ಸಚಿವರು, ಸಂಸದರ ಮನೆ ಎದುರು ಧರಣಿ ನಡೆಸುವುದಾಗಿ ಕಲ್ಲೂರು ಮೇಘರಾಜ ಎಚ್ಚರಿಕೆ

Published : Oct 22, 2016, 03:13 PM ISTUpdated : Apr 11, 2018, 01:10 PM IST
ಸಚಿವರು, ಸಂಸದರ ಮನೆ ಎದುರು ಧರಣಿ ನಡೆಸುವುದಾಗಿ ಕಲ್ಲೂರು ಮೇಘರಾಜ ಎಚ್ಚರಿಕೆ

ಸಾರಾಂಶ

ಅಂತ್ಯ ಸಂಸ್ಕಾರ ಯೋಜನೆ ಅಡಿ ಜಿಲ್ಲೆಯಲ್ಲಿ ೨೧೪೦ ಅರ್ಜಿಗಳಿಗೆ ಹಣ ಮಂಜೂರಾಗಿದ್ದರೂ ಅದನ್ನು ಬಿಡುಗಡೆಗೊಳಿಸದೇ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ನಿರ್ಲಕ್ಷಿಸಿದ್ದಾರೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ಮುಖ್ಯಸ್ಥ ಕಲ್ಲೂರು ಮೇಘರಾಜ ಹೇಳಿದರು.

ಶಿವಮೊಗ್ಗ (ಅ.22): ಅಂತ್ಯ ಸಂಸ್ಕಾರ ಯೋಜನೆ ಅಡಿ ಜಿಲ್ಲೆಯಲ್ಲಿ ೨೧೪೦ ಅರ್ಜಿಗಳಿಗೆ ಹಣ ಮಂಜೂರಾಗಿದ್ದರೂ ಅದನ್ನು ಬಿಡುಗಡೆಗೊಳಿಸದೇ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ನಿರ್ಲಕ್ಷಿಸಿದ್ದಾರೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ಮುಖ್ಯಸ್ಥ ಕಲ್ಲೂರು ಮೇಘರಾಜ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಯಾವುದೇ ವ್ಯಕ್ತಿ ನಿಧರಾದಲ್ಲಿ ಅವರ ವಾರಸುದಾರರಿಗೆ ಅಂತ್ಯಸಂಸ್ಕಾರ ಯೋಜನೆಯಡಿಯಲ್ಲಿ ನೀಡುವ ₹೫ ಸಾವಿರಗಳಲ್ಲಿ ಮಂಜೂರಾದ ೨೧೪೬ ಅರ್ಜಿಗಳಿಗೆ ಜಿಲ್ಲೆಗೆ ₹೧,೭೩ ಕೋಟಿ ಮಂಜೂರಾಗಿದೆ. ಆದರೆ ಇದನ್ನು ಮೃತ ವ್ಯಕ್ತಿಯ ಕುಟುಂಬಕ್ಕೆ ಬಿಡುಗಡೆ ಮಾಡಿಲ್ಲ. ಕಳೆದ ಮೂರ‌್ನಾಲ್ಕು ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದೆ ವಂಚಿಸುತ್ತಿದೆ. ಇದನ್ನು ನಮ್ಮ ಟ್ರಸ್ಟ್ ಖಂಡಿಸುತ್ತದೆ ಎಂದರು.

ವಾರ್ಷಿಕ ರೂ.17 ಸಾವಿರವಿರುವ ಬಡ ಕುಟುಂಬದ ದುಡಿಯುವ ವ್ಯಕ್ತಿ ಮೃತನಾದಲ್ಲಿ ಅವರ ಅವಲಂಭಿತ ವಿಧವೆಗೆ ಏಕ ಕಂತಿನಲ್ಲಿ ನೀಡುವ ರೂ.20 ಸಾವಿರಗಳಲ್ಲಿ 900 ಅರ್ಜಿಗಳು 2016 ನೇ ಸೆಪ್ಟಂಬರ್ ಅಂತ್ಯಕ್ಕೆ ಮಂಜೂರಾಗಿ ಜಿಲ್ಲೆಗೆ ರೂ.1.8 ಕೋಟಿ ಬರಬೇಕಿದೆ. ಈ ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆಯ ಹಣದ ಬ್ಗಗೆ ಚಕಾರವೆತ್ತದ ಸಂಸದ ಬಿಎಸ್‌ವೈ ಸಹ ಕಡುಬಡ ವಿಧವೆಯರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.

ಈ ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಅರ್ಜಿಗಳನ್ನು ಸಲ್ಲಿಸುವಾಗ ನೂರಾರು ರುಪಾಯಿ ಖರ್ಚುಮಾಡುತ್ತಾರೆ. ಆದರೆ ಅರ್ಜಿದಾರರ ಅರ್ಜಿಗಳು ಮಂಜೂರಾ ಗಿವೆಯೋ ಎಂಬ ಬಗ್ಗೆ ಹಿಂಬರಬರಹವನ್ನು ನೀಡದೇ ಎಲ್ಲಾ ತಹಸೀಲ್ದಾರರು ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಗೆ ಮಂಜೂರಾದ ಹಣವನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಕಾಗೋಡು ತಿಮ್ಮಪ್ಪರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು. ಅದೇ ರೀತಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಕುಟುಂಬ ಭದ್ರತಾ ಯೋಜನೆಯಡಿ ಜಿಲ್ಲೆಗೆ ಬರಬೇಕಾದ ರೂ.1.8 ಕೋಟಿ ಬಿಡುಗಡೆ ಮಾಡಿಸದ್ದಿದರೆ ಸಂಸದ ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ