700 ಹುದ್ದೆಗಳ ನೇಮಕಾತಿಗೆ KPSC ಅರ್ಜಿ ಆಹ್ವಾನ

By Web Desk  |  First Published Nov 24, 2018, 8:56 PM IST

700  ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.


ಬೆಂಗಳೂರು, [ನ.24]:  ರಾಜ್ಯದ ಸರಕಾರಿ ಮೌಲಾನಾ ಆಜಾದ್ ಮಾದರಿ 100 ಶಾಲೆಗಳಿಗೆ ಹೊಸದಾಗಿ 700 ಶಿಕ್ಷಕರ ಹುದ್ದೆ ಸೃಜನೆಯಾಗಿದ್ದು, ಈ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವ ಆಯೋಗ [ಕೆಪಿಎಸ್ ಸಿ] ಆದೇಶ ಹೊರಡಿಸಿದೆ.

ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಕೊನೆ ದಿನಾಂಕ ಡಿಸೆಂಬರ್ 22, 2018ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Latest Videos

undefined

* ಹುದ್ದೆಗಳು: 700
ಮುಖ್ಯಶಿಕ್ಷಕ-80
ಭಾಷಾ ಶಿಕ್ಷಕರು-79
ಇಂಗ್ಲಿಷ್ ಭಾಷಾ ಶಿಕ್ಷಕ-79
ಉರ್ದು ಟೀಚರ್-79
ಗಣೀತ ಟೀಚರ್-79
ವಿಜ್ಞಾನ ಟೀಚರ್-79
ಸಮಾಜ-ವಿಜ್ಞಾನ- 79

* ಪರೀಕ್ಷಾ ಮಾದರಿ:  ಮೇಲೆ ತಿಳಿಸಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಪರೀಕ್ಷೆ ಇರಲಿದ್ದು, ಆ ಪರೀಕ್ಷೆ ಮಾದರಿ ಹೀಗಿರುತ್ತದೆ.

ಪೇಪರ್ 1: ಜನರಲ್ ನಾಲೇಜ್ ಪ್ರಶ್ನೆ ಪತ್ರಿಕೆ 100 ಅಂಕಗಳಿಗೆ, ಒಂದುವರೆ ಗಂಟೆ [ತಾಸು] ಅವಧಿ.
ಪೇಪರ್ 2: ಸಂವಹನ ಪ್ರಶ್ನೆ ಪತ್ರಿಕೆ 100 ಅಂಕಕ್ಕೆ, ಎರಡುವರೆ ಗಂಟೆ.
ಪೇಪರ್ 3: ಜನರಲ್ ಕನ್ನಡ [35] , ಜನರಲ್ ಇಂಗ್ಲೀಷ್ [35] , ಕಂಪ್ಯೂಟರ್ ನಾಲೇಜ್ [30] ಒಟ್ಟು 100 ಅಂಕ ಪ್ರಶ್ನೆ ಪತ್ರಿಕೆ. 

ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಕಚೇರಿಯ ವೆಬ್ ಸೈಟ್ ನಲ್ಲಿ ತಿಳಿಯಲು

click me!