133 ರೂ ಮೊಮೊಸ್ ಕಳುಹಿಸದ್ದಕ್ಕೆ ಧಾರವಾಡ ಮಹಿಳೆಗೆ 60 ಸಾವಿರ ಪಾವತಿಸಬೇಕಿದೆ ಜೊಮ್ಯಾಟೋ

By Mahmad RafikFirst Published Jul 13, 2024, 3:45 PM IST
Highlights

ಜೊಮ್ಯಾಟೋ ಆಪ್ ಮುಖಾಂತರ ಮೊಮೊಸ್ ಆರ್ಡ್ ಮಾಡಿ, ಮುಂಗಡವಾಗಿಯೇ 133.25 ರೂಪಾಯಿ ಪಾವತಿಸಿದ್ದರು. ಆರ್ಡರ್ ಮಾಡಿದ 15 ನಿಮಿಷದಲ್ಲಿಯೇ ನಿಮ್ಮ ಆಹಾರ ತಲುಪಿಸಲಾಗಿದೆ ಎಂಬ ಮಸೇಜ್ ಬಂದಿದೆ.

ಧಾರವಾಡ: ಗ್ರಾಹಕರಿಕೆ ಸರಿಯಾದ ಸಮಯಕ್ಕೆ ಮೊಮೊಸ್ ತಲುಪಿಸುವಲ್ಲಿ ವಿಫಲವಾದ ಹಿನ್ನೆಲೆ ಜೊಮ್ಯಾಟೋಗೆ 60 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಗ್ರಾಹಕಿಗೆ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ. ಜುಲೈ 3ರಂದು ಈ ಆದೇಶ ಹೊರ ಬಂದಿದೆ. 31ನೇ ಆಗಸ್ಟ್ 2023ರಂದು ಧಾರವಾಡ ಮೂಲದ ಶೀತಲ್ ಎಂಬವರು ಜೊಮ್ಯಾಟೋ ಆಪ್ ಮುಖಾಂತರ ಮೊಮೊಸ್ ಆರ್ಡ್ ಮಾಡಿ, ಮುಂಗಡವಾಗಿಯೇ 133.25 ರೂಪಾಯಿ ಪಾವತಿಸಿದ್ದರು. ಆರ್ಡರ್ ಮಾಡಿದ 15 ನಿಮಿಷದಲ್ಲಿಯೇ ನಿಮ್ಮ ಆಹಾರ ತಲುಪಿಸಲಾಗಿದೆ ಎಂದು ಮೆಸೇಜ್ ಶೀತಲ್ ಅವರಿಗೆ ಬಂದಿದೆ.

ಮೆಸೇಜ್ ಬರುತ್ತಿದ್ದಂತೆ ನಮ್ಮ ಮನೆಗೆ ಯಾವುದೇ ಆರ್ಡರ್ ಬಂದಿಲ್ಲ. ಯಾವ ಡೆಲಿವರಿ ಬಾಯ್ ನಮ್ಮ ಮನೆಗೆ ಆಹಾರ ತಲುಪಿಸಿಲ್ಲ ಎಂದು ಶೀತಲ್ ಹೇಳಿದ್ದಾರೆ. ಇನ್ನು ರೆಸ್ಟೊರೆಂಟ್‌ನಲ್ಲಿ ವಿಚಾರಿಸಿದಾಗ ಡೆಲಿವರಿ ಬಾಯ್ ಬಂದು ನಿಮ್ಮ ಆರ್ಡರ್ ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ. ಆನಂತರ ಜೊಮ್ಯಾಟೋ ಮೂಲಕ ಏಜೆಂಟ್ ಸಂಪರ್ಕಿಸಲು ಶೀತಲ್ ಪ್ರಯತ್ನಿಸಿದ್ದಾರೆ, ಆದರೆ ಅದು ಸಾಧ್ಯವಾಗಿಲ್ಲ. ಕೊನೆಗೆ ಇ-ಮೇಲ್ ಮೂಲಕ ಜೊಮ್ಯಾಟೋಗೆ ದೂರು ನೀಡಿದಾಗ, 72 ಗಂಟೆ ಕಾಯುವಂತೆ ಎಂಬ ಪ್ರತಿಕ್ರಿಯೆ ಬಂದಿದೆ. 

Latest Videos

ಜೊಮ್ಯಾಟೋ ಸ್ಪಷ್ಟನೆ ವಿಶ್ವಾಸರ್ಹ ಅಲ್ಲ

72 ಗಂಟೆ ಬಳಿಕ ಜೊಮ್ಯಾಟೋನಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆ ಸೆಪ್ಟೆಂಬರ್ 13, 2023 ರಂದು  ಶೀತಲ್, ಕಾನೂನಿನ ಪ್ರಕಾರ ನೋಟಿಸ್ ಕಳುಹಿಸಿದ್ದಾರೆ. ನ್ಯಾಯಾಲಯದ ಮುಂದೆ ಹಾಜರಾದ ಜೊಮ್ಯಾಟೋ ಪರ ವಕೀಲರು, ಶೀತಲ್ ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂದು ವಾದಿಸಿದ್ದರು. ಗ್ರಾಹಕರ ಸಮಸ್ಯೆ ಆಲಿಸಲು ಜೊಮ್ಯಾಟೋ 72 ಗಂಟೆ ಸಮಯ ಕೇಳಿದೆ. ಆದರೆ ನ್ಯಾಯಲದಯಲ್ಲಿ ಅರ್ಜಿ ಸಲ್ಲಿಕೆಯಾಗುವರೆಗೂ ಜೊಮ್ಯಾಟೋ ಸ್ಪಂದಿಸಿಲ್ಲ. ಹಾಗಾಗಿ ಜೊಮ್ಯಾಟೋ ಸ್ಪಷ್ಟನೆ ವಿಶ್ವಾಸರ್ಹ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. 

ರೀಫಂಡ್‌ ಮಾಡಿದ್ರೆ ಪಾಪ ಹೋಗುತ್ತಾ? ಪನೀರ್ ಬಿರಿಯಾನಿಯಲ್ಲಿ ಚಿಕನ್ ಪೀಸ್‌ ಕಳುಹಿಸಿದ ಜೊಮ್ಯಾಟೋಗೆ ತರಾಟೆ!

60 ಸಾವಿರ ರೂಪಾಯಿ ಪಾವತಿಗೆ ಆದೇಶ

ಶೀತಲ್ ಅವರಿಂದ 133.25 ರೂಪಾಯಿ ಹಣ ಪಡೆದಿರೋದನ್ನು ಜೊಮ್ಯಾಟೋ ಸಹ ಒಪ್ಪಿಕೊಂಡಿತ್ತು. ಜೊಮ್ಯಾಟೋ ಸಮರ್ಪಕ ಸೇವೆಯನ್ನ ನೀಡುವಲ್ಲಿ ವಿಫಲವಾಗಿದ್ದು, ದೂರುದಾರರಿಗೆ ಮಾನಸಿಕವಾವು ನೋವುಂಟು ಮಾಡಿದೆ ಎಂದು ಆಯೋಗ ಹೇಳಿದೆ. ಗ್ರಾಹಕರು ಮಾಡಿದ ಆನ್‌ಲೈನ್ ಆರ್ಡರ್‌ಗಳಿಗೆ ಪ್ರತಿಕ್ರಿಯೆಯಾಗಿ ಜೊಮ್ಯಾಟೋ ಆಹಾರ ಪೂರೈಕೆಯ ವ್ಯವಹಾರ ನಡೆಸುತ್ತದೆ. ಹಣ ಪಡೆದು ರಶೀದಿ ನೀಡಿ ಅಗತ್ಯ ಆಹಾರವನ್ನು ತಲುಪಿಸಿಲ್ಲ. ದೂರುದಾರರಿಗೆ ಪರಿಹಾರ ನೀಡಲು ಜೊಮ್ಯಾಟೋ ಜವಾಬ್ದಾರನಾಗುತ್ತದೆ ಎಂದು ಆಯೋಗ ಹೇಳಿದೆ.  ಇದೇ ಆದೇಶದಲ್ಲಿ ಶೀತಲ್ ಅವರಿಗೆ ಉಂಟಾದ ಅನಾನುಕೂಲತೆ ಹಾಗೂ ಮಾನಸಿಕ ನೋವಿಗೆ ಪರಿಹಾರವಾಗಿ 50,000 ರೂ. ಮತ್ತು ವ್ಯಾಜ್ಯದ ವೆಚ್ಚಕ್ಕೆ 10,000 ರೂ. ಪಾವತಿಸಬೇಕೆಂದು ಹೇಳಿದೆ. 

ಮಧ್ಯಾಹ್ನ ಫುಡ್ ಆರ್ಡರ್ ಮಾಡ್ಬೇಡಿ ಎಂದ ಜೊಮೋಟೋ ಪೋಸ್ಟ್ ವೈರಲ್

click me!