ಹುಬ್ಬಳ್ಳಿ ಸ್ಫೋಟ ಪ್ರಕರಣ: ಆರ್‌ಪಿಎಫ್‌ ಎಎಸ್‌ಐ, ಸ್ಟೇಷನ್‌ ಮಾಸ್ಟರ್‌ ಅಮಾನತು

By Web DeskFirst Published Oct 27, 2019, 7:29 AM IST
Highlights

ರೈಲ್ವೆ ನಿಲ್ದಾಣದಲ್ಲಿನ ಸ್ಫೋಟ ಪ್ರಕರಣ| ಕರ್ತವ್ಯಲೋಪದಡಿ ಇಬ್ಬರು ಅಧಿಕಾರಿಗಳ ಅಮಾನತು| ವಿಮಾನ ನಿಲ್ದಾಣದ ರೀತಿ ರೈಲ್ವೆ ನಿಲ್ದಾಣಗಳಲ್ಲೂ ಸ್ಕ್ಯಾನರ್‌ ಅಳವಡಿಸುವ ಕುರಿತು ಸಮಾಲೋಚನೆ|  ರೈಲ್ವೆ ಇಲಾಖೆ ಜನರ ಸುರಕ್ಷತೆಗೆ ಮೊದಲ ಆದ್ಯತೆ| 

ಹುಬ್ಬಳ್ಳಿ(ಅ. 27): ಇಲ್ಲಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿನ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದಡಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಮುಂದೆ ಈ ರೀತಿಯ ಘಟನೆಗಳನ್ನು ತಡೆಯುವ ಉದ್ದೇಶದಿಂದ ವಿಮಾನ ನಿಲ್ದಾಣದ ರೀತಿ ರೈಲ್ವೆ ನಿಲ್ದಾಣಗಳಲ್ಲೂ ಸ್ಕ್ಯಾನರ್‌ ಅಳವಡಿಸುವ ಕುರಿತು ಸಮಾಲೋಚಿಸಲಾಗುವುದು ಎಂದು ರೈಲ್ವೆ ರಾಜ್ಯ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರು ತಿಳಿಸಿದ್ದಾರೆ.  

ಹುಬ್ಬಳ್ಳಿ ಸ್ಫೋಟ ಪ್ರಕರಣ: ಮಹಾರಾಷ್ಟ್ರ, ಆಂಧ್ರಕ್ಕೆ 4 ತನಿಖಾ ತಂಡ

ಶನಿವಾರ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈಲ್ವೆ ಇಲಾಖೆ ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಿದೆ. ಮೇಲ್ನೋಟಕ್ಕೆ ಕರ್ತವ್ಯಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸ್ಟೇಷನ್‌ ಮಾಸ್ಟರ್‌ ಹಾಗೂ ಆರ್‌ಪಿಎಫ್‌ ಎಎಸ್‌ಐ ಅನ್ನು ಅಮಾನತು ಮಾಡಲಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರೈಲ್ವೆಯೊಳಗೆ ಬರುವ ಎಲ್ಲರ ಲಗೇಜ್‌ಗಳಲ್ಲಿ ಏನೇನಿದೆ ಎಂದು ತಪಾಸಣೆ ಮಾಡುವುದು ಅಸಾಧ್ಯ. ಹೀಗಾಗಿ ಏರ್ಪೋರ್ಟ್‌ ಮಾದರಿಯಲ್ಲಿ ಸ್ಕ್ಯಾ‌ನಿಂಗ್‌ ಯಂತ್ರ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ರಾಜ್ಯ ರೈಲ್ವೆ ಪೊಲೀಸ್‌ ಪ್ರಕರಣದ ನಡೆಸುತ್ತಿದ್ದು, ಪ್ರಕರಣದ ಕುರಿತು ಸಂಪೂರ್ಣ ವರದಿ ಸಿದ್ಧಪಡಿಸುವಂತೆ ಆರ್‌ಪಿಎಫ್‌ ಹಾಗೂ ಜಿಆರ್‌ಪಿಗೆ ತಿಳಿಸಿದ್ದೇವೆ ಎಂದರು.

ಹುಬ್ಬಳ್ಳಿ ಸ್ಫೋಟ​: ನನ್ನ ಮಗನ ಕೈಯಲ್ಲೇಕೆ ಸ್ಫೋಟಕ ನೀಡಿದಿರಿ?

ಬಳಿಕ ಕಿಮ್ಸ್‌ಗೆ ಭೇಟಿ ನೀಡಿದ ಸುರೇಶ ಅಂಗಡಿ, ಸ್ಫೋಟದಲ್ಲಿ ಗಾಯಗೊಂಡ ಹುಸೇನ್‌ ಸಾಬ್‌ ನಾಯಕವಾಲೆ ಆರೋಗ್ಯ ವಿಚಾರಿಸಿದರು. 

ಸ್ಫೋಟಕ ನಿಷ್ಕ್ರೀಯ

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದ 8 ಡಬ್ಬಿಗಳಲ್ಲಿದ್ದ 15 ಸ್ಫೋಟಗಳನ್ನು ಶನಿವಾರ ನಿಷ್ಕ್ರೀಯಗೊಳಿಸಲಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಬಾಂಬ್‌ ಪತ್ತೆ ಮತ್ತು ನಿಷ್ಕ್ರೀಯ ದಳದ ಸಿಬ್ಬಂದಿ, ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡರು. ಬಳಿಕ ಹುಬ್ಬಳ್ಳಿಯ ಹೊಸ ಪೊಲೀಸ್‌ ಕವಾಯತು ಮೈದಾನದಲ್ಲಿ ಅವುಗಳನ್ನು ನಿಷ್ಕ್ರೀಯಗೊಳಿಸಿತು.
 

click me!