ದ್ವಿ ಚಕ್ರ ವಾಹನ ಸವಾರರಿಗೆ ಸಿಹಿ ಸುದ್ದಿ, ಐಎಸ್ಐ ಮಾರ್ಕ್ ಹೆಲ್ಮೆಟ್ ‌ಕಡ್ಡಾಯವಲ್ಲ

By Suvarna Web DeskFirst Published Jan 29, 2018, 6:32 PM IST
Highlights

ದ್ವಿ ಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವ ಕಾನೂನು ಬಂದಾಗಿನಿಂದಲು ಒಂದಲ್ಲೊಂದು ಗೊಂದಲಗಳು ಮುಂದುವರಿಯುತ್ತಲೇ ಇದೆ. ಇದೀಗ ಹಾಫ್ ಹೆಲ್ಮೆಟ್ ಧರಿಸಲೂ ವಿರೋಧವಾಗಿದ್ದು, ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಅನ್ನೇ  ಧರಿಸಬೇಕೆಂಬ ನೀತಿಯೂ ಬಂದಿತ್ತು. ಆದರೀಗ ಹೆಲ್ಮೆಟ್‌ಗೆ ಐಎಸ್‌ಐ ಮಾರ್ಕ್ ಇರಲೇಬೇಕೆಂಬುವುದೂ ಕಡ್ಡಾಯವಲ್ಲವೆಂದು ನಗರ ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಸ್ಪಷ್ಟ ಪಡಿಸಿದ್ದಾರೆ.

ಬೆಂಗಳೂರು: ದ್ವಿ ಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವ ಕಾನೂನು ಬಂದಾಗಿನಿಂದಲು ಒಂದಲ್ಲೊಂದು ಗೊಂದಲಗಳು ಮುಂದುವರಿಯುತ್ತಲೇ ಇದೆ. ಇದೀಗ ಹಾಫ್ ಹೆಲ್ಮೆಟ್ ಧರಿಸಲೂ ವಿರೋಧವಾಗಿದ್ದು, ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಅನ್ನೇ  ಧರಿಸಬೇಕೆಂಬ ನೀತಿಯೂ ಬಂದಿತ್ತು. ಆದರೀಗ ಹೆಲ್ಮೆಟ್‌ಗೆ ಐಎಸ್‌ಐ ಮಾರ್ಕ್ ಇರಲೇಬೇಕೆಂಬುವುದೂ ಕಡ್ಡಾಯವಲ್ಲವೆಂದು ನಗರ ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಸ್ಪಷ್ಟ ಪಡಿಸಿದ್ದಾರೆ.

'ನಿಮ್ಮ ಹೆಲ್ಮೆಟ್ ಐಎಸ್‌ಐ ಮಾರ್ಕ್ ಇರಲೇಬೇಕೆಂಬ ಕಡ್ಡಾಯವಿಲ್ಲ. ಬದಲಾಗಿ ನಿಮ್ಮ ಜೀವನ ರಕ್ಷಣೆಗೆ ಐಎಸ್‌ಐ ಮಾರ್ಕ್‌ನ ಅಸಲಿ‌ ಹೆಲ್ಮೆಟ್ ‌ಧರಿಸಿ. ಬೆಂಗಳೂರಿಗರಿಗೆ  ಸಂಚಾರಿ ಪೊಲೀಸರ ಸಲಹೆ, ಪರಿಶೀಲನೆ ವೇಳೆ ಏಕಾಏಕಿ ಹೆಲ್ಮೆಟ್ ಐಎಸ್‌ಐನಾ. ಇಲ್ಲವಾ.. ? ಅನ್ನೋದು‌ ಸಾಬೀತುಪಡಿಸಲು ಸಾಧ್ಯವಿಲ್ಲ. 

ಅದನ್ನು ಪರೀಕ್ಷಿಸಲು ಲ್ಯಾಬ್‌ನಲ್ಲಿ ಡಿಸ್ಟ್ರಕ್ಟಿವ್ ಟೆಸ್ಟ್ ಮಾಡಬೇಕು,' ಎಂದು ಹೇಳಿದ್ದಾರೆ

'ಘಟನಾ ಸ್ಥಳದಲ್ಲಿ ಐಎಸ್ ಐ ಮಾರ್ಕ್ ಪತ್ತೆಮಾಡಲು ಮಾನದಂಡಗಳಿಲ್ಲ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಈ ವಿಚಾರ ತಿಳಿಸಿ, ನಗರ ಸಂಚಾರಿ ಪೊಲೀಸರಿಗೆ ಪತ್ರ  ಬರೆದಿದೆ. ಹೀಗಾಗಿ ಫೆಬ್ರವರಿಯಿಂದ ಐಎಸ್‌ಐ ಹೆಲ್ಮೆಟ್ ಕುರಿತ ಕಾರ್ಯಾಚರಣೆ ಇಲ್ಲ. ಆದರೆ, ಹಾಫ್ ಹೆಲ್ಮೆಟ್ ಬಳಸುವುದನ್ನು ನಿಷೇಧಿಸಲಾಗಿದೆ,'  ಎಂದು ಹಿತೇಂದ್ರ ಸ್ಪಷ್ಟ ಪಡಿಸಿದ್ದಾರೆ.

click me!