ಚಾಮರಾಜನಗರ ಅರಣ್ಯದಲ್ಲಿ ವನ್ಯಜೀವಿಗಳ ಬೇಟೆ: ತಮಿಳುನಾಡಿನ ಗಡಿಯಿಂದ ನುಗ್ಗುತ್ತಿದ್ದಾರೆ ಬೇಟೆಗಾರರು

By Suvarna Web DeskFirst Published Jul 28, 2017, 8:19 AM IST
Highlights

ಮಳೆ ನಿಂತರೂ ಮಳೆಹನಿ ನಿಂತಿಲ್ಲ ಎಂಬಂತಾಗಿದೆ ಚಾಮರಾಜನಗರ ಜಿಲ್ಲೆಯ ಅರಣ್ಯ ಪರಿಸ್ಥಿತಿ. ಕಾಡುಗಳ್ಳ ವೀರಪ್ಪನ್ ಇಲ್ಲವಾದರೂ ಆತನ ಸಂತತಿ ಇಂದಿಗೂ ವನ್ಯಜೀವಗಳನ್ನು ಬೇಟೆಯಾಡುತ್ತಿರುವುದು. ವನ್ಯಜೀವಿ ಪ್ರಿಯರಲ್ಲಿ ಹಾಗೂ ಅರಣ್ಯಾಧಿಕಾರಿಗಳಿಗೆ ಆತಂಕ ಉಂಟು ಮಾಡಿದೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ಚಾಮರಾಜನಗರ(ಜು.28): ಮಳೆ ನಿಂತರೂ ಮಳೆಹನಿ ನಿಂತಿಲ್ಲ ಎಂಬಂತಾಗಿದೆ ಚಾಮರಾಜನಗರ ಜಿಲ್ಲೆಯ ಅರಣ್ಯ ಪರಿಸ್ಥಿತಿ. ಕಾಡುಗಳ್ಳ ವೀರಪ್ಪನ್ ಇಲ್ಲವಾದರೂ ಆತನ ಸಂತತಿ ಇಂದಿಗೂ ವನ್ಯಜೀವಗಳನ್ನು ಬೇಟೆಯಾಡುತ್ತಿರುವುದು. ವನ್ಯಜೀವಿ ಪ್ರಿಯರಲ್ಲಿ ಹಾಗೂ ಅರಣ್ಯಾಧಿಕಾರಿಗಳಿಗೆ ಆತಂಕ ಉಂಟು ಮಾಡಿದೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾವೇರಿ ವನ್ಯಜೀವಿಧಾಮ ಹಾಗೂ ಮಲೆಮಹದೇಶ್ವರಬೆಟ್ಟದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಬೇಟೆಯಾಡುತ್ತಿದ್ದಾರೆ. ಹನೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಬೇಟೆಗಾರರು ಬಂದೂಕು ಹಿಡಿದು ಅರಣ್ಯ ಪ್ರವೇಶಿಸಿರುವುದು, ಉರುಳಿನ ಕುಣಿಕೆಗೆ ಸಿಲುಕಿ ಜಿಂಕೆ ಜೀವಬಿಟ್ಟಿದ್ದು. ಇಬ್ಬರು ಬೇಟೆಗಾರರು ಕಾಡುಪ್ರಾಣಿ ಕೊಂದು ಚರ್ಮ ಸುಲಿದು ಹೊತ್ತೊಕೊಂಡು  ಹೋಗುವ ಭಯಾನಕ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ..

ಹನೂರು ಅರಣ್ಯ ವಲಯದಲ್ಲಿ ಬಹುದಿನಗಳಿಂದ ಜಿಂಕೆ ಕಡವೆಯಂತಹ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ.. ಇತ್ತ ಅರಣ್ಯ ಇಲಾಖೆ ಸಿಬ್ಬಂದಿ ಬೇಟೆಗಾರರ ನಿಯಂತ್ರಣಕ್ಕೆ ಪಣ ತೊಟ್ಟಿದೆ. ಕಳೆದ 10 ತಿಂಗಳಲ್ಲಿ 12 ಮಂದಿ ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಬಂಧಿಸಿ, ನ್ಯಾಯಾಂಗ ವಶಕ್ಕೆ ಸಹ ಒಪ್ಪಿಸಿದ್ದಾರೆ. ಆದರೂ ಅರಣ್ಯ ಸಿಬ್ಬಂದಿ ಕಣ್ತಪ್ಪಿಸಿ ವನ್ಯ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ.

ಇನ್ನು ಚಾಮರಾಜನಗರದ ಬಹುತೇಕ ಅರಣ್ಯ ಪ್ರದೇಶ ತಮಿಳುನಾಡು ಗಡಿಯನ್ನು  ಹೊಂದಿದೆ. ಹೀಗಾಗಿ ನುಸುಳುವ ಬೇಟೆಗಾರರು ಅತ್ತ ಕಡೆಯಿಂದ ಅರಣ್ಯ ಪ್ರವೇಶ ಮಾಡುತ್ತಿದ್ದಾರೆ. ಹೀಗೆ ವನ್ಯಜೀವಿಗಳ ಬೇಟೆ ಮುಂದುವರಿದಲ್ಲಿ ವನ್ಯ ಜೀವಿಗಳ ಸಂತತಿ ಅವನತಿಯಾಗೋದರಲ್ಲಿ ಅನುಮಾನವೇ ಇಲ್ಲ

click me!