
ತುಮಕೂರು (ಅ.೨೪): ನಗರದ ಜಯನಗರ ಪಾರ್ಕ್‌ನಲ್ಲಿ ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಕಳೆದ 20 ವರ್ಷಗಳಿಂದ ಈ ವಾರ್ಡಲ್ಲಿ ಕೆಲಸ ಮಾಡುತಿದ್ದ ವಾಟರ್ ಮ್ಯಾನ್ ಹನುಮಂತಪ್ಪ ಪಾರ್ಕನ್ನೇ ನುಂಗಲು ಯತ್ನಿಸಿದ್ದ. ಮುಕ್ಕಾಲು ಎಕರೆ ಪಾರ್ಕ್‌ನಲ್ಲಿ ಮನೆಕಟ್ಟಿಕೊಂಡು, ತರಕಾರಿ ಬೆಳೆದುಕೊಂಡು ಸಂಸಾರ ಹೂಡಿದ್ದ. ಇದನ್ನ ಯಾರಾದರೂ ಪ್ರಶ್ನಿಸಿದರೆ ನಾಯಿಗಳನ್ನು ಬಿಟ್ಟು ಹೆದರಿಸುತಿದ್ದ.
ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಮನೆ ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಸಿದ್ದಗೊಳಿಸುತ್ತಿದ್ದಾರೆ. ಇನ್ನೂ ವಾಟರ್ ಮ್ಯಾನ್ ಹನುಮಂತಪ್ಪಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅಷ್ಟೇ ಅಲ್ಲ ಸ್ಥಳೀಯ ನಿವಾಸಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತಿದ್ದ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.