ಮಾಜಿ ಡಿಸಿಎಂ ಆರ್ ಅಶೋಕ ವಿರುದ್ಧ ಸರ್ಕಾರದ ಬ್ರಹ್ಮಾಸ್ತ್ರ

By Suvarna Web DeskFirst Published Mar 5, 2018, 5:45 PM IST
Highlights

ಮಾರ್ಕೋ ಫೊಲೋ ಬಸ್ ಖರೀದಿ ಹಗರಣವನ್ನು ಕರ್ನಾಟಕ ಸರಕಾರ ಸಿಐಡಿಗೆ ವರ್ಗಾಯಿಸಿದ್ದು, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ ಅವರಿಗೆ ಸಂಕಟ ಕಾದಿದೆ.

ಬೆಂಗಳೂರು: ಮಾರ್ಕೋ ಫೊಲೋ ಬಸ್ ಖರೀದಿ ಹಗರಣವನ್ನು ಕರ್ನಾಟಕ ಸರಕಾರ ಸಿಐಡಿಗೆ ವರ್ಗಾಯಿಸಿದ್ದು, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ ಅವರಿಗೆ ಸಂಕಟ ಕಾದಿದೆ.


ಸಾರಿಗೆ ಇಲಾಖೆಯಿಂದ, ಗೃಹ ಇಲಾಖೆಗೆ ಪ್ರಕರಣ ಹಸ್ತಾಂತರಿಸಲಾಗಿದೆ. ಮಾರ್ಕೋ ಪೋಲೋ ಬಸ್ ಖರೀದಿಸಿದ್ದ ಅಂದಿನ ಸಾರಿಗೆ ಸಚಿವ ಅಶೋಕ್ ಅವರು ವಿರುದ್ಧ ಸುಮಾರು 600 ಕೋಟಿ ರೂ. ಬಸ್ ಖರೀದಿ ವ್ಯವಹಾರ ನಡೆಸಿದ ಆರೋಪವಿದೆ.

ಬೇರೆ ರಾಜ್ಯಗಳಲ್ಲಿ ತಿರಸ್ಕೃತವಾಗಿರುವ ಮಾರ್ಕೋಪೋಲೋ ಬಸ್‌ಗಳನ್ನು ಬಿಜೆಪಿ ಸರಕಾರ ಖರೀದಿಸಿತ್ತು. ತಾಂತ್ರಿಕ ಕಾರಣಕ್ಕಾಗಿ ನಿರ್ವಹಿಸಲಾಗದಂಥ ಸ್ಥಿತಿಯಲ್ಲಿದ್ದ, ಈ ಬಸ್‌ಗಳನ್ನು ರೋಡಿಗಿಳಿಸಿದ್ದರಿಂದ ಬಿಎಂಟಿಸಿ ಕೋಟ್ಯಾಂತರ ರುಪಾಯಿ ನಷ್ಟ ಅನುಭವಿಸುವಂತಾಗಿತ್ತು.

ಬಸ್ ಖರೀದಿ ಹಗರಣ ಕುರಿತು ತನಿಖೆ ಮಾಡಿಸಿದ್ದ ಸರ್ಕಾರ, ಅಂತಿಮವಾಗಿ ಪ್ರಕರಣ ಸಿಐಡಿಗೆ ಹಸ್ತಾಂತರಿಸಿದೆ. ಅಶೋಕ ಅವರನ್ನು ರಾಜಕೀಯವಾಗಿ ಕಟ್ಟಿಹಾಕಲು ಸರ್ಕಾರದ ಇಂಥದ್ದೊಂದು ಪ್ಲಾನ್ ಮಾಡಿದೆ.

click me!