ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ತಾಯಿ ಮಗಳು ನೇಣಿಗೆ ಶರಣು

Published : Mar 19, 2018, 01:00 PM ISTUpdated : Apr 11, 2018, 12:42 PM IST
ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ತಾಯಿ ಮಗಳು ನೇಣಿಗೆ ಶರಣು

ಸಾರಾಂಶ

ತಾಯಿ ಮಗಳು ಇಬ್ಬರೂ ಕೂಡ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಪ್ರಕಾಶ್ ನಗರದಲ್ಲಿ ನಡೆದಿದೆ.  

ಬೆಂಗಳೂರು : ತಾಯಿ ಮಗಳು ಇಬ್ಬರೂ ಕೂಡ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಪ್ರಕಾಶ್ ನಗರದಲ್ಲಿ ನಡೆದಿದೆ.  ತಾಯಿ ಸಾವಿತ್ರಮ್ಮ, ಮಗಳು ಸಾವಿಗೆ ಶರಣಾದ ದುರ್ದೈವಿಗಳಾಗಿದ್ದಾರೆ.  ಮಗಳಿಗೆ 37 ವರ್ಷ ವಯಸ್ಸಾದರೂ ಕೂಡ ಮದುವೆ ಆಗಿರಲಿಲ್ಲ.

ಅನೇಕ ಜನರು ಆಕೆಯನ್ನು ಮದುವೆ ಮಾಡಿಕೊಳ್ಳಲು ಮುಂದೆ ಬಂದಿದ್ದರೂ ಕೂಡ ಆಕೆಗೆ ವಿವಾಹ ಭಾಗ್ಯ ಒಲಿದಿರಲಿಲ್ಲ.  ಇದೇ ಕಾರಣದಿಂದ ಇಬ್ಬರೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

10 ವರ್ಷಗಳ ಹಿಂದೆಯೇ ಮಗ ಮದುವೆಯಾಗಿ  ಕೆಂಗೇರಿಯಲ್ಲಿ ವಾಸವಾಗಿದ್ದಾನೆ. ಆದರೆ ರಾಜಾಜಿನಗರ ಬಳಿಯ ಪ್ರಕಾಶ್ ನಗರದಲ್ಲಿ ತಾಯಿ ಮಗಳು ಇಬ್ಬರೇ ವಾಸವಾಗಿದ್ದು, ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ