ಮಕ್ಕಳನ್ನು ಕಳಕೊಂಡವರ ದುಃಖ ನಿಮ್ಮನ್ನು ಸುಡದೇ ಬಿಡದು: ಸಿಎಂ ವಿರುದ್ಧ ಚಕ್ರವರ್ತಿ ಆಕ್ರೋಶ

Published : Jan 06, 2018, 04:49 PM ISTUpdated : Apr 11, 2018, 01:02 PM IST
ಮಕ್ಕಳನ್ನು ಕಳಕೊಂಡವರ ದುಃಖ ನಿಮ್ಮನ್ನು ಸುಡದೇ ಬಿಡದು: ಸಿಎಂ ವಿರುದ್ಧ ಚಕ್ರವರ್ತಿ ಆಕ್ರೋಶ

ಸಾರಾಂಶ

- ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆ ಖಂಡಿಸಿ, 'ಹಡೆದವ್ವನ ಶಾಪ' ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಅಭಿಯಾನ ಆರಂಭಿಸಿದ ಚಕ್ರವರ್ತಿ ಸೂಲಿಬೆಲೆ. - ಎಲ್ಲೆಡೆಯಿಂದ ತಾಯಂದಿರ ಆಕ್ರೋಶ, ಸಾಮಾಜಿಕ ಜಾಲತಾಣದಲ್ಲಿ ವೈರಲ್.

ಬೆಂಗಳೂರು: ರಾಜ್ಯದಲ್ಲಿ ಪದೆ ಪದೇ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿದ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ, 'ರಾಜ್ಯದ ಪ್ರತಿ ತಾಯಂದಿರೂ ಇಂದು ಆತಂಕದಲ್ಲಿದ್ದಾರೆ. ಆ ತಾಯಿಯ ನೋವು ನಿಮಗೇನೆಂದು ಅರ್ಥವಾಗಲಿ,' ಎಂಬ ಆಕ್ರೋಶದ ಮಾತುಗಳನ್ನು ಆಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತಮ್ಮ ಫೇಸ್‌ಬುಕ್ ಪುಟದಲ್ಲಿಯೂ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ, ಹೇಳಿದ ಹೇಳಿಕೆ ಹಾಕಿದ್ದು, ಎಲ್ಲ ತಾಯಂದಿರೂ ತಮ್ಮದೇ ಆದ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದಾರೆ.

'ನೀವು ಆಳಿದ 5 ವರ್ಷಗಳಲ್ಲಿ ಕರ್ನಾಟಕ ಬದುಕಲು ಯೋಗ್ಯವಲ್ಲದ ರಾಜ್ಯವಾಗಿಬಿಟ್ಟಿತು. ಗೋವಿನಂಥ ಪಶುಗಳಿಗೆ ಬಿಡಿ, ಸ್ವತಃ ಸಿಂಹದಂಥ ಯುವಕರೂ ಹೆದರಿ ತಿರುಗಾಡಬೇಕಾಯ್ತು. ರುದ್ರೇಶ್, ರಾಜು, ಕುಟ್ಟಪ್ಪರಂಥವರು ನಡುರಸ್ತೆಯಲ್ಲಿಯೇ ಹೆಣವಾದರು. ದೀಪಕ್ ರಾವ್‌ನಂಥ ಸಜ್ಜನ ತರುಣ ಎಂಥವರನ್ನೂ ಬೆಚ್ಚಿ ಬೀಳುವ ರೀತಿಯಲ್ಲಿ ರಸ್ತೆಯಲ್ಲಿ ಅಂಗಾತವಾಗಿ ಬಿದ್ದ. ಅವನ ಮೃತ ದೇಹವನ್ನು ಕಂಡರೆ ಈಗಲೂ ಒಮ್ಮೆ ಮೈ ಬೆಚ್ಚಗಾಗುತ್ತದೆ. ಇನ್ನೂ ಬದುಕನ್ನೇ ಕಾಣದಿದ್ದ ಪರೇಶ್ ಮೇಸ್ತ ಸಹಜವಾಗಿಯೇ ನೀರಿಗೆ ಬಿದ್ದು ಸತ್ತನೆಂದಿರಿ ನೀವು!

ಮಕ್ಕಳನ್ನು ಕಳಕೊಳ್ಳುವ ದುಃಖವದೇನೆಂಬುದು ನಿಮಗೂ ಗೊತ್ತು. ಆದರೆ ರಾಜಕೀಯದ ದಾಳಗಳನ್ನೆಸೆಯುವ ಭರದಲ್ಲಿ ನೀವು ಆ ದುಃಖವನ್ನು ಮರೆತು ಮುನ್ನುಗ್ಗಿಬಿಟ್ಟಿರುತ್ತೀರಿ. ಇಂದು ರಾತ್ರಿ ಒಮ್ಮೆ ಮನೆಯಲ್ಲಿ ನಿಮ್ಮ ಪತ್ನಿಯ ಕಂಗಳಲ್ಲಿ ಕಣ್ಣಿಟ್ಟು ನೋಡಿ. ಹಿರಿಮಗನನ್ನು ಕಳಕೊಂಡ ಆಕೆಯ ದುಃಖ ಇಂಗಿದೆಯಾ ಅಂತ ಆಕೆಯ ಹೃದಯದಲ್ಲಿ ಒಮ್ಮೆ ಇಣುಕಿ ನೋಡಿ. ಅದು ಹೇಗೆ ಇಂಗಿರುತ್ತೆ? ತಾಯಿಯ ದುಃಖ ತಾಯಿಗೆ ಮಾತ್ರ ಗೊತ್ತು. ಆ ತಾಯಿಗಾದ ನೋವನ್ನು ಕರ್ನಾಟಕದ ತಾಯಂದಿರೆಲ್ಲ ಅನುಭವಿಸಬೇಕೆಂದು ಸಂಕಲ್ಪವೇನಾದರೂ ಮಾಡಿಬಿಟ್ಟಿದ್ದೀರೇನು? ತಿಂಗಳ ಹಿಂದೆ ಪರೇಶ್ ಮೇಸ್ತನ ತಾಯಿಯ ರೋಧನೆ ಮತ್ತೀಗ ದೀಪಕ್‌ನ ಅಮ್ಮ!

ಎಲ್ಲ ಪಾಪದ ಕೊಡ ನಿಮ್ಮ ತಲೆಯ ಮೇಲೆಯೇ. ನೀವು ರಕ್ಷಿಸುವಿರಿ ಎಂಬ ಭರವಸೆಯ ಮೇಲೆಯೇ ಎಲ್ಲ ಜಿಹಾದಿಗಳು ಕತ್ತಿ ಹಿಡಿದು ಮುನ್ನುಗ್ಗಿರೋದು. ಪೊಲೀಸರು ಸಾಹಸಗೈದು ಅವರನ್ನು ಬಂಧಿಸಿದರೂ ನೀವು ಬಿಡಿಸಿಬಿಡುವಿರೆಂಬ ಭರವಸೆಯಿದೆ ಅವರಿಗೆ. ಅದಕ್ಕೇ ಎಲ್ಲ ಸಾವುಗಳ ಪಾಪವೂ ನಿಮ್ಮ ಹೆಗಲಿಗೆ ಮಾತ್ರ!

ಇಂದು ನಾಡಿನ ಪ್ರತಿಯೊಬ್ಬ ತಾಯಿಯೂ ನಿಮಗೆ ಶಾಪ ಹಾಕುತ್ತಿದ್ದಾರೆ. ಅವರ ಹೃದಯದ ಬೇಗುದಿ ಆಕ್ರೋಶದ ಕಣ್ಣೀರಾಗಿ ಹೊಮ್ಮುತ್ತಿದೆ. ಅದಕ್ಕೆ ಅಕ್ಷರ ರೂಪ ದೊರಕಬೇಕಷ್ಟೆ. ಹಾಗೆ ಬೆಂದ ಹೃದಯದ ತಾಯಂದಿರಿಗೆ ನಿಮಗೊಂದು ಪತ್ರ ಬರೆಯುವಂತೆ ಕೇಳಿಕೊಳ್ಳುತ್ತಿದ್ದೇನೆ. ಬರೆಯಲಾಗದಿದ್ದವರು ಮಾತನಾಡುತ್ತಾರೆ. ಅದನ್ನೂ ನಿಮಗೆ ತಲುಪಿಸುತ್ತೇನೆ.

ಹೆಣ್ಣುಮಕ್ಕಳ ಶಾಪ ತಟ್ಟದೇ ಬಿಡದು. ಮಕ್ಕಳನ್ನು ಕಳಕೊಂಡವರ ದುಃಖ ಸುಡದೇ ಬಿಡದು. ಮತ್ತೊಮ್ಮೆ ಆಕ್ರೋಶದ ನಮಸ್ಕಾರಗಳು.

ಇಷ್ಟಾದರೂ ಹಿಂದುವಾದ್ದರಿಂದ ನಿಮಗೆ ಒಳಿತೇ ಆಗಲಿ ಎಂದು ಆಶಿಸುತ್ತಾ ವಿರಮಿಸುತ್ತೇನೆ.' ಎಂದು ಆಡಿಯೋ ಹಾಗೂ ಲೇಖನವನ್ನು ಬರೆದಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ