ಮಹಾ ಎಡವಟ್ಟು. ಬದುಕಿದ್ದ ವ್ಯಕ್ತಿಯನ್ನೇ ಶವಾಗಾರದಲಿಟ್ಟ ಕಿಮ್ಸ್

By Suvarna Web DeskFirst Published Jan 8, 2018, 1:38 PM IST
Highlights

ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನನ್ನು ಬದುಕಿರುವಾಗಲೇ, ಮೃತಪಟ್ಟಿದ್ದಾನೆಂದು ಶವಾಗಾರಕ್ಕೆ ಕಳುಹಿಸಿದ ಘಟನೆ ಇಲ್ಲಿನ ಕಿಮ್ಸ್‌ನಲ್ಲಿ ನಡಿದಿದೆ.

ಹುಬ್ಬಳ್ಳಿ: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನನ್ನು ಬದುಕಿರುವಾಗಲೇ, ಮೃತಪಟ್ಟಿದ್ದಾನೆಂದು ಶವಾಗಾರಕ್ಕೆ ಕಳುಹಿಸಿದ ಘಟನೆ ಇಲ್ಲಿನ ಕಿಮ್ಸ್‌ನಲ್ಲಿ ನಡಿದಿದೆ.

ಬೆಳಗಿನ ಜಾವ ಸುಮಾರು 3ರ ಸುಮಾರಿಗೆ ಮರಣೋತ್ತರ ಪರೀಕ್ಷೆಗೆಂದು ಯುವಕನನ್ನು ಶವಾಗಾರಕ್ಕೆ ಸಾಗಿಸಲಾಗಿತ್ತು. ಆದರೆ, ಬೆಳಗ್ಗೆ ಹತ್ತು ಗಂಟೆಗೆ ಮರಣೋತ್ತರ ಪರೀಕ್ಷೆಗೆ ಮುಂದಾದ ವೈದ್ಯರು ಈತ ಬದುಕಿರುವುದಾಗಿ ಹೇಳಿದ್ದಾರೆ. 

ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಈಗ್ಗೆ 20 ನಿಮಿಷಗಳ ಮುಂಚೆ ಯುವಕ ಮೃತಪಟ್ಟಿದ್ದಾಗಿ ಘೋಷಿಸಿದರು. ಅಂದರೆ, ಸಾಯುವ ಏಳು ಗಂಟೆ ಮೊದಲೇ ಯುವಕನನ್ನು ಶಾವಾಗಾರಕ್ಕೆ ಕಿಮ್ಸ್ ಸಿಬ್ಬಂದಿ ಶವಾಗಾರಕ್ಕೆ ಕಳುಹಿಸಿದ್ದರು. 

ಹುಬ್ಬಳ್ಳಿ ಆನಂದ ನಗರ ನಿವಾಸಿ ಪ್ರವೀಣ್ ಮೂಳೆ (23) ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಕಿಮ್ಸ್ ಆಸ್ಪತ್ರೆಯ ಈ ಎಡವಟ್ಟಿಗೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!