ಸಾಫ್ಟ್ ಹಿಂದುತ್ವದಿಂದ ಹಿಂದೆ ಸರಿತಾ ಕಾಂಗ್ರಸ್..?

By Suvarna Web DeskFirst Published Feb 22, 2018, 1:18 PM IST
Highlights

ಗುಜರಾತ್‌ನಲ್ಲಿ ಹಿಂದುತ್ವ ಧೋರಣೆ ತೋರಿದ ಕಾಂಗ್ರೆಸ್‌ಗೆ ಜನರು ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿಯೂ ಇದೇ ತಂತ್ರಕ್ಕೆ ಕಾಂಗ್ರೆಸ್ ಮೊರೆ ಹೋಗಲು ಮುಂದಾಗಿತ್ತು. ಆದರೆ, ಇದೀಗ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದು, ಸಾಫ್ಟ್ ಹಿಂದುತ್ವದಿಂದ ಪಕ್ಷ ಹಿಂದೆ ಸರಿಯುತ್ತಿದೆ, ಎಂದೆನಿಸುತ್ತಿದೆ.

ಬೆಂಗಳೂರು: ಗುಜರಾತ್‌ನಲ್ಲಿ ಹಿಂದುತ್ವ ಧೋರಣೆ ತೋರಿದ ಕಾಂಗ್ರೆಸ್‌ಗೆ ಜನರು ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿಯೂ ಇದೇ ತಂತ್ರಕ್ಕೆ ಕಾಂಗ್ರೆಸ್ ಮೊರೆ ಹೋಗಲು ಮುಂದಾಗಿತ್ತು. ಆದರೆ, ಇದೀಗ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದು, ಸಾಫ್ಟ್ ಹಿಂದುತ್ವದಿಂದ ಪಕ್ಷ ಹಿಂದೆ ಸರಿಯುತ್ತಿದೆ, ಎಂದೆನಿಸುತ್ತಿದೆ.

ರಾಹುಲ್ 2 ನೇ ಹಂತದ ಜನಾರ್ಶಿವಾದ ಯಾತ್ರೆಯಲ್ಲಿ ಹಿಂದೂ ದೇವಾಲಯಗಳ ಭೇಟಿಯೇ  ಇಲ್ಲ. ಮೊದಲನೇ ಯಾತ್ರೆಯಲ್ಲಿ ದೇವಸ್ಥಾನಗಳು, ದರ್ಗಾಗಳಿಗೆ ಪ್ರವಾಸದ ವೇಳಾಪಟ್ಟಿ ರೂಪಿಸಿದ್ದ ಕೆಪಿಸಿಸಿ, ಎರಡನೇ ಯಾತ್ರೆಯ ವೇಳಾಪಟ್ಟಿಯಲ್ಲಿ ದೇವಸ್ಥಾನ ದರ್ಗಾ ಭೇಟಿಯನ್ನು ಪ್ರಸ್ತಾಪಿಸಿಯೇ ಇಲ್ಲ. 


'ಯಾತ್ರೆಯ ಮಧ್ಯದಲ್ಲಿ ದೇವಸ್ಥಾನಗಳಿಗೆ ಹೋಗುವ ಮನಸು ತೋರಿದ್ರೆ ರಾಹುಲ್ ಹೋಗ್ತಾರೆ,' ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹೇಳಿದ್ದು, ' ಬಿಜೆಪಿಯಂಥ ಹಾರ್ಡ್ ಹಿಂದುತ್ವ ಕಾಂಗ್ರೆಸ್‌ಗೆ ಬೇಡ,' ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 

click me!