ಬೆಸ್ಕಾಂನಿಂದ ದೀಪಾವಳಿಗೆ ಕತ್ತಲೆ ಭಾಗ್ಯ,ಲೋಡ್ ಶೆಡ್ಡಿಂಗ್‌ನಿಂದ ರೋಸಿಹೋದ ಜನತೆ

Published : Oct 26, 2016, 03:11 PM ISTUpdated : Apr 11, 2018, 01:05 PM IST
ಬೆಸ್ಕಾಂನಿಂದ ದೀಪಾವಳಿಗೆ ಕತ್ತಲೆ ಭಾಗ್ಯ,ಲೋಡ್ ಶೆಡ್ಡಿಂಗ್‌ನಿಂದ ರೋಸಿಹೋದ ಜನತೆ

ಸಾರಾಂಶ

ದಾವಣಗೆರೆಯಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ತೀವ್ರತೆ ಎಷ್ಟಿದೆ ಎಂಬುದಕ್ಕೆ ಬೆಸ್ಕಾಂ ಅಧಿಕಾರಿಗಳ ಈ ಉತ್ತರ ವಾಸ್ತವಾಂಶ ಕಟ್ಟಿಕೊಡುತ್ತದೆ. ಲೋಡ್ ಶೆಡ್ಡಿಂಗ್ ಆದ್ರೆ ಇಂತಿಷ್ಟು ಗಂಟೆ ಅಂತ ಮೊದಲೇ ಘೋಷಣೆ ಮಾಡಿ ಅದರಂತೆ ಸಹಕರಿಸಲು ಗ್ರಾಹಕರಲ್ಲಿ ಮನವಿ ಮಾಡಿಕೊಳ್ಳಲಾಗುತ್ತದೆ. ಆದರೆ ಇಲಾಖೆ ಅಧಿಕಾರಿಗಳ ಪ್ರಕಾರ ಇದು ಅನ್ ಶೆಡ್ಯೂಲ್ ಲೋಡ್ ಶೆಡ್ಡಿಂಗ್. ಈ ವಿಚಾರದಲ್ಲಿ ನಾವು ಅಸಹಾಯಕರು. ಹೆಚ್ಚಿಗೆ ಏನೂ ಕೇಳಬೇಡಿ ಎಂಬ ಉತ್ತರ ಬರುತ್ತದೆ.

ವಿಶೇಷ ವರದಿ

ದಾವಣಗೆರೆ (ಅ.26): ಕರೆಂಟು ಯಾವಾಗ ಬರುತ್ತೆ, ಯಾವಾಗ ಹೋಗುತ್ತೆ ಅಂತ ಹಾಗೆಲ್ಲ ಹೇಳೋಕಾಗಲ್ಲ. ಬೆಂಗಳೂರಿನಿಂದ ಅವ್ರ ಕೊಟ್ರೆ ನಾವು ನಿಮಗೆ ಕೊಡ್ತೇವೆ.

ದಾವಣಗೆರೆಯಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ತೀವ್ರತೆ ಎಷ್ಟಿದೆ ಎಂಬುದಕ್ಕೆ ಬೆಸ್ಕಾಂ ಅಧಿಕಾರಿಗಳ ಈ ಉತ್ತರ ವಾಸ್ತವಾಂಶ ಕಟ್ಟಿಕೊಡುತ್ತದೆ. ಲೋಡ್ ಶೆಡ್ಡಿಂಗ್ ಆದ್ರೆ ಇಂತಿಷ್ಟು ಗಂಟೆ ಅಂತ ಮೊದಲೇ ಘೋಷಣೆ ಮಾಡಿ ಅದರಂತೆ ಸಹಕರಿಸಲು ಗ್ರಾಹಕರಲ್ಲಿ ಮನವಿ ಮಾಡಿಕೊಳ್ಳಲಾಗುತ್ತದೆ. ಆದರೆ ಇಲಾಖೆ ಅಧಿಕಾರಿಗಳ ಪ್ರಕಾರ ಇದು ಅನ್ ಶೆಡ್ಯೂಲ್ ಲೋಡ್ ಶೆಡ್ಡಿಂಗ್. ಈ ವಿಚಾರದಲ್ಲಿ ನಾವು ಅಸಹಾಯಕರು. ಹೆಚ್ಚಿಗೆ ಏನೂ ಕೇಳಬೇಡಿ ಎಂಬ ಉತ್ತರ ಬರುತ್ತದೆ.

ಚಳಿಗಾಲದ ವೇಳೆ ವಿದ್ಯುತ್ ಪೂರೈಕೆಯ ವ್ಯತ್ಯಯ ಕಂಡು ಜನತೆ ಬೆಚ್ಚಿ ಬಿದ್ದಿದ್ದಾರೆ. ಮುಂದೆ ಬೇಸಿಗೆ ದಿನಗಳಲ್ಲಿ ಏನೋ ಎತ್ತ ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ. ಬೆಳಗ್ಗೆ 6 ಗಂಟೆಯಿಂದ ಆರಂಭವಾಗುವ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯ ರಾತ್ರಿ ಹತ್ತು ಗಂಟೆವರೆಗೂ ಮುಂದುವರಿಯುತ್ತದೆ. ಎರಡು ಗಂಟೆ ಪೂರೈಕೆ, ಎರಡು ಗಂಟೆ ಸ್ಥಗಿತದ ಆಧಾರದ ಮೇಲೆ ನಿರ್ವಹಣೆಯಾಗುತ್ತದೆ. ದಿನಕ್ಕೆ ಆರರಿಂದ 8 ಗಂಟೆ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತದೆ. ಕೆಲವು ಸಾರಿ ಗಂಟೆಗಳು ಉಲ್ಟಾ ಆಗಿ ಹೋದಾಗಲೇ, ಬಂದಾಗಲೇ ಗೊತ್ತು ಎಂಬುವಂತಾಗುತ್ತದೆ.

ವಿದ್ಯುತ್ ಉತ್ಪಾದನೆಯ ಪ್ರಮಾಣ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಕಡಿತ ಅನಿವಾರ್ಯವೆಂಬ ಅಭಿಪ್ರಾಯ ಬೆಸ್ಕಾಂನದು. ಜಿಲ್ಲೆ ತೀವ್ರ ಬರಗಾಲ ಎದುರಿಸುತ್ತಿದ್ದು ರೈತರು ಒಂದೆಡೆ ಪಂಪುಸೆಟ್ಟುಗಳಿಗೆ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದರೆ, ಮತ್ತೊಂದೆಡೆ ನಗರವಾಸಿಗಳು ಕತ್ತಲೆಯಲ್ಲಿ ಕಾಲ ನೂಕುವಂತಾಗಿದೆ. ಅನಧಿಕೃತವಾಗಿ ಜಾರಿಯಲ್ಲಿರುವ ಈ ಲೋಡ್ ಶೆಡ್ಡಿಂಗ್ ಸದ್ಯಕ್ಕೆ ಸುಧಾರಣೆ ಆದಂತೆ ಕಾಣಿಸುತ್ತಿಲ್ಲ.

ರೈತರಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ತೊಂದರೆ ಆಗದಂತೆ ನೋಡಿಕೊಳ್ಳುತ್ತಿರುವ ಬೆಸ್ಕಾಂ ನಗರ ವಾಸಿಗಳ ಮೇಲೆ ಗಧಾಪ್ರಹಾರ ಮಾಡಿದೆ. ಪ್ರಸರಣಾ ಕೇಂದ್ರದಿಂದ ಬರುವ ವಿದ್ಯುತ್ ಪ್ರಮಾಣದಲ್ಲಿ ಇಡೀ ಜಿಲ್ಲೆಗೆ ಏಕಕಾಲಕ್ಕೆ ಪೂರೈಕೆ ಮಾಡುವುದು ಅಸಾಧ್ಯವೆಂದರಿತಿದೆ. 

ಪವನ, ಜಲ ವಿದ್ಯುತ್ ಹಾಗೂ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯಲ್ಲಿ ಆಗಿರುವ ಭಾರೀ ಪ್ರಮಾಣದ ಇಳಿಕೆ ಉತ್ಪಾದನೆ, ಪ್ರಮಾಣದಲ್ಲಿ ಆಗಿರುವ ಅಗಾಧ ಪ್ರಮಾಣದ ಇಳಿಕೆ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ರಾಜ್ಯದ ಒಟ್ಟು ವಿದ್ಯುತ್ ಬೇಡಿಕೆಯಲ್ಲಿ ರಾಯಚೂರು ಶಾಖೋತ್ಪನ್ನ ಮತ್ತು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳು ಶೇ.30 ರಷ್ಟು ಪೂರೈಕೆ ಮಾಡುತ್ತವೆ. ಈ ಕೇಂದ್ರಗಳಲ್ಲಿ 2 ಘಟಕಗಳು ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಕುಂಠಿತಗೊಂಡಿದೆ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರ ವಿದ್ಯುತ್ ಖರೀದಿ ಮಾಡಿ ಪೂರೈಕೆ ಮಾಡುವ ತನಕ ಸಮಸ್ಯೆ ಇದ್ದದ್ದೇ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಬೆಸ್ಕಾಂನ ಹಿರಿಯ ಅಧಿಕಾರಿಗಳು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ