ಒಂದೇ ಮರದಲ್ಲಿ ಬೆಳೆಯುತ್ತವೆ 20 ಬಗೆಯ ಮಾವು: ಪವಾಡವಲ್ಲ, 70 ವರ್ಷದ ವ್ಯಕ್ತಿಯ ಚಮತ್ಕಾರ

Published : Apr 02, 2017, 04:25 AM ISTUpdated : Apr 11, 2018, 01:00 PM IST
ಒಂದೇ ಮರದಲ್ಲಿ ಬೆಳೆಯುತ್ತವೆ 20 ಬಗೆಯ ಮಾವು: ಪವಾಡವಲ್ಲ, 70 ವರ್ಷದ ವ್ಯಕ್ತಿಯ ಚಮತ್ಕಾರ

ಸಾರಾಂಶ

ಯುಗಾದಿ ಬಂತು ಅಂದರೆ ಎಲ್ಲರ ಕಣ್ಣು ಮಾವಿನ ಮರದತ್ತ ಸಾಗುತ್ತದೆ. ಮಾವಿನ ಹಣ್ಣು ಯಾರಿಗೆ ತಾನೆ ಇಷ್ಟ ಆಗಲ್ಲ? ಹುಳಿ ಹುಳಿಯ ತೋತಾಪುರಿ ಕಾಯಿ, ರಸ ಭರಿತವಾದ ರಸಪೂರಿ ಹಣ್ಣು, ಸಿಹಿ ಭರಿತ ಆಲ್ಫಾನ್ಸೊ ಹೀಗೆ ಹೆಸರೆತ್ತಿದರೆ ಬಾಯಲ್ಲಿ ನೀರು ಬರುತ್ತದೆ. ಇನ್ನೂ ಈ ಹಣ್ಣುಗಳೆಲ್ಲಾ ಒಂದೇ ಮರದಲ್ಲಿ ಬಿಟ್ಟರೆ ಹೇಗಿರುತ್ತೆ? ಇದು ಸಾಧ್ಯಾನಾ ಅಂತೀರಾ? ಹಾಗಾದ್ರೆ ಈ  ಸ್ಟೋರಿ ಓದಿ.

ಶಿವಮೊಗ್ಗ(ಎ.02): ಯುಗಾದಿ ಬಂತು ಅಂದರೆ ಎಲ್ಲರ ಕಣ್ಣು ಮಾವಿನ ಮರದತ್ತ ಸಾಗುತ್ತದೆ. ಮಾವಿನ ಹಣ್ಣು ಯಾರಿಗೆ ತಾನೆ ಇಷ್ಟ ಆಗಲ್ಲ? ಹುಳಿ ಹುಳಿಯ ತೋತಾಪುರಿ ಕಾಯಿ, ರಸ ಭರಿತವಾದ ರಸಪೂರಿ ಹಣ್ಣು, ಸಿಹಿ ಭರಿತ ಆಲ್ಫಾನ್ಸೊ ಹೀಗೆ ಹೆಸರೆತ್ತಿದರೆ ಬಾಯಲ್ಲಿ ನೀರು ಬರುತ್ತದೆ. ಇನ್ನೂ ಈ ಹಣ್ಣುಗಳೆಲ್ಲಾ ಒಂದೇ ಮರದಲ್ಲಿ ಬಿಟ್ಟರೆ ಹೇಗಿರುತ್ತೆ? ಇದು ಸಾಧ್ಯಾನಾ ಅಂತೀರಾ? ಹಾಗಾದ್ರೆ ಈ  ಸ್ಟೋರಿ ಓದಿ.

ಒಂದೇ ಮರದಲ್ಲಿ 20 ವೆರೈಟಿ ಮಾವು ಬೆಳೆಯುವುದು ಅಚ್ಚರಿಯೇ. ಆದರೆ ಹೀಗಾಗಿದ್ದು ಪವಾಡವಲ್ಲ ಬದಲಿಗೆ ಒಬ್ಬ ನಿವೃತ್ತ ತೋಟಗಾರಿಕಾ ಅಧಿಕಾರಿಯ ಚಮತ್ಕಾರ. ಶಿವಮೊಗ್ಗ ಜಿಲ್ಲೆಯ, ವಿಜಯನಗರದ ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಕೆ.ಶ್ರೀನಿವಾಸ್ ಅವರೇ ಈ ಚಮತ್ಕಾರದ ಹಿಂದಿರುವ ವ್ಯಕ್ತಿ. ಮಾವಿನ  ಮರಕ್ಕೆ ವಿವಿಧ ತಳಿಗಳ ಕಸಿ ಮಾಡೋ ಮೂಲಕ, ಇವರು ಒಂದೇ ಮರದಲ್ಲಿ ತೋತಾಪುರಿ, ರಸಪುರಿ, ಮಲ್ಲಿಕಾ ಸೇರಿದಂತೆ 20 ತಳಿಗಳನ್ನು ಬೆಳೆಸಿದ್ದಾರೆ.

ತಮ್ಮ ವೃತ್ತಿ ಜೀವನದ ಅನುಭವದಿಂದ 70 ರ ಇಳಿ ವಯಸ್ಸಿನಲ್ಲಿ ಇಂತಹದೊಂದು ಚಮತ್ಕಾರ ಮಾಡಿರುವುದು, ಶ್ರೀನಿವಾಸ್ ಅವರ ಬುದ್ಧಿವಂತಿಕೆಗೆ ಹಿಡಿದ ಕೈ ಗನ್ನಡಿಯಾಗಿದೆ. ಅಷ್ಟೇ ಅಲ್ಲದೇ ವರ್ಷ ಪೂರ್ತಿ ಈ ಮರದಲ್ಲಿ ಮಾವಿನ ಹಣ್ಣುಗಳು ಸಿಗುವುದು ಮತ್ತೊಂದು ವಿಶೇಷ.

ಇವರ ಸಾಧನೆಗೆ ವೃತ್ತಿ ಬದುಕಿನ ಅನುಭವದ ಜೊತೆ, ಪ್ರಕೃತಿಯು ಸ್ಪಂದನೆಯೂ ಇದೆ. ಇವರ ಸಾಧನೆ ಉಳಿದವರಿಗೆಲ್ಲ ಮಾದರಿ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ