ದ್ವಿತಿಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

By Web DeskFirst Published Oct 1, 2019, 4:34 PM IST
Highlights

2020ನೇ ಸಾಲಿನ ದ್ವಿತಿಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಹಾಗಾದ್ರೆ ಯಾವ ಯಾವ ದಿನಾಂಕದಂದು ಯಾವ ವಿಷಯದ ಪರೀಕ್ಷೆ ಇದೆ ಎನ್ನುವ ವಿವರ ಈ ಕೆಳಗಿನಂತಿದೆ. 

ಬೆಂಗಳೂರು, (ಅ.01): 2020ನೇ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ  ಪದವಿಪೂರ್ವ ಶಿಕ್ಷಣ ಇಲಾಖೆ  ಬಿಡುಗಡೆ ಮಾಡಿದೆ.

ವಿಶ್ವದ ಟಾಪ್‌ 300 ವಿವಿಗಳಲ್ಲಿ ಭಾರತದ್ದು ಒಂದೂ ಇಲ್ಲ!

ಐದು ತಿಂಗಳು ಮೊದಲೇ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದ್ದು,  4 ಮಾರ್ಚ್ 2020ರಿಂದ ಆರಂಭವಾಗಿ ಮಾರ್ಚ್ 19ಕ್ಕೆ  ಪರೀಕ್ಷೆ ಪೂರ್ಣಗೊಳಲಿವೆ.  ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆ ನಡೆಯಲಿವೆ. ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಮುದೆ ಬದಲಾಗಬಹುದು. ಇಲ್ಲ ಅಂದ್ರೆ ಇದೇ ವೇಳಾಪಟ್ಟಿ ಫೈನಲ್ ಆಗಲಿದೆ.

ತಾತ್ಕಾಲಿಕ ವೇಳಾಪಟ್ಟಿ ಇಂತಿದೆ
ಮಾರ್ಚ್ 4- ಇತಿಹಾಸ, ಬೇಸಿಕ್ ಮ್ಯಾಥ್ಸ್, ಭೌತಶಾಸ್ತ್ರ.
ಮಾರ್ಚ್ 5- ತೆಲಗು, ತಮಿಳು, ಮರಾಠಿ, ಮಲಯಾಳಂ, ಅರೇಬಿಕ್, ಫ್ರೆಂಚ್.
ಮಾರ್ಚ್ 6- ಉರ್ದು, ಸಂಸ್ಕೃತ
ಮಾರ್ಚ್ 7- ಭೂಗರ್ಭಶಾಸ್ತ್ರ, ಶಿಕ್ಷಣ  ಹೋಂ ಸೈನ್ಸ್
ಮಾರ್ಚ್ 8- ರಜೆ (ಭಾನುವಾರ)
ಮಾರ್ಚ್ 9- ಐಚ್ಛಿಕ ಕನ್ನಡ, ಸಂಖ್ಯಾಶಾಸ್ತ್ರ, ಗಣಿತ
ಮಾರ್ಚ್10- ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಹೆಲ್ಸ್ ಕೇರ್
ಮಾರ್ಚ್ 11- ರಾಜ್ಯಶಾಸ್ತ್ರ,   ಸ್ಟ್ಯಾಟಿಸ್ಟಿಕ್ಸ್...
ಮಾರ್ಚ್ 12 - ರಸಾಯನ ಶಾಸ್ತ್ರ, ಸಮಾಜಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್
ಮಾರ್ಚ್ 13 - ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮಾರ್ಚ್ 14 - ಮನೋಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್
ಮಾರ್ಚ್ 15 - ರಜೆ (ಭಾನುವಾರ)
ಮಾರ್ಚ್ 16- ಅರ್ಥಶಾಸ್ತ್ರ, ಜೀವಶಾಸ್ತ್ರ
ಮಾರ್ಚ್ 17- ಹಿಂದಿ
ಮಾರ್ಚ್ 18- ಕನ್ನಡ
ಮಾರ್ಚ್ 19- ಇಂಗ್ಲೀಷ್‌

click me!