ಪಿಯುಸಿ ಪ್ರವೇಶ ಜು.1 ರವರೆಗೆ ವಿಸ್ತರಣೆ

Published : Jun 22, 2019, 09:09 AM IST
ಪಿಯುಸಿ ಪ್ರವೇಶ ಜು.1 ರವರೆಗೆ ವಿಸ್ತರಣೆ

ಸಾರಾಂಶ

ಪಿಯುಸಿ ಪ್ರವೇಶ ಜು.1 ರವರೆಗೆ ವಿಸ್ತರಣೆ | ಯಾವುದೇ ದಂಡ ಶುಲ್ಕ ಇಲ್ಲದೆ ಜುಲೈ 1ರವರೆಗೂ ಅರ್ಜಿ ಸಲ್ಲಿಸಬಹುದು 

ಬೆಂಗಳೂರು (ಜೂ. 22): 2019-20ನೇ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಪ್ರವೇಶ ಪಡೆಯಲು ಜೂ.24ರ ವರೆಗಿದ್ದ ದಿನಾಂಕವನ್ನು ಜುಲೈ 1ರ ವರೆಗೂ ವಿಸ್ತರಿಸಲಾಗಿದೆ.

ಯಾವುದೇ ದಂಡ ಶುಲ್ಕ ಇಲ್ಲದೆ ಜುಲೈ 1ರವರೆಗೂ ಅರ್ಜಿ ಸಲ್ಲಿಸಬಹುದಾಗಿದೆ. ವಿಳಂಬ ಶುಲ್ಕ 670 ರು. ಪಾವತಿಸಿ ಜುಲೈ 8ರೊಳಗೆ, ವಿಶೇಷ ದಂಡಶುಲ್ಕ 2890 ರು. ಪಾವತಿಸಿ ಜುಲೈ 15ರ ವರೆಗೂ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳು ದಾಖಲಾತಿ ಶುಲ್ಕ ಪಾವತಿಸಿದ ತಕ್ಷಣವೇ ಅದನ್ನು ಖಜಾನೆಗೆ ಪಾವತಿಸುವುದು ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದೆ.

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ