
ಚಿಕ್ಕೋಡಿ/ಬಾಗಲಕೋಟೆ: 'ಕಾಂಗ್ರೆಸ್ ಪಕ್ಷ ಒಬ್ಬ ಸುಲ್ತಾನ್ ಇದ್ದಂತೆ. ಅದು ಪ್ರಜೆಗಳನ್ನು ಯಾವಾಗಲೂ ಗುಲಾಮರಂತೆ ನೋಡುತ್ತೆ,' ಎಂದು ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಆರೋಪಿಸಿದ್ದಾರೆ.
'ಬಿಜೆಪಿ ಸಂವಿಧಾನ ಬದಲಿಸಲು ಹೊರಟಿದೆ. ಆ ಮೂಲಕ ಜನರ ಸ್ವತಂತ್ರ ಕಸಿದುಕೊಳ್ಳಲು ಯತ್ನಿಸುತ್ತಿದೆ. ರಾಹುಲ್ ಗಾಂಧಿ ಜನಿವಾರದ ಹಿಂದು ಅಂದಿದ್ದಾರೆ. ಬಿಜೆಪಿ,ಕಾಂಗ್ರೆಸ್‌ನವರು ಬಸವೇಶ್ವರರ ವಚನ ಹೇಳುತ್ತಿದ್ದಾರೆ. ಆದರೆ ಆ ತತ್ವಗಳನ್ನು ಪಾಲಿಸೋದಿಲ್ಲ,' ಎಂದರು.
ಚಿಕ್ಕೋಡಿಯಲ್ಲಿ ನಡೆದ 'ಸಂವಿಧಾನ ಉಳಿಸಿ, ಭಾರತ ಉಳಿಸಿ' ಸಾರ್ವಜನಿಕ ಕಾರ್ಯಕ್ರಮ ಹಾಗೂ ಬಾಗಲಕೋಟೆಯಲ್ಲಿ ನಡೆದ ಪ್ರಜಾ ಪರಿವರ್ತನಾ ಪಕ್ಷದ ಏಕತಾ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲರೂ ಪ್ರಜಾ ಪರಿವರ್ತನಾ ಪಕ್ಷಕ್ಕೆ ಬೆಂಬಲಿಸಿ. ಈಗ ಎಲ್ಲೆಡೆ ಮನುವಾದಿ ವ್ಯವಸ್ಥೆ ಇದೆ. ಆರ್‌ಎಸ್‌ಎಸ್‌ನ ಪ್ರಮುಖರು ನಮ್ಮ ಉದ್ದೇಶ ಸಂವಿಧಾನ ಬದಲಾವಣೆ ಅಂದಿದ್ದಾರೆ.
ಆದರೆ ಇದರ ವಿರುದ್ಧ ಸೋನಿಯಾ ಗಾಂಧಿ ಎಂದೂ ಧ್ವನಿಯೆತ್ತಲಿಲ್ಲ. ಕಾಂಗ್ರೆಸ್ ಸಹ ಸಂವಿಧಾನ ಬದಲಾವಣೆ ಪರವಾಗಿದೆ,'ಎಂದು ಆರೋಪಿಸಿದರು.