ಮುಚ್ಚಿದ ಕೋಣೆಯಲ್ಲಿ ಟಿಪ್ಪು ಜಯಂತಿ ಆಚರಿಸಲು ಉಡುಪಿ ಜಿಲ್ಲಾಡಳಿತ ನಿರ್ಧಾರ

Published : Nov 09, 2017, 03:47 PM ISTUpdated : Apr 11, 2018, 12:53 PM IST
ಮುಚ್ಚಿದ ಕೋಣೆಯಲ್ಲಿ ಟಿಪ್ಪು ಜಯಂತಿ ಆಚರಿಸಲು ಉಡುಪಿ ಜಿಲ್ಲಾಡಳಿತ ನಿರ್ಧಾರ

ಸಾರಾಂಶ

ಜಿಲ್ಲಾಡಳಿತದ ವತಿಯಿಂದ ನಾಳೆ ನಡೆಯಲಿರುವ ಟಿಪ್ಪು ಜಯಂತಿ ಆಚರಣಾ ಕಾರ್ಯಕ್ರಮ ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಉಡುಪಿ (ನ.09): ಜಿಲ್ಲಾಡಳಿತದ ವತಿಯಿಂದ ನಾಳೆ ನಡೆಯಲಿರುವ ಟಿಪ್ಪು ಜಯಂತಿ ಆಚರಣಾ ಕಾರ್ಯಕ್ರಮ ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ಕನಕ ಜಯಂತಿ ಇತ್ಯಾದಿ ಸರ್ಕಾರಿ ಕಾರ್ಯಕ್ರಮಗಳನ್ನು ನಗರದ ಯಾವುದಾದರೊಂದು ಕಲ್ಯಾಣಮಂಟಪದಲ್ಲಿ ಅಥವಾ ಶಾಲೆಯ ಸಭಾಂಗಣದಲ್ಲಿ ಆಚರಿಸುವ ಜಿಲ್ಲಾಡಳಿತ, ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತ್ರ ಸಾರ್ವಜನಿಕರನ್ನು ದೂರವಿಟ್ಟು, ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲಿನಲ್ಲಿ ಮುಚ್ಚಿದ ಬಾಗಿಲ ಹಿಂದೆ ನಡೆಸಲು ಉದ್ದೇಶಿಸಿದೆ. ಇದಕ್ಕೆ ಭದ್ರತೆಯ ಕಾರಣವನ್ನು ನೀಡಲಾಗುತ್ತಿದೆ.

25-30 ಮಂದಿ ಕುಳಿತುಕೊಳ್ಳಬಹುದಾದ ಈ ಕೋಣೆಯಲ್ಲಿ ಕಾರ್ಯಕ್ರಮದ ವರದಿ ಮಾಡಲು ಬರುವ 15-20 ಮಂದಿ ಪತ್ರಕರ್ತರು ಮತ್ತು 10 ಮಂದಿ ಸರ್ಕಾರಿ ಅಧಿಕಾರಿಗಳು ಸೇರಿದರೆ ಹಾಲ್ ಭರ್ತಿಯಾಗುತ್ತದೆ. ಆದ್ದರಿಂದ ಸಾರ್ವಜನಿಕರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಇಲ್ಲವಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಟಿಪ್ಪು ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಆಮಂತ್ರಿತರಾಗಿದ್ದ ಜಿಲ್ಲಾ ಯೂತ್ ಕಾಂಗ್ರೆಸ್ ಉಸ್ತುವಾರಿ ಹಬೀಬ್ ಆಲಿ ಈ ಬಗ್ಗೆ ಮಾತನಾಡಿ, ಅಂದು ನಡೆದ ಪೂರ್ವಭಾವಿ ಸಭೆಯಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿಶಾಲವಾದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸುವುದೆಂದು ನಿರ್ಣಯವಾಗಿತ್ತು. ಆದರೆ ಈಗ ಏಕಾಏಕಿ ಜಿಲ್ಲಾಡಳಿತ ಕಾರ್ಯಕ್ರಮವನ್ನು ತೀರಾ ಕಿರಿದಾದ ಕೋರ್ಟ್ ಹಾಲ್‌ನಲ್ಲಿ ನಡೆಸುತ್ತಿದೆ. ಧಪ್ ನುಡಿಸುವ ಮೂಲಕ  ಉದ್ಘಾಟನೆ ಎಂದು ಹೇಳಲಾಗಿದೆ. ಆದರೆ ಜಾಗವೇ ಇಲ್ಲದ ಈ ಹಾಲ್‌ನಲ್ಲಿ ಸಾರ್ವಜನಿಕರನ್ನು ದೂರ ಇಟ್ಟು ಉದ್ದೇಶಪೂರ್ವಕವಾಗಿ ಕಾರ್ಯಕ್ರಮವನ್ನು  ನಡೆಸಲಾಗುತ್ತಿದೆ. ಇದು ಜಿಲ್ಲಾಡಳಿತದ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಸದೆ - ಶಾಸಕರ ಹೆಸರಿಲ್ಲ:

ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುವುದಕ್ಕಾಗಿ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವುದಿಲ್ಲ, ಆದ್ದರಿಂದ ಆಹ್ವಾನ ಪತ್ರಿಕೆಯಲ್ಲಿತಮ್ಮ ಹೆಸರು ಹಾಕಬಾರದು ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಭಾಗವಹಿಸಲು ಇಚ್ಛಿಸದವರ ಹೆಸರು ಹಾಕುವುದು ಬೇಡ ಎಂದು ಖುದ್ದು ಮುಖ್ಯಮಂತ್ರಿ ಅವರ ಸೂಚನೆಯಂತೆ, ಉಡುಪಿ ಜಿಲ್ಲಾಡಳಿತ ಬಿಜೆಪಿಯ ಈ ಮೂವರ ಹೆಸರನ್ನು ಹಾಕಿಲ್ಲ.

ದಿನಕರ - ನಳಿನಿ ಭಾಗವಹಿಸಲ್ಲ: ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಜೆಪಿಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ತಾಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಬಿಜೆಪಿ ಕಡೆ ಒಲವುಳ್ಳ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಹೆಸರು ಆಹ್ಪಾನ ಪತ್ರದಲ್ಲಿದೆ. ಯಡಿಯೂರಪ್ಪ ಅವರು ಈ ಕಾರ್ಯಕ್ರಮದಲ್ಲ ಭಾಗವಹಿಸುವ ಸಾಧ್ಯತೆಯೇ ಇಲ್ಲ. ಜೊತೆಗೆ ತಾವೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ದಿನಕರ ಬಾಬು ಮತ್ತು ನಳಿನಿ ಪ್ರದೀಪ್ ಸ್ಪಷ್ಟಪಡಿಸಿದ್ದಾರೆ.

 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ