ಹಣದ ಮೋಹಕ್ಕೆ ರಕ್ತ ಸಂಬಂಧವನ್ನೇ ತಿರುಚಿದ: ಅಕ್ಕ ಬದುಕಿರುವಾಗಲೇ ಡೆತ್ ಸರ್ಟೀಫಿಕೆಟ್ ರೆಡಿ

By Suvarna Web DeskFirst Published Apr 30, 2017, 9:02 PM IST
Highlights

ಅವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ರಕ್ತ ಹಂಚಿಕೊಂಡು ಹುಟ್ಟಿದವರು. ಒಂದೇ ತಟ್ಟೆಯಲ್ಲಿ ಅನ್ನ ತಿಂದು ಬೆಳೆದವರು. ಆದರೆ ಸ್ವಂತ ಅಕ್ಕನ ಆಸ್ತಿ ಮೇಲೆ ಕಣ್ಣು ಹಾಕಿದ್ದ ಸಹೋದರ, ಆಕೆ ಇನ್ನು ಬದುಕಿರುವಾಗಲೇ   ದಾಖಲೆಗಳಲ್ಲಿ ಅವಳನ್ನು ಸಾಯಿಸಿ, ಅನಾಥಳನ್ನಾಗಿ ಮಾಡಿ, ಅವರ ಆಸ್ತಿಯನ್ನು ಲಪಟಾಯಿಸಿದ್ದಾನೆ. ಕೊನೆಗೂ ಮೋಸದಾಟದಿಂದ ಸಿಕ್ಕಿ ಬಿದ್ದು ಈಗ ಕಂಬಿ ಹಿಂದೆ ಸೇರಿದ್ದಾನೆ.

ಕೋಲಾರ(ಮೇ. 01): ಅವರಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ರಕ್ತ ಹಂಚಿಕೊಂಡು ಹುಟ್ಟಿದವರು. ಒಂದೇ ತಟ್ಟೆಯಲ್ಲಿ ಅನ್ನ ತಿಂದು ಬೆಳೆದವರು. ಆದರೆ ಸ್ವಂತ ಅಕ್ಕನ ಆಸ್ತಿ ಮೇಲೆ ಕಣ್ಣು ಹಾಕಿದ್ದ ಸಹೋದರ, ಆಕೆ ಇನ್ನು ಬದುಕಿರುವಾಗಲೇ   ದಾಖಲೆಗಳಲ್ಲಿ ಅವಳನ್ನು ಸಾಯಿಸಿ, ಅನಾಥಳನ್ನಾಗಿ ಮಾಡಿ, ಅವರ ಆಸ್ತಿಯನ್ನು ಲಪಟಾಯಿಸಿದ್ದಾನೆ. ಕೊನೆಗೂ ಮೋಸದಾಟದಿಂದ ಸಿಕ್ಕಿ ಬಿದ್ದು ಈಗ ಕಂಬಿ ಹಿಂದೆ ಸೇರಿದ್ದಾನೆ.

ಕೋಲಾರ ಜಿಲ್ಲೆ ಮುಳಬಾಗಿಲಿನ ನಾಗಸಂದ್ರ ನಿವಾಸಿ  ಸರಸಮ್ಮ. ತನ್ನ ಹುಟ್ಟೂರಾದ ನಾಗಸಂದ್ರ ಗ್ರಾಮದಲ್ಲಿ 1.39 ಎಕರೆ ಭೂಮಿಯನ್ನು ಕೂಲಿಮಾಡಿ ಸಂಪಾದಿಸಿದ್ದರು.ಆದರೆ ಬೆಂಗಳೂರಿನಲ್ಲಿ ನೆಲೆಸಿರುವ ಈಕೆಯ ತಮ್ಮ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ. ಆದ್ರೆ ಇತ್ತೀಚೆಗೆ ತಮ್ಮ ಆಸ್ತಿಯ ಕಂದಾಯ ಕಟ್ಟಲು ನಾಡಕಛೇರಿಗೆ ತೆರಳಿದಾಗ ಸರಸಮ್ಮರಿಗೆ  ಒಂದು ಬಿಗ್​ ಶಾಕ್ ಕಾದಿತ್ತು.

ಅನುಮಾನಗೊಂಡ ಸರಸಮ್ಮ ತನ್ನ  ಮಗಳೊಂದಿಗೆ ದಾಖಲೆ ಪರಿಶೀಲಿಸೋಕೆ ಮುಂದಾದರು. ಆಗ ಸಿಕ್ಕ ದಾಖಲೆಗಳಲ್ಲಿ ಸರಸಮ್ಮನ ನಕಲಿ  ಡೆತ್ ಸರ್ಟೀಫಿಕೆಟ್ ಹಾಗೂ ನಕಲಿ ವಂಶವೃಕ್ಷ ಸೃಷ್ಟಿಯಾಗಿತ್ತು. ತನ್ನ ತಮ್ಮ ಅಮರನಾರಾಯಣರಾಜು ಆಸ್ತಿಯನ್ನು ಲಪಟಾಯಿಸಿ ದ್ರೋಹವೆಸಗಿದ್ದು ಬಯಲಾಗಿತ್ತು. ಅಲ್ಲದೇ ಈ ಕೃತ್ಯದಲ್ಲಿ  ಕಂದಾಯ ಇಲಾಖೆಯ ಸುಮಾರು 9 ಜನ ಅಧಿಕಾರಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡ ಸರಸಮ್ಮ ಸದ್ಯ ತನ್ನ ತಮ್ಮನ ಮೇಲೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಮುಳಬಾಗಿಲು ಗ್ರಾಮಾಂತರ ​ ಠಾಣೆಯಲ್ಲಿ  ಕೇಸ್​ ಫೈಲ್​ ಮಾಡಿದ್ದಾರೆ.

ಇನ್ನು ಸರಸಮ್ಮರ ದೂರಿನ ಮೇರೆಗೆ ಮೊದಲು ಆರೋಪಿ ಅಮರನಾರಾಯಣರಾಜುನನ್ನು ಮುಳಬಾಗಿಲು ಗ್ರಾಮಾಂತರ ಠಾಣೆ ಪಿಎಸ್​'ಐ ಗೋವಿಂದು ಬಂಧಿಸಿದ್ದಾರೆ. ದಾಖಲಾತಿಗಳನ್ನು ವಶಪಡಿಸಿಕೊಂಡ ನಂತರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಬಂದಿಸುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ್ದರೂ, ಹಣದ ಮೋಹ ಹೀಗೆ ರಕ್ತ ಸಂಬಂದವನ್ನೇ ಮರೆಸುತ್ತದೆ ಎಂದು ತಿಳಿಯಬಹುದು.

click me!