ತರಿಕೆರೆ ತಾಲೂಕನ್ನು ಬರ ಪೀಡಿತ ಎಂದು ಘೋಷಿಸಲು ಶೋಭಾ ಕರಂದ್ಲಾಜೆ ಆಗ್ರಹ

By Suvarna Web DeskFirst Published Oct 25, 2016, 3:56 PM IST
Highlights

ತಾಲೂಕಿನ 80 ಕೆರೆಗಳಿಗೆ ಮೊದಲು ನೀರು ತುಂಬಿಸಬೇಕು. ತಾಲೂಕನ್ನು ಬರ ಪೀಡಿತ ಎಂದು ಘೋಷಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತರಿಕೆರೆ (ಅ.25): ತಾಲೂಕಿನ 80 ಕೆರೆಗಳಿಗೆ ಮೊದಲು ನೀರು ತುಂಬಿಸಬೇಕು. ತಾಲೂಕನ್ನು ಬರ ಪೀಡಿತ ಎಂದು ಘೋಷಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಿಜೆಪಿಯಿಂದ ಮಂಗಳವಾರ ಏರ್ಪಾಡಾಗಿದ್ದ ತಾಲೂಕಿನ ಜ್ವಲಂತ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ಅಜ್ಜಂಪುರದಿಂದ ತರೀಕೆರೆಗೆ 24 ಕಿ.ಮೀ ರೈತರ ಪಾದಯಾತ್ರೆ ಕಾರ್ಯಕ್ರಮದಲ್ಲಿ, ಮಿನಿ ವಿಧಾನ ಸೌಧದ ಬಳಿ ನೆಡೆದ ಸಭೆಯಲ್ಲಿ ಮಾತನಾಡಿದರು.

ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲೂಕಿನ 80 ಕೆರೆಗಳಿಗೆ ನೀರು ತುಂಬಿಸಲು ಹಣ ಕೂಡ ಇಟ್ಟಿದ್ದರು. ಆದರೆ ಇಲ್ಲಿಯವರೆಗೆ ಒಂದಿಂಚೂ ಕೆರೆಗಳ ಕಾಮಗಾರಿ ಪ್ರಾರಂಭವಾಗಿಲ್ಲ, ಈರುಳ್ಳಿ ಹೊಲಗಳಲ್ಲಿ ಬಿದ್ದು ಕೊಳೇಯುತ್ತಾಯಿದೆ. ಸರ್ಕಾರ ಬೆಂಬಲ ಬೆಲೆ ಘೋಷಿಸಿಲ್ಲ, ಅವರ್ತನ ನಿಧಿ ಇಲ್ಲ, ನಮ್ಮ ಸಂಕಷ್ಟವನ್ನು ಸರ್ಕಾರ ಆಲಿಸುತ್ತಿಲ್ಲ, ತಾಲೂಕಿನಲ್ಲಿ ದನಗಳು ಮೇಯಿಸಲು ಇದ್ದ ಗೋಮಾಳಗಳೆಲ್ಲಾ ರಿಯಲ್ ಎಸ್ಟೇಟ್‌ಗಳಾಗುತ್ತಿದೆ ಎಂದು ಆರೋಪಿಸಿದರು.

ವರದಿ ಕಳಿಸಿಕೊಡಲು ಒತ್ತಾಯ

ತಾಲೂಕಿನ ಕೆರೆಗಳ ಸರ್ವೆ ಕಾರ್ಯ, ಕಾಮಗಾರಿ ಡಿಪಿಆರ್ ಆಗಿಲ್ಲ, ತಾಲೂಕನ್ನು ತಕ್ಷಣವೇ ಬರ ಪೀಡಿತ ಎಂದು ಪ್ರಕಟಿಸಬೇಕು. ಕೆರೆಗಳಿಗೆ ನೀರು ತುಂಬಿಸುವ ಕುರಿತು ಸರ್ಕಾರದ ಭ ರವಸೆ ಅಗತ್ಯ. ಅಧಿಕಾರಿಗಳು ಈ ಬಗ್ಗೆ ಕೂಡಲೇ ವರದಿ ಕಳಿಸಬೇಕು, ನಾವು ಶಾಂತಿಯುತವಾಗಿ ಹೋರಾಟ ಮಾಡಿ ಸರ್ಕಾರಕ್ಕೆ ರೈತರ ಧ್ವನಿ ಮುಟ್ಟಿಸಿದ್ದೇವೆ. ಸಮಸ್ಯೆಗಳನ್ನು ಬಗೆಹರಿ ಸದಿದ್ದರೆ ಮುಂದೆ ಹೋರಾಟ ನೆಡೆಸಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ತಾಲೂಕಿನ ೮೦ ಕೆರೆಗಳಿಗೆ ನೀರು ಹಾಯಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಣ ಕೂಡ ಇಟ್ಟಿದ್ದರು, ಭದ್ರಾ ನದಿ ನೀರು ನಮ್ಮದು, ನಮ್ಮ ನೀರು ನಮಗೆ ಕೊಡಬೇಕು, ಮುಂದೆ ನಮಗೆ ಕುಡಿಯಲು ನೀರು ಕೂಡ ಸಿಗುವುದಿಲ್ಲ, 15 ರೊಳಗಾಗಿ ಕೆರೆ ಕಾಮಗಾರಿಗಳ ಬಗ್ಗೆ ಎಸ್ಟಿಮೇಟ್ ಮಾಡಿ ಡಿಪಿಆರ್ ತಯಾರಿಸದಿದ್ದರೆ ಸುರಂಗ ಮಾರ್ಗ ಕಾಮಗಾರಿ ಸ್ಥಗಿತಗೊಳಿಸುವುದು ಖಂಡಿತ ಎಂದರು.

ಮನೋಜ್‌ಕುಮಾರ್ ಮನವಿ ಪತ್ರ ಓದಿ ತಹಸೀಲ್ದಾರ್‌ಗೆ ಅರ್ಪಿಸಿದರು.

click me!