಪಿಯು ಮರುಮೌಲ್ಯಮಾಪನ ಫಲಿತಾಂಶ ಪ್ರಕಟ

ಸಾರಾಂಶ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶ ಪ್ರಕಟ| ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ದಾಖಲಿಸಿ ಫಲಿತಾಂಶ ವೀಕ್ಷಿಸಬಹುದು| 

ಬೆಂಗಳೂರು(ಆ.29): ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಕಳೆದ ಮಾರ್ಚ್‌ ತಿಂಗಳಲ್ಲಿ ನಡೆಸಲಾಗಿದ್ದ 2019-20ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. 

ಇಲಾಖೆಯ ವೆಬ್‌ಸೈಟ್‌ www.puc.kar.nic.in ನಲ್ಲಿ ಫಲಿತಾಂಶ ಲಭ್ಯವಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ದಾಖಲಿಸಿ ಫಲಿತಾಂಶ ವೀಕ್ಷಿಸಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ದ್ವಿತೀಯ ಪಿಯು ಫಲಿತಾಂಶ: ಉಡುಪಿ ರಾಜ್ಯಕ್ಕೇ ಪ್ರಥಮ, ಬಾಲಕಿಯರದ್ದೇ ಮೇಲುಗೈ!

ಪಿಯು ಪರೀಕ್ಷೆಯಲ್ಲಿ ಒಟ್ಟು 6 ಲಕ್ಷದ 75 ಸಾವಿರ 277 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ 5,66,267 ಮಂದಿ ಹೊಸ ಪರೀಕ್ಷಾರ್ಥಿಗಳು. ಇವರಲ್ಲಿ 3,84,947 ಮಂದಿ ಉತ್ತೀರ್ಣರಾಗಿದ್ದರು. 69.20ಮಂದಿ ತೇರ್ಗಡೆ ಹೊಂದಿದ್ದರು. ಪುನರಾವರ್ತಿತ ಅಭ್ಯರ್ಥಿಗಳು 91 ಸಾವಿರದ 25 ವಿದ್ಯಾರ್ಥಿಗಳು. ಇವರಲ್ಲಿ 25 ಸಾವಿರದ 602 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.ಈ ಬಾರಿ ಖಾಸಗಿ ಅಭ್ಯರ್ಥಿಗಳು ಹಾಜರಾದ 27 ಸಾವಿರದ 985, ಇವರಲ್ಲಿ 6 ಸಾವಿರದ 748 ಖಾಸಗಿ ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದರು. 

PREV
click me!

Recommended Stories

ಹೊಸನಗರದ ಹುಡುಗನ ಅಸಾಧಾರಣ ಸಾಧನೆ.. ಭಾರತದ ಯುವ EdTech ಉದ್ಯಮಿಯಾಗಿ ಬೆಳೆದ ಕನ್ನಡಿಗ ಸೂರಜ್ ಶೆಟ್ಟಿ!
Alliance One 2026: ಅಲಯನ್ಸ್ ವಿಶ್ವವಿದ್ಯಾಲಯದ ಯುವಜನೋತ್ಸವ ‘ಅಲಯನ್ಸ್ ಒನ್ 2026’ಕ್ಕೆ ಅದ್ಧೂರಿ ತೆರೆ