ಬಿಸಿಲಿನ ಝುಳಕ್ಕೆ ಹೈರಾಣಾದ ಪೊಲೀಸ್ ಶ್ವಾನಗಳು: ಬಳ್ಳಾರಿ ಪೊಲೀಸ್ ಇಲಾಖೆಯಲ್ಲಿ ಹೈಟೆಕ್ ವ್ಯವಸ್ಥೆ

By Suvarna Web DeskFirst Published Apr 8, 2017, 4:30 AM IST
Highlights

ಬಳ್ಳಾರಿಯ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ಏರುತ್ತಿದ್ದಂತೆ  ಜನರಷ್ಟೇ ಅಲ್ಲ , ಪ್ರಾಣಿಗಳು ತತ್ತರಿಸಿ ಹೋಗುತ್ತಿವೆ. ಬಿಸಿಲ ಬೇಗೆಯಿಂದ ಪಾರಾಗಲು ಬಳ್ಳಾರಿ ಪೊಲೀಸ್ ಇಲಾಖೆ ಹೈಟೆಕ್ ವ್ಯವಸ್ಥೆ ಮಾಡಿ

ಬಳ್ಳಾರಿ(ಎ.08): ಬಳ್ಳಾರಿಯ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ಏರುತ್ತಿದ್ದಂತೆ  ಜನರಷ್ಟೇ ಅಲ್ಲ , ಪ್ರಾಣಿಗಳು ತತ್ತರಿಸಿ ಹೋಗುತ್ತಿವೆ. ಬಿಸಿಲ ಬೇಗೆಯಿಂದ ಪಾರಾಗಲು ಬಳ್ಳಾರಿ ಪೊಲೀಸ್ ಇಲಾಖೆ ಹೈಟೆಕ್ ವ್ಯವಸ್ಥೆ ಮಾಡಿದೆ.

ಡಿ ಆರ್ ಮೈದಾನದ ಕೊಠಡಿಯಲ್ಲಿರುವ ಆರು ವಿದೇಶಿ ತಳಿಯ ನಾಯಿಗಳಿಗೆ  ರಾಯಲ್ ಟ್ರೀಟ್ ಮೇಂಟ್ ನೀಡಲಾಗುತ್ತಿದೆ. ಪೊಲೀಸ್ ಶ್ವಾನಗಳು ಇರುವ ರೂಮಗಳಲ್ಲಿ ಫ್ಯಾನ್, ಕೂಲರ್ ಅಳವಡಿಸಲಾಗಿದೆ. ಇನ್ನು ಈ ಶ್ವಾನಗಳಿಗೆ ದಿನಕ್ಕೆರಡು ಬಾರಿ ಸ್ನಾನ, ಎಳನೀರು, ಶಕ್ತಿವರ್ಧಕ ಪಾನಿಯಗಳನ್ನ ನೀಡಲಾಗುತ್ತಿದೆ.

ಒಟ್ಟಿನಲ್ಲಿ ಬಿಸಿಲಿನ ತಾಪದಿಂದ ತಂಪಾಗಿರಲು ಮನುಷ್ಯರು ಎಸಿ, ಕೂಲರ್, ಮೊರೆ ಹೋದಂತೆ, ಪೋಲಿಸ್ ನಾಯಿಗಳಿಗೂ ಈ  ಭಾಗ್ಯ ಸಿಕ್ಕಿರುವುದು ವಿಶೇಷವಾಗಿದೆ.

    

click me!