ವರ್ಷ ಕಳೆಯುವ ಮುನ್ನವೇ ಬೇಡವಾದಳು ಹೆಂಡತಿ: ತಲಾಖ್ ನೀಡುವಂತೆ ಪತ್ನಿಗೆ ಕಿರುಕುಳ

Published : Apr 04, 2017, 02:44 AM ISTUpdated : Apr 11, 2018, 01:09 PM IST
ವರ್ಷ ಕಳೆಯುವ ಮುನ್ನವೇ ಬೇಡವಾದಳು ಹೆಂಡತಿ: ತಲಾಖ್ ನೀಡುವಂತೆ ಪತ್ನಿಗೆ ಕಿರುಕುಳ

ಸಾರಾಂಶ

ಡೈವೋರ್ಸ್​ ಕೊಟ್ಟರೆ ಜೀವನಾಂಶ ಕೊಡಬೇಕು. ಹೆಂಡತಿಯೇ ಗಂಡನನ್ನು ಬಿಟ್ಟು ಹೋದರೆ ಜೀವನಾಂಶ ದುಡ್ದು ಉಳಿಯುತ್ತದೆ. ಹೀಗಂತಾ ಪ್ಲ್ಯಾನ್​ ಮಾಡಿರುವ  ಆಸಾಮಿಯೊಬ್ಬ  ತನ್ನ  ಹೆಂಡಿತಿಗೆ ವಿನಾ ಕಾರಣ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾನಂತೆ. ಅಷ್ಟೇ ಅಲ್ಲ ತನಗೆ ತಲಾಖ್​ ನೀಡು ಎಂದು  ಪೀಡಿಸುತ್ತಿದ್ದಾನಂತೆ.

ಚಿಕ್ಕಮಗಳೂರು(ಎ.04): ಡೈವೋರ್ಸ್​ ಕೊಟ್ಟರೆ ಜೀವನಾಂಶ ಕೊಡಬೇಕು. ಹೆಂಡತಿಯೇ ಗಂಡನನ್ನು ಬಿಟ್ಟು ಹೋದರೆ ಜೀವನಾಂಶ ದುಡ್ದು ಉಳಿಯುತ್ತದೆ. ಹೀಗಂತಾ ಪ್ಲ್ಯಾನ್​ ಮಾಡಿರುವ  ಆಸಾಮಿಯೊಬ್ಬ  ತನ್ನ  ಹೆಂಡಿತಿಗೆ ವಿನಾ ಕಾರಣ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾನಂತೆ. ಅಷ್ಟೇ ಅಲ್ಲ ತನಗೆ ತಲಾಖ್​ ನೀಡು ಎಂದು  ಪೀಡಿಸುತ್ತಿದ್ದಾನಂತೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕೋಡಿಕ್ಯಾಂಪ್ ನಿವಾಸಿ ಸುಮಯ್ಯ ಎಂಬಾಕೆಯೇ ಗಂಡನ ದೌರ್ಜನ್ಯಕ್ಕೊಳಗಾದವಳು. ಈಕೆ ಬಿಬಿಎಂ ಓದಿದ್ದು, ಒಂದು  ವರ್ಷದ ಹಿಂದೆ  ಇಂಜಿನಿಯರ್ ಆಗಿರುವ ಅಳಿಯ ಅದ್ನಾನ್ ಖಾಸಿಮ್ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಈಗ, ಈ ಇಂಜಿನಿಯರ್‌'ಗೆ ಒಂದೇ ವರ್ಷಕ್ಕೆ ಹೆಂಡತಿ ಬೇಡವಾಗಿದ್ದಾಳೆ. ಮೊದಲ ಮೂರು ತಿಂಗಳು ಚೆನ್ನಾಗಿದ್ದ ಇಂಜಿನಿಯರ್ ಎಂಟೊಂಬತ್ತು ತಿಂಗಳಿನಿಂದ ಮಾನಸಿಕ ಹಿಂಸೆ ನೀಡುತ್ತಿದ್ದಾನಂತೆ.

ವರ್ಷಕ್ಕೆ 10ಕ್ಕೂ ಹೆಚ್ಚು ರಾಜಿ-ಪಂಚಾಯಿತಿ ಮಾಡಿದರೂ ತಲಾಖ್ ಕೊಡಲಿ ಅಂತ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾನೆ. ಅಷ್ಟೇ ಅಲ್ಲ ಈತ ತನ್ನ ಅತ್ತಿಗೆಯ ಜೊತೆಯೇ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನಂತೆ. ಇದನ್ನು  ಪ್ರಶ್ನಿಸಿದರೆ ತಲಾಖ್​ ಕೊಡು ಎಂದು ಪೀಡಿಸುತ್ತಾನಂತೆ.

ಮದುವೆಯ ಬಳಿಕ ಖಾಸಿಮ್ ಹೆಂಡತಿಯನ್ನು ಭದ್ರಾವತಿಯಲ್ಲಿರುವ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದ. ಅಲ್ಲಿ ಖಾಸಿಮ್ ತಾಯಿ ಸುಮಯ್ಯ ಮೊಬೈಲ್ ಕಿತ್ತುಕೊಂಡು ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲವಂತೆ. ಇನ್ನು  ಹೆಚ್ಚಿನ ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದರಂತೆ. ಎಂಟು ಲಕ್ಷ ಸಾಲ ಮಾಡಿ ಮದುವೆ ಮಾಡಿದ ಅಪ್ಪ ಒಂದೇ ವರ್ಷಕ್ಕೆ ಮಗಳ ಸ್ಥಿತಿ ಕಂಡು ಚಿಂತೆಗೀಡಾಗಿದ್ದಾರೆ.

ಒಟ್ಟಾರೆ, ನೂರಾರು ಆಸೆ-ಕನಸು ಕಟ್ಕೊಂಡು ಹೊಸ ಬಾಳಿಗೆ ಅಡಿ ಇಟ್ಟ ಯುವತಿಗೆ ಜೀವನ ಒಂದೇ ವರ್ಷಕ್ಕೆ ಬೇಜಾರು ತರಿಸಿದೆ. ಅದೇನೇ ಇದ್ದರೂ, ಹುಡುಗಿಯ ಮನೆಯವರು ಓದು-ಹುದ್ದೆ ನೋಡಿ ಮದುವೆ ಮಾಡುವ ಮೊದಲು ಹುಡುಗನಿಗೆ ಸಂಸ್ಕೃತಿ-ಸಂಸ್ಕಾರ ಇದ್ಯಾ ಅಂತ ನೋಡಿ ಹೆಣ್ಣು ಕೊಡುವುದು ಉತ್ತಮವೆನಿಸುತ್ತದೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ