ವಾಹನ ಚಲಾಯಿಸುವಾಗ ಟ್ರಾಫಿಕ್ ನಿಯಮ ಚಾಚೂ ತಪ್ಪದೆ ಪಾಲಿಸಬೇಕು. ಶೋಕಿಗಾಗಿ ರೂಲ್ ಬ್ರೇಕ್ ಮಾಡಿದರೆ ದುಬಾರಿ ದಂಡ ಬೀಳುವುದು ಖಚಿತ. ಇದೀಗ ಯುವಕರಿಬ್ಬರು ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಸೆಲ್ಫಿ ತೆಗೆದು ದುಬಾರಿ ದಂಡಕ್ಕೆ ಗುರಿಯಾಗಿದ್ದಾರೆ.
ಉತ್ತರ ಪ್ರದೇಶ(ಮಾ.31): ನಗರ ಪ್ರದೇಶ, ಪಟ್ಟಣ, ಹೆದ್ದಾರಿಗಳ ಬಹುತೇಕ ಕಡೆಗಳಲ್ಲಿ ಪೊಲೀಸರು ಸಿಸಿಟಿವಿ ಅಳವಡಿಸಿದ್ದಾರೆ. ಹೀಗಾಗಿ ನಿಯಮ ಉಲ್ಲಂಘನೆಗೆ ತಕ್ಕ ಶಿಕ್ಷೆ ನೀಡಲಾಗುತ್ತಿದೆ. ಹೀಗೆ ಟ್ರಾಫಿಕ್ ನಿಯಮ ಗಾಳಿಗೆ ತೂರಿ ಶೋಕಿ ಮಾಡಿದ ಯುವಕರಿಬ್ಬರಿಗೆ ಬರೋಬ್ಬರಿ 7,500 ರೂಪಾಯಿ ದಂಡ ಹಾಕಿದ ಘಟನೆ ನಡೆದಿದೆ.
ಕರ್ನಾಟಕ ಸವಾರನ ನಿಲ್ಲಿಸಿದ ತಮಿಳುನಾಡು ಪೊಲೀಸ್; ಕೇಳಿದ್ದು DL, ವಿಮೆ ಅಲ್ಲ, ಹೃದಯಸ್ಪರ್ಶಿ ಘಟನೆ!
undefined
ಉತ್ತರ ಪ್ರದೇಶದ ಫಿರೋಜಾಬಾದ್ ನಗರದಲ್ಲಿ ಮಾರುತಿ ಎರ್ಟಿಗಾ ಕಾರಿನ ಬಾನೆಟ್ ಮೇಲೆ ಕುಳಿತ ಯುವಕರಿಬ್ಬರು ಸೆಲ್ಫಿ ತೆಗೆದುಕೊಂಡಿದ್ದಾರೆ. ಅರೇ ಇಷ್ಟಕ್ಕೆ ದಂಡ ಯಾಕೆ ಅಂತೀರಾ? ಕಾರಣ ಕಾರು ಚಲಿಸುತ್ತಿರುವಾಗಲೇ ಕಾರಿನ ಬಾನೆಟ್ ಮೇಲೆ ಕುಳಿತು ಪ್ರಯಾಣಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಸೆಲ್ಫಿ ತೆಗೆದುಕೊಂಡ ಶೋಕಿ ಮಾಡಿದ್ದಾರೆ.
200 ರೂಪಾಯಿ ಟ್ರಾಫಿಕ್ ಫೈನ್ ಕೇಸ್ ಗೆಲ್ಲಲು 10,000 ರೂಪಾಯಿ ಖರ್ಚು ಮಾಡಿದ ಉದ್ಯಮಿ!
ಯುವಕರ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಇತ್ತ ಪೊಲೀಸರು ಈ ವಿಡಿಯೋ ಪರಿಶೀಲನೆ ನಡೆಸಿ ಕಾರಿನ ನಂಬರ್ ದಾಖಲಿಸಿಕೊಂಡಿದ್ದಾರೆ. ಬಳಿಕ ಇ ಚಲನ್ ಮೂಲಕ 7,500 ರೂಪಾಯಿ ದಂಡ ವಿಧಿಸಿದ್ದಾರೆ. ಕಾರಿನ ಬಾನೆಟ್ ಮೇಲೆ ಕುಳಿತ ರೋಹಿತ್ ಕುಮಾರ್, ಸಂದೀಪ್ ಕುಮಾರ್ ಹಾಗೂ ಕಾರು ಚಲಾಯಿಸಿದ ಅಜಯ್ ದಿವಾಕರ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ನಿಯಮ ಉಲ್ಲಂಘಿಸಿದ ಈ ವಿದ್ಯಾರ್ಥಿಗಳಿಗೆ ದುಬಾರಿ ದಂಡ ಹಾಕಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಈ ರೀತಿ ಸ್ಟಂಟ್ ಮಾಡಿದರೆ ದಂಡ ಮಾತ್ರವಲ್ಲ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತೆ. ಹೀಗಾಗಿ ಪ್ರತಿಯೊಬ್ಬರು ನಿಯಮ ಮೀರಬಾರದು ಎಂದು ಫಿರೋಜಾಬಾದ್ ಪೊಲೀಸರು ಎಚ್ಚರಿಸಿದ್ದಾರೆ.