ನಕ್ಸಲ್ ಭೀತಿ : ರಾಹುಲ್ ರೋಡ್ ಶೋಗೆ ನಕಾರ

Published : Mar 19, 2018, 01:33 PM ISTUpdated : Apr 11, 2018, 12:50 PM IST
ನಕ್ಸಲ್ ಭೀತಿ : ರಾಹುಲ್ ರೋಡ್ ಶೋಗೆ ನಕಾರ

ಸಾರಾಂಶ

ರಾಹುಲ್ ಗಾಂಧಿ ಚಿಕ್ಕಮಗಳೂರು ಪ್ರವಾಸ ಕೈಗೊಳ್ಳುತ್ತಿದ್ದು,  ಈ ವೇಳೆ ರೋಡ್ ಶೋ ನಡೆಸಲು ಚಿಕ್ಕಮಗಳೂರು ಪೊಲೀಸರು ನಿರಾಕರಿಸಿದ್ದಾರೆ.

ಚಿಕ್ಕಮಗಳೂರು : ರಾಹುಲ್ ಗಾಂಧಿ ಚಿಕ್ಕಮಗಳೂರು ಪ್ರವಾಸ ಕೈಗೊಳ್ಳುತ್ತಿದ್ದು,  ಈ ವೇಳೆ ರೋಡ್ ಶೋ ನಡೆಸಲು ಚಿಕ್ಕಮಗಳೂರು ಪೊಲೀಸರು ನಿರಾಕರಿಸಿದ್ದಾರೆ.

ನಕ್ಸಲ್ ಪೀಡಿತ ಪ್ರದೇಶವಾಗಿರುವುದರಿಂದ ರೋಡ್ ಶೋ ಮಾಡದಂತೆ ಅನುಮತಿ ನಿರಾಕರಣೆ ಮಾಡಿದ್ದಾರೆ. ಆದರೆ ರಸ್ತೆ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಇದೇ 21 ರಂದು ರಾಹುಲ್ ಗಾಂಧಿ ಶೃಂಗೇರಿಗೆ ಭೇಟಿ ನೀಡುತ್ತಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶೃಂಗೇರಿಯಿಂದ ಚಿಕ್ಕಮಗಳೂರಿನವರೆಗೂ ಕೂಡ ಸೂಕ್ತ  ಪರಿಶೀಲನೆ ನಡೆಸಲಾಗಿದೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ