ಫ್ಲೆಕ್ಸ್ ಹಾಕಲು ಬಿಬಿಎಂಪಿ ರಾಜಕಾರಣಿಗಳಿಂದ ತೆರಿಗೆ ಕಟ್ಟಿಸಿಕೊಳ್ಳುತ್ತಿದೆಯೇ?

By Suvarna Web DeskFirst Published Jan 30, 2018, 5:27 PM IST
Highlights

'ಕಂಡ್ ಕಂಡಲ್ಲಿ ಜನಪ್ರತಿನಿಧಿಗಳ ಭಾವಚಿತ್ರಗಳೇ ರಾರಾಜಿಸುತ್ತವೆ. ಇವೂ ಜಾಹೀರಾತುಗಳಲ್ಲವೇ?,' ಎಂದು ಹೈಕೋರ್ಟ್ ಕೇಳಿದೆ.

ಬೆಂಗಳೂರು: 'ಕಂಡ್ ಕಂಡಲ್ಲಿ ಜನಪ್ರತಿನಿಧಿಗಳ ಭಾವಚಿತ್ರಗಳೇ ರಾರಾಜಿಸುತ್ತವೆ. ಇವೂ ಜಾಹೀರಾತುಗಳಲ್ಲವೇ?,' ಎಂದು ಹೈಕೋರ್ಟ್ ಕೇಳಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಈ ರೀತಿ ಭಾವಚಿತ್ರಗಳನ್ನು ಹಾಕಲು ಕಾನೂನಿನಲ್ಲಿ ಅವಕಾಶವಿದೆಯೇ? ಬಸ್ ನಿಲ್ದಾಣ ನಿರ್ಮಿಸುವುದು ಸಾರ್ವಜನಿಕರ ಹಣದಿಂದಲ್ಲವೇ? ಅಂದ ಮೇಲೆ ಅಲ್ಲಿ ಹಾಕುವ ಫ್ಲೆಕ್ಸ್‌ಗಳಿಗೂ ತೆರಿಗೆ ಕಟ್ಟಿಸಿಕೊಳ್ಳುವುದು ಬಿಬಿಎಂಪಿ ಕೆಲಸವಲ್ಲವೇ, ಎಂದು ಕೋರ್ಟ್ ಕೇಳಿದೆ.

ನಗರದಲ್ಲಿ ಅಲ್ಲಲ್ಲಿ ಹಾಕಿರುವ ಅನಧಿಕೃತ ಫ್ಲೆಕ್ಸ್ ತೆರವು ಕೋರಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಅರ್ಜಿ ಸಲ್ಲಿಸಿದ್ದರು. ಈ  ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ‌ ಸಿಜೆ ಎಚ್.ಜಿ.ರಮೇಶ್ ಅವರು, ಅನಧಿಕೃತವಾಗಿ ಯಾವ ಸ್ಥಳದಲ್ಲಿ ಪ್ಲೆಕ್ಸ್ ಹಾಕಲಾಗಿದೆ?  ಯಾವ ಸ್ಥಳದಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕೆಂದು ನಿರ್ದಿಷ್ಟವಾದ ವಿವರಗಳನ್ನು ಕೋರ್ಟಿಗೆ ನೀಡಲು ಸೂಚಿಸಿದೆ. ಈ ವಿವರಗಳು ಕೊರತೆ ಇದ್ದ ಕಾರಣ ಹೊಸದಾಗಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಕೋರ್ಟ್ ಹೇಳಿದೆ.

click me!