ರಾಯಚೂರು: ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿ

By Web DeskFirst Published Nov 18, 2018, 2:57 PM IST
Highlights

ರಾಯಚೂರಿನಲ್ಲಿ 7 ದಿನ ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿ ರ‍್ಯಾಲಿ ನಡೆಯಲಿದೆ. ಯಾವ-ಯಾವ ಹುದ್ದೆ? ನೇಮಕಾತಿ ರ‍್ಯಾಲಿ ಯಾವಾಗ? ಇಲ್ಲಿದೆ ಫುಲ್ ಡಿಟೇಲ್ಸ್

ರಾಯಚೂರು, (ನ.18): ಬೆಂಗಳೂರು ಹಾಗೂ ಬೆಳಗಾವಿಯ ಸೇನಾ ನೇಮಕಾತಿ ವಲಯದ ಆಶ್ರಯದಲ್ಲಿ ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಡಿಸೆಂಬರ್. 10 ರಿಂದ 17 ರವರೆಗೆ ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ನಡೆಯಲಿದೆ.

ಭಾರತೀಯ ಸೇನೆಯಲ್ಲಿನ ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್, ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳ ಸೇನಾ ಭರ್ತಿ ನೇಮಕಾತಿ ರ‍್ಯಾಲಿ
ನಡೆಯಲಿದೆ.

 ಡಿ.10 ರಂದು ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳಿಗೆ ಸೋಲ್ಜರ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಲಲ್ ಹುದ್ದೆಗಳ ನೇಮಕಾತಿ ರ‍್ಯಾಲಿ ನಡೆಯಲಿದೆ.

ಡಿ.11 ಮತ್ತು 12 ರಂದು ರಾಯಚೂರು ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ಗೋಕಾಕ, ರಾಮದುರ್ಗ, ಸೌದತ್ತಿ, ಅಥಣಿ, ಚಿಕ್ಕೋಡಿ, ಹುಕ್ಕೇರಿ, ಬೈಲಹೊಂಗಲ, ಖಾನಾಪುರ, ಬೆಳಗಾವಿ ಕಿತ್ತೂರ ಮತ್ತು ರಾಯಬಾಗ ತಾಲೂಕುಗಳ ಅಭ್ಯರ್ಥಿಗಳಿಗೆ ಸೋಲ್ಜರ್ ಟ್ರೇಡ್ಸ್ಮನ್-ಟಿಡಿಎನ್ಎಸ್(ವಿವಿಧ ವೃತ್ತಿಗಳ ಕಸುಬುದಾರರು) ಹುದ್ದೆಗಳಿಗೆ ನೇಮಕಾತಿ
ರ‍್ಯಾಲಿ ನಡೆಯಲಿದೆ. 

ಡಿ.13, 14, 15 ಮತ್ತು 16ರಂದು ರಾಯಚೂರು ಜಿಲ್ಲೆಯ ಹಾಗೂ ಖಾನಾಪುರ, ಬೆಳಗಾವಿ, ರಾಯಬಾಗ, ಹುಕ್ಕೇರಿ, ಸೌದತ್ತಿ, ಚಿಕ್ಕೋಡಿ, ಗೋಕಾಕ ರಾಮದುರ್ಗ ತಾಲೂಕುಗಳ ಅಭ್ಯರ್ಥಿಗಳಿಗೆ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ನೇಮಕಾತಿ ರ‍್ಯಾಲಿ ನಡೆಯಲಿದೆ. 

ಡಿ.17ರಂದು ರಾಯಚೂರು ಹಾಗೂ ಬೆಳಗಾವಿ ಜಿಲ್ಲೆಗಳ ಅಭ್ಯರ್ಥಿಗಳ ಮತ್ತು ಸೋಲ್ಜರ್ ಟೆಕ್ನಿಕಲ್ ಮತ್ತು ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟೆ ಹುದ್ದೆಗಳಿಗೆ ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಡಿಎಸ್ಸಿ ಹುದ್ದೆಯ ನೇಮಕಾತಿ ರ‍್ಯಾಲಿ ನಡೆಯಲಿದೆ.

ರ‍್ಯಾಲಿಯಲ್ಲಿ ಪಾಲ್ಗೊಳ್ಳುವರು ತರಬೇಕಾದ ದಾಖಲಾತಿಗಳು:  ಅರ್ಹ ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿ, ಐಟಿಐ, ಎನ್ಐಸಿ ಇವುಗಳ ಮೂಲ ಹಾಗೂ 2 ದೃಢೀಕೃತ ನಕಲು ಪ್ರತಿಗಳನ್ನು ಹೊಂದಿರಬೇಕು. ಜೊತೆಗೆ 12 ಪಾಸ್ ಫೋಟೋ ಅಳತೆಯ ಕಲರ್ ಭಾವಚಿತ್ರಗಳನ್ನು ಹೊಂದಿರಬೇಕು. 

ಈ ರ‍್ಯಾಲಿಯು ಬೆಳಿಗ್ಗೆ ಬೇಗನೆ ಪ್ರಾರಂಭವಾಗುವುದರ ಹಿಂದಿನ ದಿನ ಅಂದರೆ ಡಿ.9 ರಂದು ಮಧ್ಯಾಹ್ನ 2ಗಂಟೆಗೆ ಅಭ್ಯರ್ಥಿಗಳು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಇರಬೇಕು. 

ಈ ಹುದ್ದೆಗಳಿಗೆ ಯಾವುದೇ ಅರ್ಜಿ ನಮೂನೆ ಅವಶ್ಯಕತೆ ಇರುವುದಿಲ್ಲ. ಅಭ್ಯರ್ಥಿಗಳು ವಾಸವಾಗಿರುವ ಸ್ಥಳದ ಪ್ರಮಾಣಪತ್ರ ಹಾಗೂ ನಡತೆಯ ಪ್ರಮಾಣಪತ್ರ ಕಡ್ಡಾಯವಾಗಿ ಆಂಗ್ಲ ಭಾಷೆಯಲ್ಲಿ ತರಬೇಕು. 

ಹೆಚ್ಚಿನ ವಿವರಗಳಿಗೆ ಸೇನಾ ನೇಮಕಾತಿ ಕಚೇರಿ ಬೆಳಗಾವಿ-0831-2465550, ಬೆಂಗಳೂರು-080-25599290 ಅಥವಾ www.zrobangalore.gov.in ವೆಬ್ಸೈಟ್ ಮೂಲಕ ಮಾಹಿತಿ ಪಡೆಯಬಹುದಾಗಿದೆ.

click me!