
ಕೊಪ್ಪಳ(ಎ.04): ಬರಗಾಲದ ಮಧ್ಯೆಯೂ ಜಮೀನಿನಲ್ಲಿ ಎರಡು ಮೂರು ಅಡಿಗೆ ನೀರು ಜಿನುಗಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗೋಡಿನಾಳ ಗ್ರಾಮದ ರೈತ ಕನಕಪ್ಪ ಎಂಬುವರಿಗೆ ಸೇರಿದ ಜಮೀನನಲ್ಲಿ ಕೇವಲ ಎರಡಿಂದ ಮೂರು ಅಡಿ ಕೆಳಗೆ ನೀರು ಬಂದಿದೆ. ಜಮೀನಿನ ನಾಲ್ಕೈದು ಕಡೆ ಗುಂಡಿ ಅಗೆದ್ರೂ ನೀರು ಬರುತ್ತಿದೆ. ನಿನ್ನೆ ಜಮೀನಿನ ಮಾಲೀಕ ಕನಕಪ್ಪ ಬಿತ್ತನೆಗಾಗಿ ಹೊಲವನ್ನು ಹದ ಮಾಡಲು ಹೋಗಿದ್ದಾರೆ. ಆ ಸಂದರ್ಭದಲ್ಲಿ ಹೊಲದಲ್ಲಿ ತೇವಾಂಶ ಕಾಣಿಸಿಕೊಂಡಿದೆ. ಅಚ್ಚರಿಯಿಂದ ಸಲಾಕೆಯಿಂದ ಎರಡು ಮೂರು ಅಡಿ ಆಳಕ್ಕೆ ಗುಂಡಿ ಅಗೆದಾಗ ನೀರು ಬಂದಿದೆ.
ಬರಗಾಲದ ಮಧ್ಯೆಯೂ ಜಿನುಗಿದ ಜಲ ಗಂಗೆಗೆ ಮೂಕವಿಸ್ಮಿತರಾಗಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಜನ ಗೋಡಿನಾಳ ಸುತ್ತ ಮುತ್ತಲಿನ ಜನ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ.