ಸಲಿಂಗಕಾಮಕ್ಕೆ ಸಹಕಾರ ನೀಡದ್ದಕ್ಕೆ ಕೊಲೆ ಮಾಡಿದ ಸಹೋದ್ಯೋಗಿ

Published : Dec 24, 2017, 09:10 AM ISTUpdated : Apr 11, 2018, 12:47 PM IST
ಸಲಿಂಗಕಾಮಕ್ಕೆ ಸಹಕಾರ ನೀಡದ್ದಕ್ಕೆ ಕೊಲೆ ಮಾಡಿದ ಸಹೋದ್ಯೋಗಿ

ಸಾರಾಂಶ

ಸಲಿಂಗಕಾಮಕ್ಕೆ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಸಹೋದ್ಯೋಗಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು: ಸಲಿಂಗಕಾಮಕ್ಕೆ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಸಹೋದ್ಯೋಗಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಸಹೋದ್ಯೋಗಿ ಚೆನ್ನೆಗೌಡ ಎಂಬುವವನನ್ನು ಆರೋಪಿ ದೇವರಾಜ್ ಸಲಿಂಗ ಕಾಮಕ್ಕೆ ಒತ್ತಾಯಿಸಿದ್ದ. ಇದಕ್ಕೆ ಒಪ್ಪದ ಕಾರಣ ಚೆನ್ನೆಗೌಡರನ್ನು ಬಿಯರ್ ಬಾಟಲ್‌ನಿಂದ ಹೊಡೆದು, ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಮುಖವನ್ನು ವಿಕಾರಗೊಳಿಸಿ, ಮೃತದೇಹದ ಗುರುತು ಪತ್ತೆಯಾಗದಂತೆ ಮಾಡಲಾಗಿತ್ತು.ಡಿದ್ದ ಆರೋಪಿ.

ಕಳೆದ ನಾಲ್ಕೈದು ತಿಂಗಳಿಂದ ಈ ಇಬ್ಬರು ಸಲಿಂಗಕಾಮಿಗಳಾಗಿದ್ದರು. ಇದೇ ಉದ್ದೇಶದಿಂದ ಸ್ಮಶಾಣಕ್ಕೆ ಚೆನ್ನೆಗೌಡನನ್ನು ದೇವರಾಜು ಕರೆದುಕೊಂಡು ಹೋಗಿದ್ದ. ಆದರೆ, ಚೆನ್ನೆಗೌಡ ಅವತ್ತು ಸಲಿಂಗಕಾಮಕ್ಕೆ ನಿರಾಕರಣೆ ಮಾಡಿದ್ದಕ್ಕೆ ಕೊಲೆವೆಸಗಲಾಗಿದೆ.

ಆರೋಪಿ  ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ?

ಬಿಯರ್ ಬಾಟಲ್ ಹಾಗೂ ಕೊಲೆ ನಡೆದ ಸ್ಥಳದಲ್ಲಿ ಸಿಕ್ಕ ಬ್ಯಾಂಕ್ ಸ್ಲಿಪ್ ಆಧಾರದಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಇಬ್ಬರು ಮಡಿವಾಳದ ಆರೋಗ್ಯ ರೆಸ್ಟೊರೆಂಟ್‌ನಲ್ಲಿ ಜತೆಯಾಗಿ ಕೆಲಸ ಮಾಡುತ್ತಿದ್ದರು. 

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ