ಯುಪಿಎಸ್‌ಸಿ ಕನಸಾ?: 581 ಹುದ್ದೆಗೆ ಅರ್ಜಿ ಕರೆದಿದ್ದಾರೆ!

Published : Sep 27, 2018, 01:16 PM ISTUpdated : Sep 27, 2018, 01:19 PM IST
ಯುಪಿಎಸ್‌ಸಿ ಕನಸಾ?: 581 ಹುದ್ದೆಗೆ ಅರ್ಜಿ ಕರೆದಿದ್ದಾರೆ!

ಸಾರಾಂಶ

581 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೇಂದ್ರ ಲೋಕಸೇವಾ ಆಯೋಗ! ಎಂಜಿನಿಯರಿಂಗ್ ವಿಭಾಗದ ಇಎಸ್ ಇ ಪರೀಕ್ಷೆಗೆ ನೋಟಿಫಿಕೇಶನ್ ಪ್ರಕಟಣೆ! ಅಕ್ಟೋಬರ್ 22 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ! 6 ಜನವರಿ 2019 ರಲ್ಲಿ ಇಎಸ್ ಇ ಪರೀಕ್ಷೆ! ಯುಪಿಎಸ್ ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಕೃತ ಮಾಹಿತಿ  

ನವದೆಹಲಿ(ಸೆ.27): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಎಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 581 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಂಜಿನಿಯರಿಂಗ್ ಸರ್ವಿಸ್ ಎಕ್ಸಾಮಿನೇಶನ್ (ಇಎಸ್ ಇ) 2019 ರ ನೋಟಿಫಿಕೇಶನ್ ಪ್ರಕಟಗೊಂಡಿದೆ ಎಂದು ಆಯೋಗ ತಿಳಿಸಿದೆ.

ನಿನ್ನೆ ಅಂದರೆ ಸೆ. 26 ರಂದು ನೀಟಿಫಿಕೇಶನ್ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 22 ಕೊನೆಯ ದಿನಾಂಕ ಎಂದು ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇಎಸ್‌ಇ ಪರೀಕ್ಷೆಯನ್ನು 6 ಜನವರಿ 2019 ರಂದು ಆಯೋಗ ನಡೆಸಲಿದೆ.

ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಹೆಚ್ಚಿನ ಮಾಹಿತಿಗಾಗಿ ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌  upsc.gov.in ಗೆ ಭೇಟಿ ನೀಡಿ.

 

PREV
click me!

Recommended Stories

ರಾಯಚೂರು: ಮಕ್ಕಳಿಗೆ ಕೊಡ್ಬೇಕಿದ್ದ 50000 ಐರನ್‌ ಮಾತ್ರೆ ಶಾಲೆಯ ಟಾಯ್ಲೆಟ್‌ನಲ್ಲಿ ಪತ್ತೆ!
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; VTU-Google ನಡುವೆ ಐತಿಹಾಸಿಕ ಒಪ್ಪಂದ