ಮಹದಾಯಿ ಹೋರಾಟಕ್ಕೆ ಹೋಗೋದೂ ಬೇಡ ಅಂದ್ರಿಂತೆ ಉಪ್ಪಿ

By Suvarna Web DeskFirst Published Mar 5, 2018, 6:34 PM IST
Highlights

ಇನ್ನು ಚುನಾವಣೆ ಎದುರಿಸುವ ಮುನ್ನವೇ ಕನಸಿನ ಪಕ್ಷ ಕೆಪಿಜೆಪಿಯಿಂದ ಉಪೇಂದ್ರ ಹೊರ ಬರಲು ನಿರ್ಧರಿದ್ದಾರೆ. ಪಕ್ಷದ ಸಹ ಸಂಸ್ಥಾಪಕ ಮಹೇಶ್ ಗೌಡ ಹಾಗೂ ಉಪೇಂದ್ರ ನಡುವಿನ ವೈಮನಸ್ಸೇ ಇಂಥ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಬೆಂಗಳೂರು: ಇನ್ನು ಚುನಾವಣೆ ಎದುರಿಸುವ ಮುನ್ನವೇ ಕನಸಿನ ಪಕ್ಷ ಕೆಪಿಜೆಪಿಯಿಂದ ಉಪೇಂದ್ರ ಹೊರ ಬರಲು ನಿರ್ಧರಿದ್ದಾರೆ. ಪಕ್ಷದ ಸಹ ಸಂಸ್ಥಾಪಕ ಮಹೇಶ್ ಗೌಡ ಹಾಗೂ ಉಪೇಂದ್ರ ನಡುವಿನ ವೈಮನಸ್ಸೇ ಇಂಥ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಆದರೆ, ಮಹೇಶ್ ಗೌಡ ಅವರು ಉಪೇಂದ್ರ ಅವರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದು, ಅವರು ಸದಾ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆಂದಿದ್ದಾರೆ.

'ಪಕ್ಷದ ಪ್ರವಾಸಕ್ಕೆ ಹೋಗುವಾಗ ನಾವೂ ಬರ್ತೇವೆ ಎಂದಿದ್ದೆವು. ಆದರೆ, ಅಭಿಮಾನಿಗಳನ್ನು ಭೇಟಿಯಾಗಲು ಹೋಗುತ್ತೇನೆಂದು ಹೇಳಿ ಒಬ್ಬರೇ ತೆರಳಿದರು. ಪಕ್ಷಕ್ಕೆ ಆಟೋ ಚಿಹ್ನೆ ಸಿಕ್ಕಾಗ, ಸುದ್ದಿಗೋಷ್ಠಿ ಮಾಡಿ ತಿಳಿಸೋಣವೆಂದರೂ, ಬೇಡವೆಂದರು. ನೋಡಿದರೆ ಮಾರನೇ ದಿನ ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾಗಿತ್ತು,' ಎಂದು ಅವರು ಆರೋಪಿಸಿದ್ದಾರೆ.
 
ಅಷ್ಟೇ ಅಲ್ಲ, ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರನ್ನೊದಗಿಸುವ ಮಹದಾಯಿ ಹೋರಾಟದಲ್ಲಿ ಪಾಲ್ಗೊಳ್ಳಲೂ ಉಪೇಂದ್ರ ಮನಸು ಮಾಡಿಲಿಲ್ಲ, ಎಂದು ಮಹೇಶ್ ಗೌಡ ಅರೋಪಿಸಿದ್ದು, ಈ ಇಬ್ಬರ ನಡುವೆ ಏನಾಗಿದೆ ಎಂಬುದನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
 

click me!