ಕರ್ನಾಟಕದಲ್ಲಿಯೇ ಇವೆ ನ್ಯೂಯಾರ್ಕ್ – ಸಿಂಗಾಪುರ ಸಿಟಿ..!

By Suvarna Web DeskFirst Published Mar 19, 2018, 12:42 PM IST
Highlights

ಸಿಂಗಾಪುರ ಹಾಗೂ ನ್ಯೂಯಾರ್ಕ್ ಜಗತ್ತಿನಲ್ಲೇ ಅತ್ಯಂತ ಫೇಮಸ್ ಸಿಟಿಗಳು. ಇಲ್ಲಿಗೆ ಹೋಗಬೇಕೆಂದರೆ ಪಾಸ್‌ಪೋರ್ಟ್ ವಿಸಾ ಮೋಸ್ಟ್ ಇಂಪಾರ್ಟೆಂಟ್. ಅಲ್ಲದೇ ಲಕ್ಷಾಂತರ ರೂಪಾಯಿ ಹಣವೂ ಕೂಡ ಅಗತ್ಯ.  ಆದರೆ ನೀವು ಈಗ ಸಿಂಗಾಪುರ ನ್ಯೂಯಾರ್ಕ್’ಗೆ ಹೋಗಲು ಯಾವುದೇ ಪಾಸ್ಪೋರ್ಟ್ ಹಾಗೂ ಲಕ್ಷಾಂತರ ಹಣವೂ ಬೇಡ. ಅತ್ಯಂತ ಕಡಿಮೆ ಖರ್ಚಿನಲ್ಲಿ ನೀವು ಇಲ್ಲಿಗೆ ಹೋಗಬಹುದಾಗಿದೆ.

ಮಂಡ್ಯ : ಸಿಂಗಾಪುರ ಹಾಗೂ ನ್ಯೂಯಾರ್ಕ್ ಜಗತ್ತಿನಲ್ಲೇ ಅತ್ಯಂತ ಫೇಮಸ್ ಸಿಟಿಗಳು. ಇಲ್ಲಿಗೆ ಹೋಗಬೇಕೆಂದರೆ ಪಾಸ್‌ಪೋರ್ಟ್ ವಿಸಾ ಮೋಸ್ಟ್ ಇಂಪಾರ್ಟೆಂಟ್. ಅಲ್ಲದೇ ಲಕ್ಷಾಂತರ ರೂಪಾಯಿ ಹಣವೂ ಕೂಡ ಅಗತ್ಯ.  ಆದರೆ ನೀವು ಈಗ ಸಿಂಗಾಪುರ ನ್ಯೂಯಾರ್ಕ್’ಗೆ ಹೋಗಲು ಯಾವುದೇ ಪಾಸ್ಪೋರ್ಟ್ ಹಾಗೂ ಲಕ್ಷಾಂತರ ಹಣವೂ ಬೇಡ. ಅತ್ಯಂತ ಕಡಿಮೆ ಖರ್ಚಿನಲ್ಲಿ ನೀವು ಇಲ್ಲಿಗೆ ಹೋಗಬಹುದಾಗಿದೆ.

ಪಾಸ್ಪೋರ್ಟ್ ಇಲ್ದೆ ಸಿಂಗಾಪುರ, ನ್ಯೂಯಾರ್ಕ್‌ ನೋಡೋಕೆ ಸಾಧ್ಯಾನ ಎಂದು ನೀವು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರ ಇಲ್ಲಿದೆ. ಕರ್ನಾಟಕದಲ್ಲಿ ಅದರಲ್ಲೀಯೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿಯೇ ಸಿಂಗಾಪುರ ಮತ್ತು ನ್ಯೂಯಾರ್ಕ್  ಎಂಬ ಹೆಸರಿನ 2 ಗ್ರಾಮಗಳಿವೆ.

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನಲ್ಲಿ ಸಿಂಗಾಪುರ ಅನ್ನೋ ಒಂದು ಕುಗ್ರಾಮವಿದೆ. ಈ ಗ್ರಾಮ ತನ್ನ ಹೆಸರಿನಿಂದಲೇ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಊರು ಕುಗ್ರಾಮವಾಗಿದ್ದು ಇನ್ನೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಆದರೆ ಈ ಊರಿನ ಪ್ರಕೃತಿಯ ಮಡಿಲಿನಲ್ಲಿರೋ ಹಸಿರಿನ ಸೌಂದರ್ಯ ನೋಡಿದರೆ ಆ ದೂರದ ಸಿಂಗಾಪುರವನ್ನು ಕೂಡ ಮಂಕಾಗಿಸುತ್ತದೆ.

ಇನ್ನು ಮದ್ದೂರು ತಾಲೂಕಿನ‌ಲ್ಲಿರುವ ಹುಣ್ಣನದೊಡ್ಡಿ ಗ್ರಾಮಕ್ಕೆ ಇಲ್ಲಿನ ಗ್ರಾಮಸ್ಥರು ಕಳೆದ 20 ವರ್ಷಗಳ ಹಿಂದೆ ನ್ಯೂಯಾರ್ಕ್ ಎಂದು ನಾಮಕರಣ ಮಾಡಿದ್ದಾರೆ. ಮದ್ದೂರು ಭಾರತೀನಗರದ ನಡುವೆ ಇರುವ ಈ ನ್ಯೂಯಾರ್ಕ್ ಗ್ರಾಮ ಕೂಡ ಹೆಸರಿನಿಂದಲೇ ಎಲ್ಲರ ಗಮನ ಸೆಳೆದಿದೆ. ಈ ಊರು ಕೂಡ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿ‌ ಕೃಷಿ, ಹೈನುಗಾರಿಕೆ ಇಲ್ಲಿನವರ ಕಸುಬಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕ ದಲ್ಲಿರೋ ಕಾರಣದಿಂದ ಇಲ್ಲಿ ಇಡೀ ದಿನ ಕೂಡ ಸಣ್ಣಪುಟ್ಟ ಕ್ಯಾಂಟೀನ್ ಮತ್ತು ಅಂಗಡಿಯವರು‌ ದಿನಪೂರ್ತಿ ವ್ಯಾಪರ ನಡೆಸುತ್ತಾರೆ.

click me!