ಕರ್ನಾಟಕ ಬಿಜೆಪಿ ಮುಕ್ತವಾಗುತ್ತೆ: ಸಿದ್ದರಾಮಯ್ಯ

Published : Mar 03, 2018, 04:03 PM ISTUpdated : Apr 11, 2018, 01:08 PM IST
ಕರ್ನಾಟಕ ಬಿಜೆಪಿ ಮುಕ್ತವಾಗುತ್ತೆ: ಸಿದ್ದರಾಮಯ್ಯ

ಸಾರಾಂಶ

'ಈಶಾನ್ಯ ಭಾರತದ ರಾಜ್ಯಗಳ ಚುನಾವಣೆ ಫಲಿತಾಂಶ ನಮ್ಮ ರಾಜ್ಯದ ಮೇಲೆ ಪರಿಣಾಮ ಬೀರಲ್ಲ.  ಯಾವುದೇ ರಾಜ್ಯದ ಫಲಿತಾಂಶ ಇನ್ನೊಂದು ರಾಜ್ಯದ ಮೇಲೆ ಆಗಲ್ಲ,' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ: 'ಈಶಾನ್ಯ ಭಾರತದ ರಾಜ್ಯಗಳ ಚುನಾವಣೆ ಫಲಿತಾಂಶ ನಮ್ಮ ರಾಜ್ಯದ ಮೇಲೆ ಪರಿಣಾಮ ಬೀರಲ್ಲ.  ಯಾವುದೇ ರಾಜ್ಯದ ಫಲಿತಾಂಶ ಇನ್ನೊಂದು ರಾಜ್ಯದ ಮೇಲೆ ಆಗಲ್ಲ,' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಫಲಿತಾಂಶದಿಂದ ಆಶ್ಚರ್ಯವೇನಿಲ್ಲ, ಜನರು ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕು. ನಾವು ತ್ರಿಪುರಾ, ನಾಗಾಲ್ಯಾಂಡ್ ಗೆಲ್ಲುವ ಭ್ರಮೆಯಲ್ಲಿ ಇರಲಿಲ್ಲ,' ಎಂದು ಹೇಳಿದ್ದಾರೆ.

'ಬ್ಯಾಲೆಟ್ ಪೇಪರ್‌ನಲ್ಲಿ ರಾಜ್ಯದ ಚುನಾವಣೆ ನಡೆಸಬೇಕು ಎನ್ನುವ ಅಭಿಪ್ರಾಯವಿದೆ. ಫೇರ್ ಎಲೆಕ್ಷನ್‌ ಆಗಬೇಕು. ಅನೇಕ ದೇಶಗಳು ಇವಿಎಮ್‌ಗೆ ಹೋಗಿ ಬ್ಯಾಲೆಟ್ ಪೇಪರ್‌ಗೆ ವಾಪಸಾಗಿವೆ. ಬ್ಯಾಲೆಟ್ ಪೇಪರ್‌ನಿಂದ ಚುನಾವಣೆ ನಡೆಸಿದ್ರೆ ಅದಕ್ಕೆ ನನ್ನ ಬೆಂಬಲವಿದೆ. ರಾಜ್ಯದಲ್ಲಿ ಬಿಜೆಪಿಯವರೇ ಮುಕ್ತರಾಗುತ್ತಾರೆ.  ವಿಧಾನಸಭೆ ಚುನಾವಣೆ ಮುಂದೂಡಲು ಆಗಲ್ಲ.ಚುನಾವಣೆ ಮುಂದೂಡಬೇಕಾದರೆ ಸಂವಿಧಾನ ತಿದ್ದುಪಡಿಯಾಗಬೇಕು,' ಎಂದು ಹೇಳುವ ಮೂಲಕ ಇವಿಎಂ ಮೇಲಿನ ಅನುಮಾನವನ್ನು ಪರೋಕ್ಷವಾಗಿ ಹೊರ ಹಾಕಿದರು.

'ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ನಾಗಮೋಗನ್ ದಾಸ್ ಅಲ್ಪಸಂಖ್ಯಾತ ಆಯೋಗಕ್ಕೆ ವರದಿ ಕೊಟ್ಟಿದ್ದಾರೆ. ವರದಿ ಸರ್ಕಾರದ ಮುಂದೆ ಬಂದಿಲ್ಲ, ಬಂದಮೇಲೆ ನೋಡ್ತೇವೆ. ಬೇಗ ವರದಿ ಕೊಡುವಂತೆ ಸರ್ಕಾರದ ಒತ್ತಡವಿರಲಿಲ್ಲ,' ಎಂದು ಸ್ಪಷ್ಟಪಡಿಸಿದ್ದಾರೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ