ನನ್ನ ಬಳಿ ದೇಶ ಸುಧಾರಿಸುವ ಐಡಿಯಾಗಳಿವೆ. ಅವುಗಳನ್ನು ಹೇಳಬೇಕು ಅಂದ್ರೆ ನನಗೆ ಜಿಲ್ಲಾಧಿಕಾರಿ ಹುದ್ದೆ ಕೊಡಿ ಎಂದು ಯುವಕನೊಬ್ಬ ವಿಚಿತ್ರ ಬೇಡಿಕೆ ಇಟ್ಟ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಧಾರವಾಡ (ಆ.2): ನನ್ನ ಬಳಿ ದೇಶ ಸುಧಾರಿಸುವ ಐಡಿಯಾಗಳಿವೆ. ಅವುಗಳನ್ನು ಹೇಳಬೇಕು ಅಂದ್ರೆ ನನಗೆ ಜಿಲ್ಲಾಧಿಕಾರಿ ಹುದ್ದೆ ಕೊಡಿ ಎಂದು ಯುವಕನೊಬ್ಬ ವಿಚಿತ್ರ ಬೇಡಿಕೆ ಇಟ್ಟ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಶಿವಾಜಿ ಗಾಯಕವಾಡ(Shivaji Gaikwad), ವಿಚಿತ್ರ ಬೇಡಿಕೆ ಇಟ್ಟ ಯುವಕ. ಮೂಲತಃ ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದವನಾದ ಶಿವಾಜಿ ಗಾಯಕವಾಡ ಬಿಎ ಪದವಿಧರನಾಗಿದ್ದು, ಸದ್ಯಕ್ಕೆ ಚಾಲಕ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನೆ. ದೇಶ ಸುಧಾರಿಸಲು ಇವನ ಬಳಿ ಐಡಿಯಾಗಳಿವೆಯಂತೆ. ಆ ಕ್ರಮಗಳನ್ನ ಯಾರ ಮುಂದೆಯೂ ಹೇಳೊಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿಯಾಗಬೇಕು, ಅವರ ಮುಂದೆಯೇ ಹೇಳುತ್ತೇನೆ ಎನ್ನುತ್ತಿದ್ದಾನೆ. ದೇಶದ ಪ್ರಧಾನಿ ಭೇಟಿ ಮಾಡಲು ಹೊರಟಿರುವ ಯುವಕ. ಮೊದಲ ಹಂತವಾಗಿ ಧಾರವಾಡ ಡಿಸಿ ಕಚೇರಿ ಎದುರು ಒಬ್ಬಂಟಿಯಾಗಿ ಪ್ರತಿಭಟನೆ ನಡೆಸಿದ್ದಾನೆ.
ಕೊಡಲಿಯಿಂದ ತಾಯಿ ಮೇಲೆಯೇ ಮಗನಿಂದ ಹಲ್ಲೆ! ಮಾನಸಿಕ ಅಸ್ವಸ್ಥನ ಹಿಡಿಯಲು ಪೊಲೀಸರು ಹರಸಾಹಸ!
ಶಿವಾಜಿ ಹೇಳೋದೇನು?
ನನ್ನ ಐಡಿಯಾಗಳನ್ನ ಪ್ರಧಾನಿಯವರಿಗೆ ತಿಳಿಸಬೇಕಿದೆ. ಅದಕ್ಕಾಗಿ ಧಾರವಾಡದಿಂದ ಬೈಕ್ ಮೂಲಕ ಬೆಂಗಳೂರಿಗೆ ಹೋಗುತ್ತೇನೆ. ಅಲ್ಲಿಂದ ದೆಹಲಿಗೆ ತೆರಳಿ ಪ್ರಧಾನಿ ಮೋದಿಯವರನ್ನ ಭೇಟಿಯಾಗುತ್ತೇನೆ. ಪ್ರಧಾನಿ ಮುಂದೆ ನನ್ನ ಐಡಿಯಾಗಳನ್ನು ಹೇಳುತ್ತೇನೆ. ನನ್ನ ಐಡಿಯಾಗಳನ್ನ ಜಾರಿ ಮಾಡಿದರೆ ದೇಶಕ್ಕೆ ಶೇ.30ರಷ್ಟು ಲಾಭ ಮಾಡಬಹುದು, ಶೇ.50 ರಷ್ಟು ಜನ ಕಾನೂನು ಪಾಲನೆ ಮಾಡಬಹುದು, ಶೇ.20 ರಷ್ಟು ಸಾವು, ನೋವುಗಳನ್ನು ತಡೆಗಟ್ಟಬಹುದು, ಶೇ.50 ರಷ್ಟು ಭ್ರಷ್ಟಾಚಾರವನ್ನು ತಡೆಗಟ್ಟಬಹುದು, ಈ ದೇಶದ ಮೇಲೆ ಜನರಿಗೆ ದೇಶಭಕ್ತಿ, ಪ್ರೀತಿ ಹೆಚ್ಚಿಸಬಹುದು, ಭಾರತವನ್ನು ಶೇ.50 ರಷ್ಟು ಸ್ವಚ್ಛ ದೇಶವನ್ನಾಗಿ ಪರಿವರ್ತಿಸಬಹುದು ಈ ಎಲ್ಲಾ ಕ್ರಮಗಳನ್ನು ಅನುಸರಿಸಲು ತಮ್ಮ ಬಳಿ ಐಡಿಯಾ ಹಾಗೂ ಉಪಾಯಗಳಿವೆ ಎನ್ನುತ್ತಿರುವ ಶಿವಾಜಿ. ಆದರೆ ಈ ಐಡಿಯಾಗಳು ಈಗ ಹೇಳಿಬಿಟ್ಟರೆ ಬಹಿರಂಗಗೊಳ್ಳುತ್ತವೆ ಹೇಳೊಲ್ಲ. ಪ್ರಧಾನಿ ಮುಂದೆಯೇ ಹೇಳುತ್ತೇನೆ.
ಅಂದ್ಕೊಂಡಂತೆ ಆದ್ರೆ 6 ಹಳ್ಳಿ ಜನರಿಗೆ ತಪ್ಪುತ್ತೆ ನೀರಿನ ಸಮಸ್ಯೆ! ಇಂದಿರಮ್ಮನ ಕೆರೆ ಕಾಮಗಾರಿ ಆರಂಭ ಯಾವಾಗ?
ಡಿಸಿ ಹುದ್ದೆ ಬೇಡಿಕೆ ಇಟ್ಟ ಆಸಾಮಿ!
ನನ್ನ ಐಡಿಯಾಗಳನ್ನ ಕಾರ್ಯರೂಪಕ್ಕೆ ತರಬೇಕಾದರೆ ನನಗೆ ಜಿಲ್ಲಾಧಿಕಾರಿ ಹುದ್ದೆ ನೀಡಬೇಕು ಎಂದು ವಿಚಿತ್ರ ಬೇಡಿಕೆ ಇಟ್ಟಿರುವ ಆಸಾಮಿ. ಓದಿದ್ದು ಬಿಇ, ಜೀವನ ಸಾಗಿಸುತ್ತಿರೋದು ಚಾಲಕ ವೃತ್ತಿ ಮಾಡಿ ಇದೀಗ ಯಾವುದೇ ತಯಾರಿ ಮಾಡದೇ ಡಿಸಿ ಹುದ್ದೆಗೆ ಬೇಡಿಕೆ ಇಟ್ಟಿದ್ದಾನೆ. ಜೊತೆ ದೇಶ ಸುಧಾರಣೆ ಮಾಡುವ ಕ್ರಮಗಳನ್ನ ಪ್ರಧಾನಿ ಮುಂದೆ ಹೇಳಲು ದೆಹಲಿಗೆ ಹೊರಟು ನಿಂತಿರುವ ಆಸಾಮಿ.