ಮುಖ್ಯಮಂತ್ರಿಗಳ ಇಂದಿನ ಸಂಪುಟ ಅತ್ಯಂತ ದುರ್ಬಲ ಮತ್ತು ಭ್ರಷ್ಟಾಚಾರದಿಂದ ಕೂಡಿದೆ: ಶ್ರೀನಿವಾಸ್ ಪ್ರಸಾದ್ ಆಕ್ರೋಶ

By Web DeskFirst Published Oct 20, 2016, 3:04 PM IST
Highlights

ನನ್ನ ಮತದಾರರಿಗೆ ಗೌರವ ತರುವ ಕೆಲಸವನ್ನು ನಾನು ಮಾಡಿದ್ದೇನೆ. ನನ್ನ ಅನುಭವ ಬಳಸಿ ಸಾರ್ವಜನಿಕ ಕೆಲಸಗಳಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಪರಿಪೂರ್ಣ, ಕ್ರಿಯಾಶೀಲ ಸಂಪುಟ ರಚಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳ ಇಂದಿನ ಸಂಪುಟ ಅತ್ಯಂತ ದುರ್ಬಲ ಮತ್ತು ಭ್ರಷ್ಟಾಚಾರದಿಂದ ಕೂಡಿದೆ ಎಂದು ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ನಂಜನಗೂಡು (ಅ.20): ನನ್ನ ಮತದಾರರಿಗೆ ಗೌರವ ತರುವ ಕೆಲಸವನ್ನು ನಾನು ಮಾಡಿದ್ದೇನೆ. ನನ್ನ ಅನುಭವ ಬಳಸಿ ಸಾರ್ವಜನಿಕ ಕೆಲಸಗಳಿಗೆ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಪರಿಪೂರ್ಣ, ಕ್ರಿಯಾಶೀಲ ಸಂಪುಟ ರಚಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳ ಇಂದಿನ ಸಂಪುಟ ಅತ್ಯಂತ ದುರ್ಬಲ ಮತ್ತು ಭ್ರಷ್ಟಾಚಾರದಿಂದ ಕೂಡಿದೆ ಎಂದು ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಹೊರತುಪಡಿಸಿ ಪರಿಣಾಮಕಾರಿ, ಕ್ರಿಯಾಶೀಲ ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅದರಂತೆ ಕಾರ್ಯನಿರ್ವಹಿಸಿದ್ದಾರೆಯೆ? ತಮ್ಮನ್ನು ಸಂಪುಟದಿಂದ ಹೊರತು ಪಡಿಸಿದ್ದನ್ನು ಮುಖ್ಯಮಂತ್ರಿಗಳು ಇನ್ನು ಸಮರ್ಥನೆ ಮಾಡಿಕೊಂಡಿಲ್ಲ. ನಂಜನಗೂಡಿನಲ್ಲಾದರು ಅವರು ಸಮರ್ಥನೆ ಮಾಡಿಕೊಳ್ಳಲಿ ಎಂದು ಸವಾಲು ಎಸೆದರು.

ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದ ಎಲ್ಲಾ ವರ್ಗದ, ಶೋಷಿತರ ಪರವಾಗಿ ಕೆಲಸ ನಿರ್ವಸಿದ್ದೇನೆ. ಕ್ಷೇತ್ರದ ಎಲ್ಲಾ ವರ್ಗದ ಜನರಿಗೂ ಸಮುದಾಯ ಭವನ ನಿರ್ಮಿಸಲು ಸ್ಥಳ ನೀಡಿದ್ದಲ್ಲದೆ ಹಣ ಕೂಡ ಮಂಜೂರು ಮಾಡಿಸಿದ್ದೇನೆ. ಈಗ ಕ್ಷೇತ್ರದಲ್ಲಿ ಉಳಿದಿರುವ ಕೆಲಸಗಳನ್ನು ಮಾಡಿಮುಗಿಸಲಿ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳೇ ನಂಜನಗೂಡಿನ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮ ವ್ಯಾಪ್ತಿಗೆ ಬರುವ ಕಸಬಾ, ಛತ್ರ ಹೋಬಳಿಗಳ ಜನರನ್ನು ಎಂದಾದರೂ ನೆನಪಿಸಿಕೊಂಡಿದ್ದೀರಾ? ನೀವು ಸಭೆ ನಡೆಸಿ ಜನರ ಬಳಿಗೆ ತೆರಳಿ, ನಾನೂ ಕೂಡ ನನ್ನ ಕ್ಷೇತ್ರದ ಜನರ ಬಳಿ ತೆರಳುತ್ತೇನೆ ನನ್ನದು ಹೋರಾಟದ ಜೀವನ ನಿಮ್ಮದು ದ್ವೇಷದ ರಾಜಕಾರಣ ಎಂದು ಅವರು ವಾಗ್ದಾಳಿ ನಡೆಸಿದರು.

ನನ್ನ ಶಾಸಕತ್ವದ ಅವಧಿಯಲ್ಲಿ ಹೈಟೆಕ್ ಬಸ್ ನಿಲ್ದಾಣ, ಪದವಿ ಕಾಲೇಜು, ಮಿನಿಧಾನಸೌಧ ೨೩ ಕೋಟಿ ವೆಚ್ಚದಲ್ಲಿ ಸಸ್ಯಕಾಶಿ ಕೆಲಸಕ್ಕೆ ₹ ೪ ಕೋಟಿ ಬಿಡುಗಡೆ ಮಾಡಿಸಿದ್ದು ಕೆಲಸ ಪ್ರಾರಂಭವಾಗಿದೆ. ಒಳಚರಂಡಿ ವ್ಯವಸ್ಥೆ ಹಾಗೂ ೨್ಡ೪೭ ಕೆಲಸ ಪ್ರಗತಿಯಲ್ಲಿವೆ. ಉಳಿದ ಕೆಲಸಗಳನ್ನು ಪೂರ್ಣಗೊಳಿಸಲಿ. ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಚಿಂತನೆಗಳಿವೆ ಎಂದರು.

ಸಿದ್ದರಾಮಯ್ಯನವರೇ ರಾಜಕೀಯದಲ್ಲಿ ನೀವಿನ್ನೂ ಬಾವಿಯ ಕಪ್ಪೆ. ದ್ವೇಷದ ರಾಜಕಾರಣ ಬಿಡಿ, ನೀವು ರಾಜಕೀಯ ದುರುದ್ದೇಶದಿಂದ ಈ ತರಹದ ಆಲೋಚನೆ ಮಾಡಿದ್ದೀರಾ. ನಾನು ದೇಶದ ೧೨೦ ಕೋಟಿ ಜನರ ಪ್ರತಿನಿಧಿಯಾಗಿ ಕಾರ್ಯ ನಿರ್ವಸಿದ್ದೇನೆ. ನಿಮ್ಮಿಂದ ಮಹದೇವಪ್ಪನಂತವರು ನೂರು ಜನರು ಬಂದರೂ ನಿಮ್ಮ ಪಲಾಯನ ತಪ್ಪಿದ್ದಲ್ಲ. ಜನರು ಅಂತಿಮವಾಗಿ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. ಮೈಸೂರು ಭಾಗದಲ್ಲಿ ನಿಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಳ್ಳಲು ಸ್ವಜನ ಪಕ್ಷಪಾತ, ಭ್ರಷ್ಟಾಚಾರದಲ್ಲಿ ತೊಡಗಿದ್ದೀರಾ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಮತದಾರರ ಮುಂದೆ ತರುತ್ತೇನೆ ಎಂದು ಅವರು ಎಚ್ಚರಿಸಿದರು.

ಸಚಿವರ ವಿರುದ್ಧ ಕಿಡಿ ಕಾರಿದ ಪ್ರಸಾದ್

ನಂಜನಗೂಡು ಕೊಳೆತು ನಾರುತ್ತಿದೆ ಅದೇ ಟಿ. ನರಸೀಪುರ ಸಿಂಗಾಪುರ್‌ನಂತೆ ಕಂಗೊಳಿಸುತ್ತಿದೆ ಎಂಬ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಚಿವ ಮಹದೇವಪ್ಪ ಮುಖ್ಯಮಂತ್ರಿಗಳ ಕಾರ್ಬನ್ ಕಾಪಿಯಂತೆ, ಜೀಹುಜೂರ್ ಎಂದು ಕಾರ್ಯ ನಿರ್ವಸುತ್ತಾರೆ. ಇಂತಹವರಿಂದ ತಾವು ಕಲಿಯಬೇಕಾದ್ದು ಏನೂ ಇಲ್ಲ. ತಲಕಾಡಿನ ಅಕ್ರಮ ಮರಳು ದಂಧೆಯನ್ನು ನೋಡಿದರೆ ಸಾಕು ನರಸೀಪುರ ಸಿಂಗಾಪುರದಂತೆ ಕಾಣುತ್ತದೆ. ಸಚಿವರ ಪುತ್ರ ಮರಳು ದಂಧೆಯಲ್ಲಿ ಕೋಟಿ ಕೋಟಿ ಲೂಟಿ ಹೊಡೆದು ಹಣ ಮಾಡಿದ್ದು ಸಾಲದ್ದಕ್ಕೆ ಈಗ ತಾನೆ ಕ್ರಿಮಿನಲ್ ಮೊಕದ್ದಮೆಯಿಂದ ಜಾಮೀನು ಪಡೆದು ಹೊರ ಬಂದಿರುವುದೇ ಸಾಕ್ಷಿ. ಈತ ಏನೆಂಬುದು ಕ್ಷೇತ್ರದ ಜನಕ್ಕೆ ಮನವರಿಕೆಯಾಗಿದೆ. ಈ ಕುರಿತಂತೆ ನನ್ನಿಂದ ಯಾವುದೇ ಸ್ಪಷ್ಟೀಕರಣ ಬೇಕಿಲ್ಲ. ಇಂತ ಸಚಿವರ ಪುತ್ರ ಸರ್ಕಾರಿ ಕಾರ್ಯಕ್ರಮದಲ್ಲಿ ಮುಂಜೂಣಿಯ ಸಾಲಿನಲ್ಲಿ ಕುಳಿತಿರುತ್ತಾನೆ ಎಂದು ಕಿಡಿಕಾರಿದರು.

ನಡೆ ಬಿಟ್ಟು ಕೊಡದ ಪ್ರಸಾದ್

ತೆರವಾದ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸವಿರಾ ಎಂಬ ಪ್ರಶ್ನೆಗೆ ಕ್ಷೇತ್ರದ, ಜನರ ಅಭಿಪ್ರಾಯ ಸಲಹೆಗಳನ್ನು ಸಂಗ್ರಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಅತ್ಯಂತ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ಇಡಲಾಗುವುದು. ಮುಂಬರುವ ಚುನಾವಣೆಯಲ್ಲಿ ನಾನೇ ಮುಂಚೂಣಿಯಲ್ಲಿರುತ್ತೇನೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಬಿಎಸ್‌ಪಿ ಪಕ್ಷದ ಮುಖಂಡರು ಭೇಟಿಯಾಗಿದ್ದಾರೆ ಎಂದರು.

 

click me!