ಕೇಂದ್ರೀಯ ವಿದ್ಯಾಲಯ ಬಳಿ ಅಲೆಮಾರಿಗಳಿಗೆ ನಿವೇಶನ; ಗ್ರಾಮಸ್ಥರಿಂದ ಪ್ರತಿಭಟನೆ

By Suvarna Web DeskFirst Published May 9, 2017, 8:25 AM IST
Highlights

ಸಮೀಪದ ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲಿ ಅಲೆಮಾರಿ ಸಮುದಾಯಕ್ಕೆ ನಿವೇಶನ ನೀಡಲು ಹೊರಟಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಅರಕೆರೆ, ಹೊಸಹಳ್ಳಿ ಮತ್ತು ಅಮಲಾಪುರ ಗ್ರಾಪಂ ವ್ಯಾಪ್ತಿಯ ಜನ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ತುಮಕೂರು (ಮೇ.09):  ಸಮೀಪದ ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲಿ ಅಲೆಮಾರಿ ಸಮುದಾಯಕ್ಕೆ ನಿವೇಶನ ನೀಡಲು ಹೊರಟಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಅರಕೆರೆ, ಹೊಸಹಳ್ಳಿ ಮತ್ತು ಅಮಲಾಪುರ ಗ್ರಾಪಂ ವ್ಯಾಪ್ತಿಯ ಜನ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ತುಮಕೂರು ಸಮೀಪದ ಯಲ್ಲಾಪುರದಲ್ಲಿದ್ದ ಅಲೆಮಾರಿ ಸಮುದಾಯಕ್ಕೆ ಸೇರಿದ ಸುಮಾರು 40 ಕುಟುಂಬಗಳನ್ನು ಈ ಹಿಂದೆ ಹರಿಯಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಏಕಾಎಕಿ ನಗರಕ್ಕೆ ಸಮೀಪದ ಕೇಂದ್ರೀಯ ವಿದ್ಯಾ ಲಯದ ಪಕ್ಕದಲ್ಲಿಯೇ ಅರಕೆರೆ ಗ್ರಾಪಂನ ಸರ್ವೆ ನಂ.31ರಲ್ಲಿ ಇರುವ ಸುಮಾರು 2 ಎಕರೆ ಜಾಗದಲ್ಲಿ ಸದರಿ ನಲವತ್ತು ಕುಟುಂಬಗಳಿಗೆ ನಿವೇಶನ ಕಲ್ಪಿಸಲು ಜಾಗ ಗುರುತಿಸಿ ಜಿಲ್ಲಾಡಳಿತ ಮಂಜೂರಾತಿ ನೀಡಲು ಮುಂದಾಗಿರುವುದು ಖಂಡ ನೀಯ ಎಂದು ಮೇಲಿನ 3 ಗ್ರಾಮಗಳ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಅರಕೆರೆ, ಅಮಲಾಪುರ ಮತ್ತು ಹೊಸ ಹಳ್ಳಿ ಗ್ರಾಪಂಗೆ ಸೇರಿದ ಸಾವಿರ ಜನರು ನಿವೇಶನವಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ. ಆದರೆ ಸದರಿ ಗ್ರಾಪಂಗಳಿಗೆ ಸೇರಿದ ಜಾಗದಲ್ಲಿ ಅಲೆಮಾರಿಗಳಿಗೆ ಮಾತ್ರ ಜಾಗ ನೀಡಲಾಗಿದೆ. ಅದಕ್ಕೆ ಬದ ಲಾಗಿ ಮೇಲಿನ ಗ್ರಾಪಂ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೂ ಸದರಿ ಜಾಗ ದಲ್ಲಿಯೇ ನಿವೇಶನ ನೀಡುವಂತೆ ಪ್ರತಿ ಭಟನಾ ನಿರತರು ಒತ್ತಾಯಿಸಿದರು.

ಮೇಲಿನ ಮೂರು ಗ್ರಾಪಂಗಳ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿನ ಸಾವಿರಾರು ಕುಟುಂಬಗಳು ಬಾಡಿಗೆ ಮನೆ ಗಳಲ್ಲಿ ವಾಸವಾಗಿದ್ದಾರೆ. ಸ್ವಂತ ನಿವೇಶನ ಹೊಂದುವಷ್ಟುಅರ್ಥಿಕವಾಗಿ ಸಬಲ ರಾಗಿಲ್ಲ. ಈ ಹಿನ್ನೆಲೆಯಲ್ಲಿ ಅರಕೆರೆ ಸರ್ವೆ ನಂ.31ರಲ್ಲಿ ಅರಕೆರೆ, ಅಮಲಾಪುರ ಮತ್ತು ಹೊಸಹಳ್ಳಿ ಗ್ರಾಪಂನ ನಿವೇಶನ ರಹಿತ ಬಡವರಿಗೂ ನಿವೇಶನ ಹಂಚಿಕೆ ಮಾಡುವಂತೆ ಮನವಿ ಮಾಡಿದರು. ಪ್ರತಿಭಟನೆ ನೇತೃತ್ವವನ್ನು ಅರಕೆರೆ ಗ್ರಾಪಂನ ಅಧ್ಯಕ್ಷ ಸಂಜೀವಮ್ಮ, ಬಹುಜನ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ರಾಮ ಕೃಷ್ಣಪ್ಪ ವಹಿಸಿದ್ದರು. ಸೈಯದ್‌ ದಾದಾ ಪೀರ್‌, ರೇಷ್ಮ ಸುಲ್ತಾನ್‌, ತಾಹೀರ್‌, ಶಬೀನ, ಮುಸ್ತಾಕ್‌ ಅಹಮದ್‌, ಉಮಾ ಶಂಕರ್‌, ರಾಜಶೇಖರ್‌ ಇತರರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

click me!