
ದಾವಣಗೆರೆ: ಗುಜರಾತ್‌ನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡಿಯೇ ಪಕ್ಷ ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಮೃದು ಹಿಂದುತ್ವ ಧೋರಣೆಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಡಲು ಪಕ್ಷ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಇದರ ಅಂಗವಾಗಿ, ಇಂದು ಇಲ್ಲಿನ ದುರ್ಗಮ್ಮ ದೇವಿಯ ದರ್ಶನ ಪಡೆದರು.
ಕಾಂಗ್ರೆಸ್‌ನ ಸಾಧನ ಸಮಾವೇಶದ ನಡುವೆಯೇ ಸಿಎಂ ಆಯಾ ಪ್ರದೇಶದಲ್ಲಿ ಪ್ರಸಿದ್ಧವಾದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ನಿನ್ನೆ ಗದಗ ಜಿಲ್ಲೆಯ ಸೋಮನಾಥ ಮಂದಿರಕ್ಕೆ ತೆರಳಿದ್ದರು.
ಗದಗದ ಲಕ್ಷ್ಮೇಶ್ವರಕ್ಕೆ ಭೇಟಿ ನೀಡಿದ್ದ ಸಿಎಂ, ಅಲ್ಲಿನ ಸೂಫಿ ಸಂತ ದೂದ್ ಪೀರಾ ದರ್ಗಾಕ್ಕೆ ಭೇಟಿ ನೀಡಿದ್ದರು. ಅಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಕ್ಕರೆಯಿಂದ (84 ಕೆ.ಜಿ.) ತುಲಾಭಾರವನ್ನೂ ಮಾಡಿಸಿಕೊಂಡಿದ್ದರು.