ಓದು ಬೇಡ ಎಂದವ ವಿಜಯಪುರಕ್ಕೇ ಫಸ್ಟ್!

Published : Jul 15, 2020, 08:30 AM ISTUpdated : Jul 15, 2020, 09:56 AM IST
ಓದು ಬೇಡ ಎಂದವ ವಿಜಯಪುರಕ್ಕೇ ಫಸ್ಟ್!

ಸಾರಾಂಶ

ಓದು ಬಿಡ​ಲು ಹೋಗಿದ್ದ ವಿದ್ಯಾರ್ಥಿ ತಾಲೂಕಿಗೆ ಫಸ್ಟ್‌| ಸಿಂದ​ಗಿಯ ಮಾಳಪ್ಪ ಸಾಧ​ನೆ

ಸಿಂದಗಿ(ಜು.15): ಮಕ್ಕಳ ಮದುವೆ, ಕೃಷಿಗೆ, ವಿದ್ಯಾಭ್ಯಾಸಕ್ಕೆ ಲಕ್ಷಾಂತರ ರು. ಸಾಲ ಮಾಡಿ ಸೋತು ಹೋಗಿದ್ದ ತಂದೆಗೆ ನೆರವಾಗುವ ಉದ್ದೇಶದಿಂದ ತನ್ನ ವಿದ್ಯಾಭ್ಯಾಸವನ್ನೇ ಅರ್ಧಕ್ಕೆ ನಿಲ್ಲಿಸಬೇಕೆಂದಿದ್ದ ಮಾಳಪ್ಪ ನಿಂಗಪ್ಪ ಹೊಸಮನಿ ಇದೀಗ ಪಿಯುಸಿ ಪರೀಕ್ಷೆಯಲ್ಲಿ ಹುಬ್ಬೇರಿಸುವಂಥ ಸಾಧನೆ ಮೆರೆದಿದ್ದಾರೆ.

ವಿಜ​ಯ​ಪುರದ ಸಿಂದಗಿ ಪಟ್ಟಣದ ಜ್ಞಾನ ಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಈತ ಪಿಯುಸಿ ಫಲಿತಾಂಶದ ಕಲಾ ವಿಭಾಗದಲ್ಲಿ 600 ಅಂಕಗಳಿಗೆ 586 ಅಂಕಗಳನ್ನು ತೆಗೆದುಕೊಳ್ಳುವ ಮೂಲಕ ಶೇ.97.66 ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ದ್ವಿತೀಯ ಪಿಯುಸಿ ರಿಸಲ್ಟ್: ಡಿಸ್ಟಿಂಕ್ಷನ್‌ನಲ್ಲಿ ಪಾಸಾದ್ರೂ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ತನ್ನ ಸಾಧನೆ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿರುವ ಮಾಳಪ್ಪ, ಸಿಂದಗಿಯಲ್ಲಿಯೇ ಬಾಡಿಗೆ ರೂಮ್‌ ಮಾಡಿ ಪ್ರತಿ ತಿಂಗಳಿಗೆ .600 ಸಂದಾಯ ಮಾಡುತ್ತಿದ್ದೆ. ನನ್ನ ತಂದೆ ತಿಂಗಳಿಗೆ ಕೇವಲ .1000 ಮಾತ್ರ ನೀಡುತ್ತಿದ್ದರು. ಅದರಲ್ಲಿಯೇ 2 ವರ್ಷ ಕಷ್ಟಪಟ್ಟು ಕಲಿತೆ. ರಜೆ ಇದ್ದಾಗ ಊರಿಗೆ ಹೋದಾಗ ನಮ್ಮ ಹೊಲದಲ್ಲಿ ದುಡಿಯುತ್ತಿದ್ದೆ ಎಂದು ತಿಳಿಸಿದ್ದಾರೆ.

PREV
click me!

Recommended Stories

ಮನೆಯಲ್ಲೇ ಯಾರು ಕೇಳಲ್ಲ, ನೀವು ಯಾರು ಕೇಳೋಕೆ? ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷಕಿ ಕೆನ್ನೆಗೆ ಬಾರಿಸಿದ ವಿದ್ಯಾರ್ಥಿ
ಸ್ಲಮ್ ಮಕ್ಕಳ ಬಾಳಲ್ಲಿ ಬಣ್ಣ ತುಂಬಿದ ಟೀಚರ್: 1 ಮಿಲಿಯನ್ ಡಾಲರ್ ಮೊತ್ತದ ಜಾಗತಿಕ ಶಿಕ್ಷಕಿ ಪ್ರಶಸ್ತಿ ಗೆದ್ದ ರೂಬೆಲ್ ನಾಗಿ