ಸಾರಿಗೆ ಬಸ್, ಅಕ್ಕಿ ಲಾರಿ ಮುಖಾಮುಖಿ ಡಿಕ್ಕಿ: ಐವರ ಸಾವು 10ಕ್ಕೂ ಹೆಚ್ಚು ಮಂದಿ ಗಾಯ

Published : Oct 26, 2016, 02:04 PM ISTUpdated : Apr 11, 2018, 12:58 PM IST
ಸಾರಿಗೆ ಬಸ್, ಅಕ್ಕಿ ಲಾರಿ ಮುಖಾಮುಖಿ ಡಿಕ್ಕಿ:  ಐವರ ಸಾವು 10ಕ್ಕೂ ಹೆಚ್ಚು ಮಂದಿ ಗಾಯ

ಸಾರಾಂಶ

ಎಚ್.ಡಿ. ಕೋಟೆ ಸಾರಿಗೆ ಘಟಕಕ್ಕೆ ಸೇರಿದ ಬಸ್ (ಕೆಎ 09 ಎಫ್ 5204) ಹುಣಸೂರಿನಿಂದ ಬೆಳಗ್ಗೆ 6.30ಕ್ಕೆ ಹೊರಟಿತ್ತು. ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಿಂದ ಕೊಡಗಿಗೆ ಅಕ್ಕಿ ಸಾಗಿಸುತ್ತಿದ್ದ ಲಾರಿಗೆ ಅರಬಿ ತಿಟ್ಟಿನ ಜಡಗನಕೊಪ್ಪಲು ಗೇಟ್ ಬಳಿ ಮುಖಾಮುಖಿ ಡಿಕ್ಕಿ ಹೊಡೆಯಿತು. ಅಪಘಾತದ ತೀವ್ರತೆಗೆ ಲಾರಿಯ ಚಾಲಕ, ಕ್ಲೀನರ್, ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ, ಬಸ್ ಚಾಲಕ ಮತ್ತು ಓರ್ವ ಅಪರಿಚಿತ ವೃದ್ಧ ಆಸ್ಪತ್ರೆಯಲ್ಲಿ ಮೃತಪಟ್ಟರು. ಅಲ್ಲದೆ ಮೈಸೂರಿನ ಜೆಸಿ ಕಾಲೇಜಿಗೆ ಬಸ್‌ನಲ್ಲಿ ತೆರಳುತ್ತಿದ್ದ ಹುಣಸೂರಿನ ಅಂಕಿತ್ ಜೈನ್ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಕಾಲು ಜಖಂಗೊಂಡಿದ್ದರಿಂದ ಎರಡೂ ಕಾಲನ್ನು ಕತ್ತರಿಸಲಾಗಿದೆ. ಗುಂಡ್ಲುಪೇಟೆಯ ಎಸ್.ಜೆ. ಮುಕುಂದ, ಹುಣಸೂರಿನ ವಿಲಿಯಂ ಸದಾನಂದ, ವಿರಾಜಪೇಟೆಯ ತಂಗಮ್ಮ, ಅಯ್ಯಪ್ಪ, ಪಿರಿಯಾಪಟ್ಟಣ ತಾಲೂಕು ಮಲಗನಕೆರೆಯ ಸಂತೋಷಕುಮಾರ್, ಹಿರಿಕ್ಯಾತನಹಳ್ಳಿಯ ಸಾರಿಗೆ ನೌಕರ ರಾಮಸ್ವಾಮಿ ಸೇರಿ ಹಲವರು ಗಾಯಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹುಣಸೂರು (ಅ.26): ಸಾರಿಗೆ ಬಸ್ ಮತ್ತು ಅಕ್ಕಿ ಸಾಗಿಸುತ್ತಿದ್ದ ಲಾರಿಯ ನಡುವೆ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟು, ೧೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮೈಸೂರು- ಹುಣಸೂರು ಮುಖ್ಯರಸ್ತೆಯ ಜಡಗನಕೊಪ್ಪಲು ಗೇಟ್ ಬಳಿ ಸಂಭವಿಸಿದೆ.

ಕೆ.ಆರ್. ನಗರ ನಿವಾಸಿ ಬಸ್ ಚಾಲಕ ಸದಾಶಿವ (50), ದಾವಣಗೆರೆ ಜಿಲ್ಲೆ ಹರಿಹರ ನಿವಾಸಿ ಮತ್ತು ಬಸ್‌ನ ನಿರ್ವಾಹಕ ದೇವರಾಜು, ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಲಾರಿ ಚಾಲಕ ಅಂಜು, ಕ್ಲೀನರ್ ರಾಮ್‌ಜಿ ಮತ್ತು ಅಪರಿಚಿತ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಘಟನೆ ವಿವರ:

ಎಚ್.ಡಿ. ಕೋಟೆ ಸಾರಿಗೆ ಘಟಕಕ್ಕೆ ಸೇರಿದ ಬಸ್ (ಕೆಎ 09 ಎಫ್ 5204) ಹುಣಸೂರಿನಿಂದ ಬೆಳಗ್ಗೆ 6.30ಕ್ಕೆ ಹೊರಟಿತ್ತು. ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಿಂದ ಕೊಡಗಿಗೆ ಅಕ್ಕಿ ಸಾಗಿಸುತ್ತಿದ್ದ ಲಾರಿಗೆ ಅರಬಿ ತಿಟ್ಟಿನ ಜಡಗನಕೊಪ್ಪಲು ಗೇಟ್ ಬಳಿ ಮುಖಾಮುಖಿ ಡಿಕ್ಕಿ ಹೊಡೆಯಿತು. ಅಪಘಾತದ ತೀವ್ರತೆಗೆ ಲಾರಿಯ ಚಾಲಕ, ಕ್ಲೀನರ್, ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ, ಬಸ್ ಚಾಲಕ ಮತ್ತು ಓರ್ವ ಅಪರಿಚಿತ ವೃದ್ಧ ಆಸ್ಪತ್ರೆಯಲ್ಲಿ ಮೃತಪಟ್ಟರು. ಅಲ್ಲದೆ ಮೈಸೂರಿನ ಜೆಸಿ ಕಾಲೇಜಿಗೆ ಬಸ್‌ನಲ್ಲಿ ತೆರಳುತ್ತಿದ್ದ ಹುಣಸೂರಿನ ಅಂಕಿತ್ ಜೈನ್ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಕಾಲು ಜಖಂಗೊಂಡಿದ್ದರಿಂದ ಎರಡೂ ಕಾಲನ್ನು ಕತ್ತರಿಸಲಾಗಿದೆ. ಗುಂಡ್ಲುಪೇಟೆಯ ಎಸ್.ಜೆ. ಮುಕುಂದ, ಹುಣಸೂರಿನ ವಿಲಿಯಂ ಸದಾನಂದ, ವಿರಾಜಪೇಟೆಯ ತಂಗಮ್ಮ, ಅಯ್ಯಪ್ಪ, ಪಿರಿಯಾಪಟ್ಟಣ ತಾಲೂಕು ಮಲಗನಕೆರೆಯ ಸಂತೋಷಕುಮಾರ್, ಹಿರಿಕ್ಯಾತನಹಳ್ಳಿಯ ಸಾರಿಗೆ ನೌಕರ ರಾಮಸ್ವಾಮಿ ಸೇರಿ ಹಲವರು ಗಾಯಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭೀಕರ ದೃಶ್ಯ

ಬಸ್‌ನ ಒಳಗೆ ಲಾರಿ ನುಗ್ಗಿದಂತ್ತಿದ್ದ ಭೀಕರ ದೃಶ್ಯವು ಅಪಘಾತದ ತೀವ್ರತೆಯನ್ನು ತಿಳಿಸುವಂತಿತ್ತು. ಬಸ್‌ನ ಚಾಲಕನ ಕೈ ಆತ ಕೂರುವ ಬಾಗಿಲ ಬಳಿ ಕಾಣಿಸಿದ್ದರೆ, ಆತನ ದೇಹ ಸುಮಾರು ಎರಡು ಅಡಿಯಷ್ಟು ಹಿಂದಕ್ಕೆ ನೂಕಲ್ಪಟ್ಟಿತ್ತು. ಲಾರಿಯ ಎಂಜಿನ್ ಭಾಗ ಬಸ್‌ನ ಒಳಗೆ ತೂರಿತ್ತು.

ಬೆಳಗ್ಗೆ ರಸ್ತೆಯ ಮಧ್ಯದಲ್ಲೇ ನಡೆದ ಅಪಘಾತದಿಂದ ಬೆಂಗಳೂರು ಮತ್ತು ಮಂಗಳೂರು ಎರಡು ಕಡೆ ವಾಹನಗಳು ಸುಮಾರು ಮೂರು ಕಿ.ಮೀ. ದೂರ ಸ್ಥಗೀತಗೊಂಡದ್ದವು. ಪ್ರಯಾಣಿಕರು ಮತ್ತು ವಾಹನಗಳು ಮೂರು ತಾಸಿಗೂ ಹೆಚ್ಚು ಕಾಯುವ ಸ್ಥಿತಿ ನಿರ್ಮಾಣವಾಯಿತು. ಜೆಸಿಬಿ ಮತ್ತು ಕ್ರೇನ್‌ನ ಸಹಾಯದಿಂದ ಎರಡೂ ವಾಹನಗಳನ್ನು ಪ್ರತ್ಯೇಕಿಸಲಾಯಿತು.

ಸ್ಥಳಕ್ಕೆ ಎಎಸ್‌ಪಿ ಹರಿಶ್ ಪಾಂಡೆ ನೇತೃತ್ವದಲ್ಲಿ ಎರಡು ಆಗ್ನಿಶಾಮಕದಳ, ಐದು ಜೆಸಿಬಿ ಯಂತ್ರಗಳು ಎರಡು ಕ್ರೈನ್ ಪೊಲೀಸ್ ವಾಹನ, ಐದು ತುರ್ತುವಾಹನ ಆಗಮಿಸಿ ಶವಗಳನ್ನು ಮತ್ತು ಗಾಯಾಳುಗಳನ್ನು ಸಾಗಿಸಿದವು. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಬೇರೆಡೆ ಹೋಗುತ್ತಿದ್ದ ಪ್ರಯಣಿಕರು ಸ್ಥಳದಲ್ಲಿ ಜಮಾಯಿಸಿ ಮಮ್ಮಲ ಮರಗಿದರು.

ಬಸ್ ಮತ್ತು ಲಾರಿಯೊಳಗೆ ಸೇರಿಕೊಂಡಿದ್ದ ಇಬ್ಬರೂ ಚಾಲಕರ ಶವವನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಬಳಿಕ ಕ್ರೈನ್ ಮತ್ತು ಜೆಸಿಬಿಯಂತ್ರದ ಮೂಲಕ ಶವವಗಳನ್ನು ಹೊರ ತೆಗೆಯಲಾಯಿತು. ಹುಣಸೂರಿನ ಪ್ರಯಾಣಿಕ ಸೀಟಿಗೆ ಜಖಂಗೊಂಡು, ಪ್ರಾಣಪಾಯದಿಂದ ಪಾರಾಗಿ ಎರಡು ಕೈಗಳನ್ನು ಮೇಲೆತ್ತಿದ್ದರಿಂದ ಪೋಲೀಸರು ನೋಡಿ ರಾಡಿನಿಂದ ಬಸ್ಸಿನ ಒಂದು ಭಾಗವನ್ನು ಹೊಡೆದು ಪ್ರಾಣ ಉಳಿಸಿದರು.

ಅಪರಿಚಿತ ಪ್ರಯಾಣಿಕನ ಶವ

ಸಾರಿಗೆ ಬಸ್ಸಿನಲ್ಲಿ ವೃದ್ಧರೊಬ್ಬರು ತೀವ್ರಗಾಯದಿಂದ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ. ಮೃತರ ವಿವರ ತಿಳಿದುಬಂದಿಲ್ಲ. ವಾರಸುದಾರರು ಬಿಳಿಕೆರೆ ಪೊಲೀಸ್ ಠಾಣೆ ಅಥವಾ ಮೈಸೂರಿನ ಶವಾಗಾರಕ್ಕೆ ಭೇಟಿ ನೀಡಬಹುದು ಎಂದು ಇನ್‌ಸ್ಪೆಕ್ಟರ್ ಧರ್ಮೇಂದ್ರ ತಿಳಿಸಿದ್ದಾರೆ.

ಸ್ಥಳಕ್ಕೆ ಸಾರಿಗೆ ಡಿಸಿ ಮಹೇಶ್, ಡಿಟಿಒ ನಿರಂಜನ್, ಡಿಎಂವಿ ವೆಂಕಟೇಶಮೂರ್ತಿ, ಡಿಸಿಐ ರಮೇಶ್ ಬಾಬು, ಎಚ್.ಡಿ. ಕೋಟೆ ಸಾರಿಗೆ ವ್ಯವಸ್ಥಾಪಕ ಕೃಷ್ಣಮೂರ್ತಿ, ಹುಣಸೂರು ಸಾರಿಗೆ ಡಿಪೋ ವ್ಯವಸ್ಥಾಪಕ ಬಿ.ಪಿ.ಎನ್. ಕೃಷ್ಣ, ಎಎಸ್‌ಪಿ ಹರಿಶ್ ಪಾಂಡೆ, ವೃತ್ತ ಆರಕ್ಷಕ ನಿರೀಕ್ಷಕ ಧಮೇಂದ್ರ, ಎಸ್‌ಐಗಳಾದ ನವೀನ್ ಗೌಡ, ಪುಟ್ಟಸ್ವಾಮಿ, ಷಣ್ಮುಖಂ ಮತ್ತು ಸಿಬ್ಬಂದಿ ಇದ್ದರು. ಉಪ ವಿಭಾಗಾಧಿಕಾರಿ ಡಾ. ಸೌಜನ್ಯ, ತಹಸೀಲ್ದಾರ್ ಮೋಹನ್ ಭೇಟಿನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿ, ಸೂಕ್ತ ಪರಿಹಾರದ ಭರವಸೆ ನೀಡಿದರು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ