ಮದ್ಯ ನಿಷೇಧ ಹೋರಾಟಕ್ಕೆ ಪುನರ್ ಚಾಲನೆ: ತರಳಬಾಳು ಸ್ವಾಮೀಜಿ ಘೋಷಣೆ

Published : Nov 10, 2017, 05:09 PM ISTUpdated : Apr 11, 2018, 12:47 PM IST
ಮದ್ಯ ನಿಷೇಧ ಹೋರಾಟಕ್ಕೆ ಪುನರ್ ಚಾಲನೆ: ತರಳಬಾಳು ಸ್ವಾಮೀಜಿ ಘೋಷಣೆ

ಸಾರಾಂಶ

ಮದ್ಯಪಾನ ನಿಷೇಧದ ಹೋರಾಟಗಳಿಗೆ ಪುನರ್ ಚಾಲನೆ ನೀಡಲಾಗುವುದು. ಈ ಸಂಬಂಧ ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಸಮಾವೇಶದಲ್ಲಿ ಸದೃಢ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ  ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಚಿತ್ರದುರ್ಗ (ನ.10): ಮದ್ಯಪಾನ ನಿಷೇಧದ ಹೋರಾಟಗಳಿಗೆ ಪುನರ್ ಚಾಲನೆ ನೀಡಲಾಗುವುದು. ಈ ಸಂಬಂಧ ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಸಮಾವೇಶದಲ್ಲಿ ಸದೃಢ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ  ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಣೆಹಳ್ಳಿಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು 30 ವರ್ಷದ ಹಿಂದೆ ಪಾನ ನಿಷೇಧದ ಬಗ್ಗೆ ಹೋರಾಟ ಮಾಡಿದ್ದೆವು. ಆದರೆ ಅದು ಕೈಗೂಡಲಿಲಿಲ್ಲ. ಇದಕ್ಕೆ ಪುನರ್ ಚಾಲನೆ ನೀಡಲಾಗಿದ್ದು ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷದವರು ಪಾನ ನಿಷೇಧದ ಬಗ್ಗೆ  ಪ್ರಣಾಳಿಕೆಯಲ್ಲಿ ಭರವಸೆ ನೀಡುತ್ತಾರೋ ಅಂತವರಿಗೆ ಮತ ಹಾಕುವ ಚಿಂತನೆ ಮಾಡಬೇಕೆಂದರು. ಸರ್ಕಾರ ನಡೆಸಲು, ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ತೊಂದರೆಯಾಗುತ್ತದೆ ಎನ್ನುವುದು ರಾಜಕಾರಣಿಗಳ ಅಭಿಪ್ರಾಯ. ಮದ್ಯಪಾನ ನಿಷೇದಕ್ಕೆ ಸರ್ಕಾರಕ್ಕಿಂತ ಜನರ ಅಪಸ್ವರ ಹೆಚ್ಚಾಗಿದೆ. ಅದು ಹೋಗಬೇಕು . ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುವ ವೇಳೆ ಮದ್ಯಪಾನ ನಿಷೇಧ ಮಾಡುವ ಸರ್ಕಾರ ಚುನಾವಣೆಯ ನಂತರವೂ ಮಾಡಲಿ. ಅದಕ್ಕೆ ಜನರು ಕೈಜೋಡಿಸಲಿ ಎಂದರು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ