ಹಾವೇರಿ, ಗದಗ, ಧಾರವಾಡ ಪತ್ರಕರ್ತರಿಗೆ ಹುಬ್ಬಳ್ಳಿಯಲ್ಲಿ ವಿಶಿಷ್ಟ ಕಾರ್ಯಾಗಾರ

By Web Desk  |  First Published Oct 17, 2019, 4:33 PM IST

ಮೂರು ಜಿಲ್ಲೆಯ ಪತ್ರಕರ್ತರಿಗೆ ಕಾರ್ಯಾಗಾರ/ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್ ಭಾಗಿ/ ಶನಿವಾರ ಅಕ್ಟೋಬರ್ 19 ರಂದು ಹುಬ್ಬಳ್ಳಿಯಲ್ಲಿ ಕಾರ್ಯಾಗಾರ/ ಹುಬ್ಬಳ್ಳಿ ಜೆಸಿ ನಗರದ ಚೇಂಬರ್ಸ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಆರಂಭ


ಹುಬ್ಬಳ್ಳಿ(ಅ. 17)  ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಧಾರವಾಡದ ಕಾರ್ಯನಿರತ ಪತ್ರಕರ್ತರ ಸಹಯೋಗದಲ್ಲಿ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆ ಪತ್ರಕರ್ತರಿಗೆ 'ನವ ಮಾಧ್ಯಮಗಳ ಸವಾಲು ಮತ್ತು ನಿರ್ವಹಣೆ' ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಅಕ್ಟೋಬರ್ 19  ಶನಿವಾರ ಹುಬ್ಬಳ್ಳಿ ಜೆಸಿ ನಗರದ ಚೇಂಬರ್ಸ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ.

Tap to resize

Latest Videos

ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಶಾಸಕ ಪ್ರಸಾದ್ ಅಬ್ಬಯ್ಯ, ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪಂಕಜ್ ಕುಮಾರ್ ಪಾಂಡೆ, ವಾರ್ತಾ ಇಲಾಖೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಕಪ್ಪತಗುಡ್ಡಕ್ಕೆ ಮತ್ತೊಮ್ಮೆ ಅಗ್ನಿ ಪರೀಕ್ಷೆ

ಮೊದಲ ಗೋಷ್ಠಿ: ಮಧ್ಯಾಹ್ನ 12 ರಿಂದ ಗೋಷ್ಠಿಗಳು ಆರಂಭವಾಗಲಿದೆ. ಸುವರ್ಣ ನ್ಯೂಸ್ .ಕಾಂ ಪ್ರಧಾನ ಸಂಪಾದಕ ಎಸ್.ಕೆ.ಶಾಮಸುಂದರ 'ನವ ಮಾಧ್ಯಮಗಳ ಸವಾಲು ಮತ್ತು ನಿರ್ವಹಣೆ' ವಿಷಯ ಮಂಡನೆ ಮಾಡಲಿದ್ದಾರೆ.

ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಪ್ರಧಾನ್ ಗುರುದತ್ತ 'ಪತ್ರಿಕೋದ್ಯಮದಲ್ಲಿ ಭಾಷಾಂತರದ ಸಮಸ್ಯೆಗಳು'  ವಿಷಯ ಮಂಡನೆಯನ್ನು ಮಧ್ಯಾಹ್ನ 2.45ಕ್ಕೆ ಮಾಡಲಿದ್ದಾರೆ.

ಕಲಾಪಕ್ಕೆ ಕ್ಯಾಮರಾ, ಮೊಬೈಲ್ ಒಯಗ್ಯಂಗಿಲ್ಲ.. ಪತ್ರಕರ್ತರಿಗೆ ಸ್ಪೀಕರ್ ನಿರ್ಬಂಧ

ಸಮಾರೋಪ ಕಾರ್ಯಕ್ರಮದಲ್ಲಿ ಧಾರವಾಡ ಡಿಸಿ ದೀಪಾ ಚೋಳನ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಆರ್.ದಿಲೀಪ್, ಧಾರವಾಡ ಜಿಪಂ ಸಿಇಒ ಬಿ.ಸಿ.ಸತೀಶ್ ಪಾಲ್ಗೊಳ್ಳಲಿದ್ದಾರೆ. 

ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಡೊಳ್ಳಿನ್, ರಂಗನಾಥ್ ಬಿ.ಆರ್, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ.ರೂಪಾ ಕಾರ್ಯಕ್ರಮ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

 

 

 

click me!