ಆನೆ ದಾಳಿಗೆ ಹಿರಿಯ ಐಎಫ್ಎಸ್ ಅಧಿಕಾರಿ‌ ಬಲಿ

Published : Mar 03, 2018, 03:28 PM ISTUpdated : Apr 11, 2018, 12:54 PM IST
ಆನೆ ದಾಳಿಗೆ ಹಿರಿಯ ಐಎಫ್ಎಸ್ ಅಧಿಕಾರಿ‌ ಬಲಿ

ಸಾರಾಂಶ

ಅರಣ್ಯಕ್ಕೆ ಬೆಂಕಿ ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಪರಿಶೀಲನೆಗೆ ತೆರಳಿದ್ದ ಅರಣ್ಯಾಧಿಕಾರಿ ಮೇಲೆ ಆನೆ ದಾಳಿ ನಡೆದು, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಮೈಸೂರು: ಅರಣ್ಯಕ್ಕೆ ಬೆಂಕಿ ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಪರಿಶೀಲನೆಗೆ ತೆರಳಿದ್ದ ಅರಣ್ಯಾಧಿಕಾರಿ ಮೇಲೆ ಆನೆ ದಾಳಿ ನಡೆದು, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ನಾಗರಹೊಳೆ‌ ನಿರ್ದೇಶಕ ಮಣಿಕಂಠನ್ ಆನೆ ದಾಳಿಗೆ ಬಲಿಯಾದ ಅಧಿಕಾರಿ. ಕಬಿನಿ ಮುಖ್ಯ ಅರಣ್ಯಾಧಿಕಾರಿ ಹಾಗೂ ನಾಗರಹೊಳೆ ನಿರ್ದೇಶಕರಾಗಿ  ಣಿಕಂಠನ್​ ಕಾರ್ಯನಿರ್ವಹಿಸುತ್ತಿದ್ದರು.

ಕಬಿನಿಯ ಬಿಡಿಕುಪ್ಪೆ ಬಳಿ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ಈ ಅವಘಡ ಸಂಭವಿಸಿದೆ.  ಇವರು ಬೆಂಕಿ ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದರು. ಜೀಪ್‌ನಿಂದ ಇಳಿದು ಹೋಗುತ್ತಿದ್ದಂತೆ ಮಣಿಕಂಠನ್​​ ಮೇಲೆ ಹಠಾತ್‌ ಆನೆ ದಾಳಿ ನಡೆಸಿದೆ.

ಕಳೆದ ವರ್ಷದ ಬಂಡೀಪುರದ ಕಾಡಿನ ಬೆಂಕಿಗೆ ಉಪ‌ವಲಯ ಅರಣ್ಯಾಧಿಕಾರಿ ಮುರಿಗೆಪ್ಪ ‌ಬಲಿಯಾಗಿದ್ದರು. ಈ ವರ್ಷ ಬೆಂಕಿ ಬಿದ್ದಿರುವುದನ್ನು ನೋಡಲು ಹೋದ ಅಧಿಕಾರಿ ಬಲಿಯಾಗಿದ್ದಾರೆ.
 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ