ಹೋಯ್ತು ಮಾನ: ವಿಶ್ವದ ಟಾಪ್ 250 ವಿವಿಯಲ್ಲಿ ಭಾರತಕ್ಕಿಲ್ಲ ಸ್ಥಾನ!

By Web DeskFirst Published Sep 27, 2018, 5:49 PM IST
Highlights

ಶಿಕ್ಷಣ ಪ್ರಿಯರಿಗೆ ನೋವು ತರುವ ಸಂಗತಿ ಇದು! ವಿಶ್ವದ ಟಾಪ್ 250 ವಿವಿಯಲ್ಲಿ ನಮ್ಮ ಒಂದೂ ವಿವಿ ಇಲ್ಲ! ಮೂಲಭೂತ ಸೌಕರ್ಯ ಇಲ್ಲದೇ ಸೊರಗುತ್ತಿರುವ ವಿವಿಗಳು

ನವದೆಹಲಿ(ಸೆ.27): ದೇಶದಲ್ಲಿರುವ ವಿವಿಗಳಿಗೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಮೂಲ ಸೌಕರ್ಯಗಳಿಲ್ಲದೇ ವಿವಿಗಳು ಒದ್ದಾಡುತ್ತಿವೆ ಎಂಬ ಶೈಕ್ಷಣಿಕ ತಜ್ಞರ ವಾದಕ್ಕೆ ಬೆಲೆಯೇ ಇಲ್ಲದಂತಾಗಿದೆ.

ವಿಶ್ವದ ಟಾಪ್ 250 ವಿಶ್ವ ವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದ ಒಂದೂ ವಿವಿ ಹೆಸರು ಇಲ್ಲ.  ಅಮೆರಿಕ ಮೂಲದ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಹಾರ್ವರ್ಡ್ ವಿವಿಯು ಜಗತ್ತಿನ ಅತ್ಯುನ್ನತ 250 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಅಲಂಕರಿಸಿವೆ.

ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ನವದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಳೆದ ವರ್ಷ 212ನೇ ಸ್ಥಾನದಲ್ಲಿದ್ದರೆ ಈ ಬಾರಿ 222ಕ್ಕೆ ಇಳಿದಿದೆ. ಐಐಟಿ ಬಾಂಬೆ 233, ಐಐಟಿಕಾನ್ಪುರ 295, ಐಐಟಿ ಮದ್ರಾಸ್ 313, ಐಐಟಿ ಕರಗ್‌ಪುರ 346ನೇ ಸ್ಥಾನ ಗಳಿಸಿವೆ. ಬ್ರಿಟನ್‌ನ ಕೇಂಬ್ರಿಡ್ಜ್ ಯುನಿವರ್ಸಿಟಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದೆ.

ಅದರಂತೆ ಇಂಧೊರ್ ನ ಐಐಟಿ ಕೇಂದ್ರ ಜಗತ್ತಿನ 351-400 ಶ್ರೇಷ್ಠ ವಿಶ್ವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ ಟಾಪ್ ೨೫೦ ಪಟ್ಟಿಯಲ್ಲಿ ಭಾರತದ ಒಂದೂ ವಿಶ್ವವಿದ್ಯಾಲಯ ಇಲ್ಲಿದಿರುವುದು ಶಿಕ್ಷಣ ಪ್ರಿಯರಿಗೆ ನೋವು ತಂದಿರುವುದರಲ್ಲಿ ಅನುಮಾನವೇ ಇಲ್ಲ.

ಆದರೆ ವಿಶ್ವದ ಉತ್ತಮ ವಿಶ್ವಿವದ್ಯಾಲಯಗಳ ಪೈಕಿ ಭಾರತ ಈ ಹಿಂದೆ 42ನೇ ಸ್ಥಾನದಲ್ಲಿತ್ತು. ಆದರೆ ಇದೀಗ 49ನೇ ಸ್ಥಾನಕ್ಕೇರಿರುವುದು ಶಿಕ್ಷಣ ಪ್ರಿಯರಿಗೆ ಕೊಂಚ ನೆಮ್ಮದಿ ತರುವ ವಿಚಾರ ಹೌದು.

click me!