ಗಂಡನೇ ಮುಂದೆ ನಿಂತು ಹೆಂಡತಿ ಮದುವೆ ಮಾಡಿಸಿದ್ದ: ಮದುವೆಯ 2 ದಿನದಲ್ಲಿ ಬಯಲಾಯ್ತು ಮೊದಲ ಗಂಡನ ಕರಾಳ ಮುಖ

Published : Jul 09, 2017, 11:31 AM ISTUpdated : Apr 11, 2018, 12:44 PM IST
ಗಂಡನೇ ಮುಂದೆ ನಿಂತು ಹೆಂಡತಿ ಮದುವೆ ಮಾಡಿಸಿದ್ದ: ಮದುವೆಯ 2 ದಿನದಲ್ಲಿ ಬಯಲಾಯ್ತು ಮೊದಲ ಗಂಡನ ಕರಾಳ ಮುಖ

ಸಾರಾಂಶ

ಈ ಹಿಂದೆ ಗಂಡನೇ ಮುಂದೆ ನಿಂತು ಹೆಂಡತಿಯ ಮದುವೆ ಮಾಡಿಸಿದ ವಿಚಿತ್ರ ಘಟನೆ ಎರಡು ದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ನಡೆದಿತ್ತು. ಆದರೀಗ ಈ ಪ್ರಕರಣ ದೊಡ್ಡದೊಂದು ಟ್ವಿಸ್ಟ್ ಪಡೆದಿದೆ. ಅಸಲಿಯತ್ತಿಗೆ ಈ ಮದುವೆ ಹಿಂದಿನ ವಾಸ್ತವತೆಯೇ ಬೇರೆ ಇದೆ ಎಂಬುವುದು ಈಗ ಬಯಲಾಗಿದೆ.

ಚಿಕ್ಕಬಳ್ಳಾಪು(ಜು.09): ಈ ಹಿಂದೆ ಗಂಡನೇ ಮುಂದೆ ನಿಂತು ಹೆಂಡತಿಯ ಮದುವೆ ಮಾಡಿಸಿದ ವಿಚಿತ್ರ ಘಟನೆ ಎರಡು ದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ನಡೆದಿತ್ತು. ಆದರೀಗ ಈ ಪ್ರಕರಣ ದೊಡ್ಡದೊಂದು ಟ್ವಿಸ್ಟ್ ಪಡೆದಿದೆ. ಅಸಲಿಯತ್ತಿಗೆ ಈ ಮದುವೆ ಹಿಂದಿನ ವಾಸ್ತವತೆಯೇ ಬೇರೆ ಇದೆ ಎಂಬುವುದು ಈಗ ಬಯಲಾಗಿದೆ.

ಮದುವೆ ಮಾಡಿಸಿದ್ದ ಮೊದಲ ಪತಿಯ ಕರಾಳ ಮುಖ ಈಗ ಬಯಲಾಗಿದ್ದು, ತಾಳಿ ಕಟ್ಟುವುದಕ್ಕೂ ಮೊದಲು ಮೊದಲ ಪತಿ ವರನಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ ಎಂದು ತಿಳಿದು ಬಂದಿದೆ. ಈಶ್ವರ್ ಗೌಡ(ಮೊದಲ ಪತಿ) ತನ್ನ ಸಹಚರರೊಂದಿಗೆ ನನ್ನನ್ನು ಕೂಡಿ ಹಾಕಿ ಥಳಿಸಿರುವುದಾಗಿ ಎರಡನೆಯ ಪತಿ ಮಂಜುನಾಥ ದೂರು ನೀಡಿದ್ದಾರೆ. ಮಂಜುನಾಥ್ ಮೈತುಂಬಾ ಬಾಸುಂಡೆಗಳು ಕಂಡು ಬಂದಿದ್ದು, ರಕ್ತ ಹೆಪ್ಪುಗಟ್ಟುವಂತೆ ಥಳಿಸಿ ನನ್ನಿಂದ ತಾಳಿ ಕಟ್ಟಿಸಿರುವುದಾಗಿ ಮಂಜುನಾಥ್ ಆರೋಪಿಸಿ ಚಿಂತಾಮಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತಾಗಿ ಹೇಳಿಕೆ ನೀಡಿರುವ ರಚನಾ ಮೊದಲ ಪತಿ ಈಶ್ವರ್ ಗೌಡ, ಪತ್ನಿ ಹಾಗೂ ಮಂಜುನಾಥ್ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದು, ಅವರ ಮನೆಯಲ್ಲೂ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೊಪ್ಪದ ಮನೆಯವರು ಆತನಿಗೆ ಥಳಿಸಿದ್ದಾರೆ ಎಂದಿದ್ದಾರೆ.

ಇನ್ನು ತನ್ನ ಪತ್ನಿಯನ್ನೇ ಮದುವೆ ಮಾಡಿಕೊಡಲು ಕಾರಣವೇನು ಎಂಬ ವಿಚಾರದ ಕುರಿತಾಗಿ ಮಾತನಾಡಿರುವ ಈಶ್ವರ ಗೌಡ 'ನನ್ನ ಬಳಿಯೇ ಬಂದು ತಾನು ರಚನಾಳನ್ನು ಇಷ್ಟಪಟ್ಟಿದ್ದೇನೆ, ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದ. ಮದುವೆಯಾದ ಬಳಿಕ 4 ದಿನ

ಚಿಂತಾಮಣಿ ನಗರದ ಅಶ್ವಿನಿ ಬಡಾವಣೆಯ ನಿವಾಸಿ ವಕೀಲೆ ಹಾಗೂ ರಾಜ್ಯ ರೈತ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ ಎಸ್.ರಚನಾ ತಾಲೂಕಿನ ಪೆದ್ದೂರು ಗ್ರಾಮದ ವಕೀಲ ಈಶ್ವರಗೌಡನನ್ನು ಕಳೆದ ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದ್ರೆ ಅತನಿಗೆ ವಿಚ್ಛೇಧನ ನೀಡಿದ್ದ ಆಕೆ ಇದೀಗ ರಚನಾ ನಡೆಸುತ್ತಿದ್ದ ರಚನಾ ಕ್ರಿಯೇಟಿವ್ ಖಾಸಗಿ ಶಾಲೆಯ ವ್ಯಾನ್ ಚಾಲಕ ಮಂಜುನಾಥನನ್ನು ವಿಚ್ಚೇಧಿತ ಗಂಡನ ಸಮ್ಮುಖದಲ್ಲಿ ಮದುವೆಯಾಗಿದ್ದಾಳೆ. ಆದ್ರೆ ಇದು ಬಲವಂತದ ಮದುವೆ ಎಂದು ಈಗ ಹೇಳಲಾಗುತ್ತಿದೆ. ಅದೇನಿದ್ದರೂ ಈ ಪ್ರಕರಣದ ಸತ್ಯಾಸತ್ಯತೆ ವಿಚಾರಣೆಯ ಬಳಿಕಷ್ಟೇ ತಿಳಿಯಬೇಕಿದೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ