Hubballi violence ಪಾರದರ್ಶಕವಾಗಿ ತನಿಖೆ ನಡೆಸಬೇಕೆಂದು ಆಗ್ರಹ

By Suvarna News  |  First Published Apr 25, 2022, 1:59 PM IST

ಧಾರವಾಡದಲ್ಲಿ ಕಳೆದ ಎಪ್ರಿಲ್ 16 ರಂದು ಆದ ಹುಬ್ಬಳ್ಳಿ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪಾರದರ್ಶಕ ವಾಗಿ ತನಿಖೆ ಆಗಬೇಕೆಂದು ಜಾಗೃತ ನಾಗರಿಕ ವೇದಿಕೆಯ ಡಾ.ವೆಂಕನಗೌಡರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಏ.25): ಧಾರವಾಡ (Dharwad) ಜಿಲ್ಲೆಯಲ್ಲಿ ಇತ್ತೀಚೆಗೆ ಕೋಮುವಾದಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಆದರೆ ಕಳೆದ ಎಪ್ರಿಲ್ 16 ರಂದು ಆದ ಹುಬ್ಬಳ್ಳಿ ಗಲಾಟೆ ವಿಚಾರ ಇಡಿ ರಾಜ್ಯದಲ್ಲಿ ಭಾರಿ ಸುದ್ದು ಮಾಡಿತ್ತು. ಧಾರವಾಡದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಜಾಗೃತ ನಾಗರಿಕ ವೇದಿಕೆಯವರು ಪೋಲಿಸ್ ಇಲಾಖೆ ಪಾರದರ್ಶಕ ವಾಗಿ ತನಿಖೆ ಆಗಬೇಕು ಎಂದು ಡಾ.ವೆಂಕನಗೌಡರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. 

Tap to resize

Latest Videos

ಸಮಾಜ ಸೇವಕ ವೆಂಕನಗೌಡ ಪಾಟೀಲರು ಮಾತನಾಡಿ ಹುಬ್ಬಳ್ಳಿ ಘಟನೆ ವ್ಯವಸ್ಥಿತವಾಗಿ ನಡೆದಿದೆ ಇದಕ್ಕೆ ಮೂಲ‌ ಕಾರಣ ಅಭಿಷೇಕ್ ಹಿರೇಮಠ ಕಾರಣ ಎಂಬ ಹಿಂದೂ ಯುವಕ, ಪೋಸ್ಟ ಹಾಕಿದ ವ್ಯಕ್ತಿಯ ಹಿಂದೆ ಇರುವ ಕೈ ಯಾವುದು ಆಡಳಿತ ಪಕ್ಷದ ಕೆಲ ಸಚಿವರು ಈ ಘಟನೆ ಹಿಂದೆ ಇದ್ದಾರೆ ಎಂಬುದನ್ನ ತನಿಖೆಯಾಗಬೇಕು ಹಿಂದೂ ಮುಸ್ಲಿಂ ಗಳ ಮಧ್ಯ ವ್ಯವಸ್ಥಿತವಾಗಿ ಕೆಲವರು ಆಟ ವಾಡುತ್ತಿದ್ದಾರೆ ಪ್ರಮೋದ್ ಮುತಾಲಿಕ್ ಅವರು ಒಂದೆ ಜಾತಿಯ ಮೆಲೆ ಮಾತನಾಡುತ್ತಿದ್ದಾರೆ,ಪ್ರಮೋದ್ ಮುತಾಲಿಕ್ ಅವರನ್ನ ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

Chamarajanagara ಬ್ಯಾಗ್ ನಲ್ಲಿ ನವಜಾತ ಗಂಡು ಶಿಶು ಪತ್ತೆ!

ಹುಬ್ಬಳ್ಳಿ ಘಟನೆಯಲ್ಲಿ  ಭಾಗಿಯಾಗಿದವರ ಮೆಲೆ ಕ್ರಮ ಆಗಬೇಕು. ಘಟನೆಯ ದಿನ ಹೈ ಮಾಸ್ಕ ಆಪ್ ಆಗಿದ್ದು, ಮುಸುಕುದಾರಿಗಳು ಯಾರು ಬಂದಿದ್ದರು ಎಂಬುದರ ಬಗ್ಗೆ ತನಿಖೆ ಆಗಬೇಕು ಘಟನೆ ಹಿಂದೆ ಹೀಂದೂ ಕೆಲ ಸಂಘಟನೆಗಳ‌ ಪಾತ್ರದ ಬಗ್ಗೆ ತನಿಖೆ ಯಾಗಬೇಕು ಅಭಿಷೇಕ್ ಹಿಂದೆ ಯಾರ ಕೈವಾಡ ಇದೆ ಎಂದು ಪಾರದರ್ಶಕ ತನಿಖೆಯಾಗಬೇಕು, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಷ ಬೀಜವನ್ನ ಬಿತ್ತುತ್ತಿದ್ದಾರೆ ಕೋಮು ಗಲಭೆ ಘಟನೆಯಲ್ಲಿ ಆಡಳಿತ ಪಕ್ಷದ ಕೆಲವರು ಬಾಗಿಯಾಗಿದ್ದಾರೆ ಮುಂದಿನ ವಿಧಾನಸಭಾ ಚುಣಾವಣೆಯ ಉದ್ದೇಶದಿಂದ ಆಡಳಿತ ಪಕ್ಷ ಈ ರೀತಿ ಮಾಡುತ್ತಿದ್ದಾರೆ. ಅಮಾಯಕರಿಗೆ ಹಿಂಸೆ ಮಾಡಬೇಡಿ, ನಿಜವಾದ ತಪ್ಪಿತಸ್ಥರ ಮೆಲೆ ಕ್ರಮ ಆಗಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವಾಗಿ ಮಾತನಾಡಿದರು.

ಏನಿದು ಪ್ರಕರಣ: ಕಳೆದ ಎಪ್ರಿಲ್ 16 ರಂದು ಅದ ಹಳೆ ಹುಬ್ಬಳ್ಳಿಯಲ್ಲಿ ಹಿಂದೂ ಯುವಕನೊಬ್ಬ ಮಸಿದಿಯ ಮೆಲೆ‌ ಕೇಸರಿ ಧ್ವಜ ವನ್ನ‌ ಹಾರಿಸಿ ಪೋಸ್ಟವೊಂದ‌ನ್ನ ಮಾಡಿದ್ದಾನೆ. ಬಳಿಕ ಹಳೆ ಹುಬ್ಬಳ್ಳಿಯಲ್ಲಿ 2000 ಕ್ಕೂ ಹೆಚ್ಷು ಮುಸ್ಲಿಂ ಸಮುದಾಯದವರು ಬಂದು ಹಳೆ ಹುಬ್ಬಳ್ಳಿ ಪೊಲಿಸ್ ಠಾಣೆಗೆ ಮುತ್ತಿಗೆ ಹಾಕಿ ಗಲಾಟೆಯನ್ನ‌ ಮಾಡಿದರು. ಘಟನೆಯನ್ನ ಚದುರಿಸಲು ಪೊಲಿಸರು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನ ಚದುರಿಸಿದ್ದಾರೆ. ಗಲಭೆಕೋರರು ಪೋಲಿಸ್ ಜೀಪ್‌ಗಳನ್ನ ಒಡೆದು ಹಾಕಿದ್ದಾರೆ. ಇನ್ನು ಪೋಸ್ಟ ಮಾಡಿದ ಅಭಿಷೇಕ್ ಹಿರೇಮಠ ಎಂಬ ಯುವಕನನ್ನ ಪೊಲಿಸರು ಬಂದಿಸಿ ಸದ್ಯ ನ್ಯಾಯಾಂಗ್ ಬಂದನದಲ್ಲಿದ್ದಾನೆ. ಇನ್ನು 140 ಕ್ಕು ಹೆಚ್ಚು ಗಲಬೆಕೋರರನ್ನ ಪೋಲಿಸ್ ಕಮಿಷನರ್ ಲಾಬೂರಾಂ ಅವರ ಮಾರ್ಗದರ್ಶನದಲ್ಲಿ ಹಳೆ ಹುಬ್ಬಳ್ಳಿ ಪೋಲಿಸರು ಬಂದಿಸಿದ್ದಾರೆ. ಇನ್ನು ಪ್ರಕರಣವನ್ನ ಪೊಲಿಸರು ತನಿಖೆಯಲ್ಲಿ ನಡೆಸುತ್ತಿದ್ದಾರೆ.

Hubli Violence ಹುಬ್ಬಳ್ಳಿ ಗಲಭೆಕೋರರ ವಿರುದ್ಧ ಕೋಕಾ ದಾಖಲಿಸಿ, ಮುತಾಲಿಕ್ ಆಗ್ರಹ

ಧಾರವಾಡದ ಸರ್ಕಿಟ್ ಬಸಿರ್ ಅಹ್ಮದ್ ಖಾನ್ ಜಾಗಗೀರದಾರ, ಮಾತನಾಡಿ ಘಟನೆಯನ್ನ ನಾವು ವಖಂಡಿಸುತ್ತೆವೆ, ಈಗಾಗಲೆ 140 ಹೆಚ್ಚು ಜನರನ್ನ ಬಂದಿಸಲಾಗಿದೆ. ಅದರಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಪೋಲಿಸರು ಸೂಕ್ತವಾಗಿ ತನಿಖೆ ಮಾಡಬೇಕು ಜೊತೆಗೆ ದೇಶದಲ್ಲಿ ನಾವು ಹಿಂದೂ ಮುಸ್ಲಿಂ ಸಮುದಾಯದವರು ಒಗ್ಗಾಟಾಗಿದ್ದೆವೆ ಇಲ್ಲಿ ಕೆಲವರು ಪ್ರಿಪ್ಲಾನ್ ಗೇಮ್ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಾವು ವಿರೋಧ ಮಾಡುತ್ತಿಲ್ಲ ಕೆಲ ಕಿಡಗೇಡಿಗಳು ಈ ರೀತಿ ಮಾಡುತ್ತಿದ್ದಾರೆ. ಪೋಲಿಸರು ಸೂಕ್ತವಾದ ತನಿಖೆಯನ್ನ ಮಾಡಬೇಕಿದೆ ಎಂದು ಆಗ್ರಹ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಡಾ.ವೆಂಕನಗೌಡ ಪಾಟೀಲ, ಮೋಹಿನ್ ಬಿಡಿವಾಲೆ, ಮಹ್ಮದ್ ಸಾಬ್ ಖುಡಚಿ, ರಪೀಕ್ ಕಿಲ್ಲೆದಾರ ಭಾಗಿಯಾಗಿದ್ದರು‌.

click me!