
ಕೊಪ್ಪಳ (ಅ.20): ಇಲ್ಲಿನ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಬಸಯ್ಯ ಲಂಚ ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೊಪ್ಪಳ ನಗರದ ದಿಡ್ಡಿಕೇರಿ ನಿವಾಸಿ ನಾಸಿರ್ ಹುಸೇನ್ 2 ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಪತ್ನಿ ಅಮ್ಮಜಾನ್ ಪತಿಯ ಅಂತ್ಯಕ್ರಿಯೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಅಂತ್ಯಕ್ರಿಯೆ ಪರಿಹಾರ ಕೊಡಬೇಕಾದರೆ 2 ಸಾವಿರ ಲಂಚ ಕೊಡಿ ಎಂದು ಕೇಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.