ಇದು ರಾಜ್ಯವನ್ನೇ ಬೆಚ್ಚಿ ಬೀಳಿಸುವ ಆಘಾತಕಾರಿ ಸುದ್ದಿ: ನೀರಿಗಾಗಿ ಬಲಿಯಾಗುತ್ತಿವೆ ಕರುಳ ಕುಡಿಗಳು

By Suvarna Web DeskFirst Published Apr 6, 2017, 2:32 AM IST
Highlights

ಬೆಳಗಾವಿ ಜಿಲ್ಲೆ ಹೊಸವಂಟಮೂರಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸುವರ್ಣನ್ಯೂಸ್​ ಗುಟುಕು ನೀರಿಗೆ ಗರ್ಭಪಾತ ಎಂಬ ಶೀರ್ಷಿಕೆಯಡಿ ​ಮಾರ್ಚ್​ 17ರಂದು  ವರದಿ ಪ್ರಸಾರ ಮಾಡಿತ್ತು. ವರದಿ ನೋಡಿದ ಅಧಿಕಾರಿಗಳು ಗ್ರಾಮಕ್ಕೆ ನೀರು ಪೂರೈಕೆ ಮಾಡಿದ್ರು. ಅದು ಕೇವಲ 2 ದಿನ ಮಾತ್ರ, ಈಗ ಮತ್ತೆ ಆ ಗ್ರಾಮದ ಗೋಳು ಹಾಗೇ ಇದೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ

ಬೆಳಗಾವಿ(ಎ.06): ಬೆಳಗಾವಿ ಜಿಲ್ಲೆ ಹೊಸವಂಟಮೂರಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸುವರ್ಣನ್ಯೂಸ್​ ಗುಟುಕು ನೀರಿಗೆ ಗರ್ಭಪಾತ ಎಂಬ ಶೀರ್ಷಿಕೆಯಡಿ ​ಮಾರ್ಚ್​ 17ರಂದು  ವರದಿ ಪ್ರಸಾರ ಮಾಡಿತ್ತು. ವರದಿ ನೋಡಿದ ಅಧಿಕಾರಿಗಳು ಗ್ರಾಮಕ್ಕೆ ನೀರು ಪೂರೈಕೆ ಮಾಡಿದ್ರು. ಅದು ಕೇವಲ 2 ದಿನ ಮಾತ್ರ, ಈಗ ಮತ್ತೆ ಆ ಗ್ರಾಮದ ಗೋಳು ಹಾಗೇ ಇದೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ

ಬೆಳಗಾವಿ ಜಿಲ್ಲೆ ಹೊಸವಂಟಮೂರಿ ಗ್ರಾಮದಲ್ಲಿ ಮಹಿಳೆಯರು ನೀರಿಗಾಗಿ ಗರ್ಭ ಕಳೆದುಕೊಳ್ಳುವ ಬಗ್ಗೆ ಸುವರ್ಣನ್ಯೂಸ್​​ ನಿರಂತರ ವರದಿ ಪ್ರಸಾರ ಮಾಡಿತ್ತು. ಕುಂಭಕರ್ಣ ನಿದ್ದೆಯಲ್ಲಿದ್ದ ಜಿಲ್ಲಾಡಳಿತದ ಕಣ್ಣು ತೆರೆಸಿತ್ತು. ಹೊಸವಂಟಮೂರಿ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಜಾರಿಕೊಳ್ಳುವ ಉದ್ದೇಶದಿಂದ ಕೇವಲ 2 ದಿನ ಮಾತ್ರ ನೀರು ಪೂರೈಕೆ ಮಾಡಿದ್ದರು.  ಈಗ ಮತ್ತೆ ಮೊದಲಿನಿಂತೆ 4ದಿನಗಳಿಗೆ ಒಮ್ಮೆ ೫ಕೊಡ ನೀರು ಪೂರೈಸಲಾಗುತ್ತಿದೆ. ಆದ್ರೆ ಆ ನೀರು ಕುಡಿಯಲು ಸಾಕಾಗುತ್ತಿಲ್ಲ ಎಂಬುವುದು ಗ್ರಾಮಸ್ಥರ ಆರೋಪ.

ಸುವರ್ಣನ್ಯೂಸ್​​ ವರದಿ ಬಳಿಕ ಬೆಳಗಾವಿ ಜಿಲ್ಲಾಧಿಕಾರಿ ಎನ್.ಜಯರಾಂ ಗ್ರಾಮಸ್ಥರ ನೀರಿನ ಸಮಸ್ಯೆ ಬಗ್ಗೆ ಗಮನಹರಿಸಿ ಪ್ರತಿಯೊಂದು ಮನೆಗೆ ತಲಾ 2 ಬ್ಯಾರೆಲ್ ನೀರು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇನ್ನೇನು ನಮ್ಮ ಸಮಸ್ಯೆ ಬಗೆಹರಿಯುತ್ತೆ ಎಂದು ಗ್ರಾಮಸ್ಥರು ಎನ್ನುವಷ್ಟರಲ್ಲೇ ಮತ್ತೆ ಗ್ರಾಮದಲ್ಲಿ ಮೊದಲಿದ್ದ ಪರಿಸ್ಥಿತಿಗಿಂತ ಈಗ  ಮತ್ತಷ್ಟು ಬಿಗಡಾಯಿಸಿದೆ.

ಇನ್ನು ಗ್ರಾಮದ ಪಿಡಿಓ ಕೂಡ ನೀರು ಪೂರೈಕೆ ಮಾಡಲು ಆಗಲ್ಲ ಅಂತ ತಮ್ಮ ಅಸಹಾಯಕತೆ ತೋಡಿಕೊಂಡರು. ಕುಂಭಕರ್ಣ ನಿದ್ದೆಯಿಂದ ಎದ್ದು ಬಂದಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡುವ ಭರವಸೆ ನೀಡಿ ಆಗ ಜಾರಿಕೊಂಡಿದ್ದರು. ಈಗ ಜನಪ್ರತಿನಿಧಿಗಳು ಉಪಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ, ಅಧಿಕಾರಿಗಳು ಮತ್ತೆ ನಿದ್ದೆಗೆ ಜಾರಿದ್ದಾರೆ. ಗ್ರಾಮಸ್ಥರು ಮಾತ್ರ ಹಿಡಿಶಾಪ ಹಾಕುತ್ತಾ ನೀರಿಗಾಗಿ ಅಲೆಯುತ್ತಿದ್ದಾರೆ.

click me!