ಪ್ರತ್ಯೇಕ ಲಿಂಗಾಯತ ಧರ್ಮದೆಡೆಗೆ ಸಿಎಂಗಿರುವ ಆಸಕ್ತಿ ಮಹದಾಯಿಯೆಡೆಗೆ ಏಕಿಲ್ಲ?

By Suvarna Web DeskFirst Published Mar 19, 2018, 1:04 PM IST
Highlights

ನ್ಯಾ.ನಾಗಮೋಹನದಾಸ್ ಅವರು ನೀಡಿದ ವರದಿಯೇ ತಪ್ಪಿದ್ದು, ಈ ತಜ್ಞರ ಸಮಿತಿ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿರುವ ರಂಭಾಪುರಿ ಶ್ರೀಗಳು, ಪ್ರತ್ಯೇಕ ಲಿಂಗಾಯತಧರ್ಮವನ್ನು ಮಾಡಿ, ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾದಲ್ಲಿ ಮುಂದೆ ನೋವು ಅನುಭವಿಸಬೇಕಾಗುತ್ತದೆ, ಎಂದು ಹೇಳಿದ್ದಾರೆ.

ಹುಬ್ಬಳ್ಳಿ: ನ್ಯಾ.ನಾಗಮೋಹನದಾಸ್ ಅವರು ನೀಡಿದ ವರದಿಯೇ ತಪ್ಪಿದ್ದು, ಈ ತಜ್ಞರ ಸಮಿತಿ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿರುವ ರಂಭಾಪುರಿ ಶ್ರೀಗಳು, ಪ್ರತ್ಯೇಕ ಲಿಂಗಾಯತಧರ್ಮವನ್ನು ಮಾಡಿ, ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾದಲ್ಲಿ ಮುಂದೆ ನೋವು ಅನುಭವಿಸಬೇಕಾಗುತ್ತದೆ, ಎಂದು ಹೇಳಿದ್ದಾರೆ.

ನಿವೃತ್ತಿ ನ್ಯಾ. ದಾಸ್ ಅವರಿಗೆ ಸಾವಿರಾರು ಪುಟಗಳ ಮಾಹಿತಿ ನೀಡಿದ್ದೇವೆ. ಆದರೆ, ನಾವು ಕೊಟ್ಟ ಮಾಹಿತಿಯನ್ನು ಬದಿಗೊತ್ತಿ ಲಿಂಗಾಯತ ಪರ ವರದಿ ನೀಡಿದ್ದಾರೆ. ನಾಗ ಮೋಹನ ದಾಸ್ ಅವರು ಒತ್ತಡಕ್ಕೆ ಮಣಿದು ವರದಿ ನೀಡಿದ್ದಾರೆ, ಎಂದು ಆರೋಪಿಸಿರುವ ಶ್ರೀಗಳು ಕಳೆದ ಮೂರು ವರ್ಷಗಳಿಂದ ಮಹದಾಯಿ ಹೋರಾಟ ನಡೆಯುತ್ತಿದೆ. ಜಾತಿ ಒಡೆಯುವ ಕೆಲಸದಲ್ಲಿ ತೋರಿದ ಆತುರವನ್ನು ಈ ಮಹದಾಯಿ ವಿಷಯದಲ್ಲಿ ತೋರಿದ್ದರೆ, ನಾಡಿನ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು, ಎಂದು ಶ್ರೀಗಳು ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸಿಎಮ್ ಸಮಿತಿ ರಚನೆ ಮಾಡಿರುವುದೇ ತಪ್ಪು. ಅಲ್ಲದೆ ಸಮಿತಿಯಲ್ಲಿ ಇರುವ ಅನೇಕರು ಲಿಂಗಾಯತ ಎಂದು ಗುರುತಿಸಿಕೊಂಡವರು. ಹೀಗಾಗಿ ನಮಗೆ ತಜ್ಞರ ಸಮಿತಿ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಈ ಸಮಾಜವನ್ನು ಒಡೆಯುವ ಕೆಲಸವನ್ನು ಸಿ ಎಮ್ ಮಾಡಬಾರದೆಂದು ಹೇಳಿದ್ದಾರೆ.

click me!